For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡ ನಾಮಿನೇಶನ್ ಪಾರ್ಟಿಯಲ್ಲಿ ಮಿಂಚಿದ ನಟ ನಟಿಯರು

  By ಪೂರ್ವ
  |

  'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್ ತನ್ನ ತಾಯಿ ವೈದೇಹಿಯನ್ನೂ ಎಷ್ಟು ಪ್ರೀತಿ ಮಾಡುತ್ತಾರೆಯೋ ಹಾಗೆಯೇ ರಿಯಲ್ ಲೈಪ್ ನಲ್ಲೂ ವೇದಾಂತ್ ತಾಯಿಯಾಗಿ ಅಭಿನಯ ಮಾಡುತ್ತಿರುವ ನಗು ಮುಖದ ಚೆಲುವೆ ಸ್ವಾತಿಯನ್ನು ಕಂಡಾಗಲೆಲ್ಲ ರಕ್ಷ್ ಗೆ ತನ್ನ ತಾಯಿಯ ನೆನಪಾಗಿ ಬಿಡುತ್ತಂತೆ. ಏನೇ ನೋವಾದರೂ.. ಏನೇ ತೊಂದರೆಗಳು ಇದ್ದರೆ ಕೂಡ ಅವರ ಮೊಗದಲ್ಲಿ ನಗು ಮಾಯವಾಗುವುದು ಇಲ್ಲವಂತೆ.

  ನಟ ರಕ್ಷ್, ಈ ವಿಚಾರವನ್ನು ಜೀ ಕನ್ನಡ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅಮ್ಮಂದಿರಿಗೆ ಮೆಡಲ್ ಹಾಕಿ ಗೌರವಿಸುವ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆ ವೇಳೆ ನಟಿಯರ ಸ್ವಂತ ಮಕ್ಕಳೇ ಅವರಿಗೆ ಮೆಡಲ್ ತೊಡಿಸಿದ್ದು ವಿಶೇಷ.

  ಹಿಂದೆ ಚಿಂಟೂ ಟಿವಿ ನಿರೂಪಕಿ..ಈಗ ಗಟ್ಟಿಮೇಳ ಆರತಿ: ಗಗನಾ ಕಿರುತೆರೆ ಜರ್ನಿ ಹೇಗಿತ್ತು..?ಹಿಂದೆ ಚಿಂಟೂ ಟಿವಿ ನಿರೂಪಕಿ..ಈಗ ಗಟ್ಟಿಮೇಳ ಆರತಿ: ಗಗನಾ ಕಿರುತೆರೆ ಜರ್ನಿ ಹೇಗಿತ್ತು..?

  ಅಮ್ಮಂದಿರು ಕೂಡ ಸಖತ್ ಖುಷಿ ಪಟ್ಟರು. ಈ ವೇಳೆ ಮಾತನಾಡಿದ ನಟ ರಕ್ಷ್, ಸೆಟ್ ಅಲ್ಲಿ ಪ್ರತಿ ದಿನ ಬೆಳಗ್ಗೆ ಬಂದು ಒಂದು ಮುಖ ನಗು ನಗುತ್ತಾ ಇರುತ್ತದೆ ಅದು ನಮ್ಮ ಸ್ವಾತಿ ಮೇಡಂ ಬಿಟ್ಟರೆ ಬೇರೆ ಯಾರೂ ಅಲ್ಲ. ಏನೇ ಕಷ್ಟ ಇರಲಿ ಏನೇ ಟೆನ್ಶನ್ ಇರಲಿ ಈ ತಾಯಿ ಮುಖ ನೋಡಿದರೆ ಅದೆಲ್ಲ ಮರೆತು ಹೋಗುತ್ತದೆ. ನಾನು ಇವರನ್ನು ತುಂಬಾ ಪ್ರೀತಿ ಮಾಡುತ್ತೇನೆ ಎಂದಿದ್ದಾರೆ.

  ಜೀ ಕನ್ನಡ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ನಟ ನಟಿಯರು ಸಖತ್ ಆಗಿ ಮಿಂಚಿದ್ದಾರೆ. ವರ್ಷಕ್ಕೆ ಒಂದು ಬಾರಿ ಜನರನ್ನು ಮನರಂಜಿಸವ ನಟ ನಟಿಯರಿಗೆ ಅವಾರ್ಡ್ ಕೊಟ್ಟು ಅವರ ಕಲೆಯನ್ನು ಪ್ರೋತ್ಸಾಹಿಸಿದ ಹಾಗೆ ಎಂಬುವುದು ಎಲ್ಲರ ಭಾವನೆ ಕೂಡ. ಆದ ಕಾರಣ ಸಾಕಷ್ಟು ನಟ ನಟಿಯರು ಈ ಕಾರ್ಯಕ್ರಮದಲ್ಲಿ ಖುಷಿಯಿಂದ ಭಾಗವಹಿಸಿದ್ದಾರೆ ಹಾಗೆಯೇ ಡಾನ್ಸ್ ಮಾಡುವ ಮೂಲಕ ನೆರೆದವರ ಮನಸ್ಸಿಗೆ ಮುದ ನೀಡಿದ್ದಾರೆ.

  ನಟಿಯರಿಗೆ ಅವಾರ್ಡ್ ನೀಡಿದ ಪ್ರೇಮ್

  ನಟಿಯರಿಗೆ ಅವಾರ್ಡ್ ನೀಡಿದ ಪ್ರೇಮ್

  ಇನ್ನು ನಟಿಯರಿಗೆ ನಟ ಪ್ರೇಮ್ ಅವಾರ್ಡ್‌ ನೀಡಿ ಮಾತನಾಡುತ್ತಾರೆ. ಇಲ್ಲಿ ನಿಂತಿರುವ ಎಲ್ಲ ನಟಿಯರು ಕೂಡ ಅವರ ನಿಜ ಹೆಸರಿಗಿಂತ ಧಾರವಾಹಿಯಲ್ಲಿ ಪಾತ್ರಕ್ಕೆ ಇಡುವ ಹೆಸರು ಹೆಚ್ಚಾಗಿ ಫೇಮಸ್ ಆಗಿದೆ. ಇದು ನಿಮಗೆ ಜನರು ಕೊಟ್ಟ ಬಹುದೊಡ್ಡ ಗಿಫ್ಟ್ ಎಂದು ಹೇಳಿದರೆ ತಪ್ಪಾಗದು. ಪಾತ್ರ ದ ಹೆಸರಿನಲ್ಲಿ ಜನರ ಮನರಂಜಿಸುವುದು ಸುಲಭದ ಮಾತಲ್ಲ ಬಹಳ ಖುಷಿ ಆಗುತ್ತದೆ ಎಂದು ಹೇಳಿದ್ದಾರೆ.

  ಅಂಗವೈಕಲ್ಯ ವಿದ್ದರು ಅಮೋಘ ಸಾಧನೆ ಮಾಡಿದ ಪ್ರವೀಣ್

  ಅಂಗವೈಕಲ್ಯ ವಿದ್ದರು ಅಮೋಘ ಸಾಧನೆ ಮಾಡಿದ ಪ್ರವೀಣ್

  ಇನ್ನು ಮೆಡಲ್ ಪಡೆದ ಕೀರ್ತಿ ಪ್ರವೀಣ್ ಅಂಗವಿಕಲ ಆಗಿದ್ದರು ಕೂಡ ತನ್ನ ಪರಿಶ್ರಮ ದಿಂದ ಇಲ್ಲಿ ತನಕ ಆಗಮಿಸಿದ್ದಾರೆ. ಇವರು ಮೂಲತಃ ಬಾದಾಮಿಯವರು. ಕೆಲಸ ಶುರು ಮಾಡಬೇಕು ಎನ್ನುವಾಗ ತನ್ನ ತಂದೆಯೇ ನನಗೆ ಪ್ರೋತ್ಸಾಹ ನೀಡಲಿಲ್ಲ ಇದನ್ನೇ ಬಹುದೊಡ್ಡ ಚಾಲೆಂಜ್ ಆಗಿ ತೆಗೆದುಕೊಂಡು ನಾನು ಸಾಧನೆ ಮಾಡಿದ್ದೇನೆ ಆದರೆ ನಾನು ಏನೇ ಮಾಡಿದರೂ ನನ್ನ ಸಂಸ್ಥೆ ಅದಕ್ಕೆ ಕಾರಣ. ನಾನು ಮಾಡಿದ ಮೆಡಲ್ ನೀವು ಹಾಕಿಕೊಳ್ಳುಟ್ಟಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ.

  ಅವಾರ್ಡ್ ಕೊಟ್ಟು ಸನ್ಮಾನ ಮಾಡಿದ ಜೀ ಕುಟುಂಬ

  ಅವಾರ್ಡ್ ಕೊಟ್ಟು ಸನ್ಮಾನ ಮಾಡಿದ ಜೀ ಕುಟುಂಬ

  ಬಳಿಕ ಪ್ರವೀಣ್ ಅವರಿಗೆ ಜೀ ಕನ್ನಡದ ನಟ ನಟಿಯರು ಆಗಮಿಸಿ ಅವಾರ್ಡ್ ನೀಡಿ ಗೌರವ ಸಲ್ಲಿಸಿದರು. ಈ ವೇಳೆ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನು ಸಿರಿಮನೆ ತಾಯಿ ಪಾತ್ರ ಮಾಡುತ್ತಿರುವ ಪುಷ್ಪ ಅಲಿಯಾಸ್ ಅಪೂರ್ವ ಅವರ ಜೀವನದ ಚಿತ್ರಣವನ್ನು ಅನಾವರಣ ಮಾಡಿದರು. ಅವರ ಸ್ವಂತ ಮಗಳು.. ತನ್ನ ತಾಯಿಗೆ ಯಾರ ಬೆಂಬಲ ಕೂಡ ಇರಲಿಲ್ಲ. ಆಕೆಗೆ ಏನಾದರು ಸಾಧನೆ ಮಾಡಬೇಕು ಎಂಬುವುದು ಅವರ ಆಸೆ ಆದರೆ ಅವರಿಗೆ ಉತ್ತಮ ನಟನೆ ಮಾಡಲು ಅವಕಾಶ ಸಿಕ್ಕರೂ ಅವರಿಗೆ ಉತ್ತಮ ಸಂಭಾವನೆ ಸಿಗುತ್ತಿರಲಿಲ್ಲ.

  ಅಪೂರ್ವ ಕಥೆ ಬಿಚ್ಚಿಟ್ಟ ಮಗಳು

  ಅಪೂರ್ವ ಕಥೆ ಬಿಚ್ಚಿಟ್ಟ ಮಗಳು

  ಚಿಕ್ಕ ವಯಸ್ಸಿನಿಂದಲೇ ನನ್ನ ಅಮ್ಮ ಬಹಳ ಕಷ್ಟಪಟ್ಟಿದ್ದಾರೆ. ಈಗ ಐದು ವರ್ಷ ಆರು ವರುಷಗಳಿಂದ ಆಕೆ ಕೊಂಚ ಖುಷಿ ಆಗಿರುವುದನ್ನು ನಾವು ನೋಡುತ್ತಿದ್ದೇವೆ. ಅವರು ಕಷ್ಟ ಪಡುತ್ತಿದ್ದಾರೆ ಅಲ್ವಾ ಅದು ಸಾರ್ಥಕ ಆಯಿತು. ಎನ್ನುವ ಭಾವನೆ ಇದು ನಮ್ಮ ಜೀವನದಲ್ಲಿ. ಹಾಗಾಗಿ ಬಹಳ ಖುಷಿ ಇದೆ. ಬಹಳ ಕಷ್ಟ ಪಡುತ್ತಾರೆ. ನೋಡಿದವರೆಲ್ಲ ಇವರು ಬಹಳ ಒಳ್ಳೆ ಕಲಾವಿದೆ ಎಂದು ಹೇಳುತ್ತಾರೆ ಅದಕ್ಕೆ ತಕ್ಕಂತೆ ರೆಮ್ಯುನರೇಶನ್ ಇವರಿಗೆ ಸಿಗದ ಕಾರಣ ಆಕೆಗೆ ಬಹಳ ಕಷ್ಟ ಆಗುತ್ತದೆ. ಆದರೆ ಈ ಜೊತೆ ಜೊತೆಯಲಿ ಧಾರವಾಹಿ ಶುರು ಆದಾಗಿನಿಂದ ನನ್ನ ಅಮ್ಮ ಬಹಳ ಖುಷಿ ಇದ್ದಾರೆ ಎಂದು ಮನದ ನೋವನ್ನು ಹಂಚಿಕೊಂಡರು.

  English summary
  Kannada serial Zee Kannada Kutumba award nomination party function. Know more about it.
  Tuesday, October 18, 2022, 10:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X