For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ಸೂಪರ್ ಹಿಟ್ ಚಿತ್ರ 'ಯಜಮಾನ' ಪ್ರಸಾರ ದಿನಾಂಕ ಬಹಿರಂಗ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಹಿರಿತೆಯಲ್ಲಿ ಧೂಳ್ ಎಬ್ಬಿಸಿ ಈಗ ಕಿರುತೆರೆಯಲ್ಲಿ ಅಬ್ಬರಿಸಲು ಸಜ್ಜಾಗಿದೆ. ಶತದಿನೋತ್ಸವವನ್ನು ಆಚರಿಸಿ ಸಂಭ್ರಮದಿಂದ ಬೀಗಿದ್ದ ಯಜಮಾನ ಈಗ ಟಿವಿಯಲ್ಲಿ ಪ್ರಸಾರವಾಗುತ್ತಿವುದು ಡಿ ಬಾಸ್ ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಿದೆ.

  ಅಂದ್ಹಾಗೆ ಈಗಾಗಲೆ 'ಯಜಮಾನ' ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಅಗುತ್ತಿದೆ ಎನ್ನುವ ವಿಚಾರ ಎಲ್ಲರಿಗು ಗೊತ್ತಿತ್ತು. ಆದ್ರೆ ಯಾವ ದಿನ ಎಂದು ಕುತೂಹಲದಿದಂದ ಕಾಯುತ್ತಿದ್ದರು ಕಿರುತೆರೆ ಅಭಿಮಾನಿಗಳು. ಆದ್ರೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಯಾಕಂದ್ರೆ 'ಯಜಮಾನ' ಸಿನಿಮಾ ಮುಂದಿನ ತಿಂಗಳು ಅಂದ್ರೆ 'ಆಗಸ್ಟ್ 11'ಕ್ಕೆ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

  'ಯಜಮಾನ' ಚಿತ್ರದ ನೆನಪಿನ ಕಾಣಿಕೆ ಪಡೆದ ದರ್ಶನ್ ಪುತ್ರ

  'ಯಜಮಾನ' ಸಿನಿಮಾ ಮಾರ್ಚ್ 1 ರಂದು ಬಿಡುಗಡೆಯಾಗಿತ್ತು. ರಿಲೀಸ್ ಆದ ನಾಲ್ಕು ತಿಂಗಳುಗಳ ನಂತರ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗಳಿಕೆ ಮಾಡಿತ್ತು. ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು.

  ಇನ್ನು ವಿಶೇಷ ಪಾತ್ರದಲ್ಲಿ ತಾನ್ಯ ಹೋಪ್ ಮಿಂಚಿದ್ದಾರೆ. ಬಸಣ್ಣಿ ಹಾಡಿನ ಮೂಲಕ ಎಲ್ಲರ ಮನಗೆದ್ದಿರುವ ತಾನ್ಯಾ ಈಗ ಸ್ಯಾಂಡಲ್ ವುಡ್ ಬಸಣ್ಣಿ ಅಂತಾನೆ ಖ್ಯಾತಿ ಗಳಿಸಿದ್ದಾರೆ. ಚಿತ್ರಕ್ಕೆ ಸಂಗೀತ ನಿರ್ದೇಶಕ ವಿ ಕರಿಕೃಷ್ಣ ಮತ್ತು ಪಿ ಕುಮಾರ್ ನಿರ್ದೇಶಕ ಮಾಡಿದ್ದಾರೆ. ಹಿರಿತೆರೆಯಲ್ಲಿ ಧೂಳ್ ಎಬ್ಬಿಸಿ ಅಭಿಮಾನಿಗಳನ್ನು ರಂಜಿಸಿದ್ದ 'ಯಜಮಾನ' ಈಗ ಎಲ್ಲರ ಮನೆಗೆ ಎಂಟ್ರಿ ಕೊಡುವುದನ್ನು ನೋಡಲು ಕಾತಿರರಾಗಿದ್ದಾರೆ.

  English summary
  Kannada super hit movie Yajamana wiil world television premiered on August 11. Kannada actor starrer Yajamana film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X