twitter
    For Quick Alerts
    ALLOW NOTIFICATIONS  
    For Daily Alerts

    ಸುಧಾ ಮೂರ್ತಿ ಅವರ ಗುಣಗಾನ ಮಾಡಿದ ಟ್ರೋಲ್ ಪೇಜ್ ಗಳು

    |

    Recommended Video

    Weekend With Ramesh Season 4 : ನಾರಾಯಣ ಮೂರ್ತಿ ದಂಪತಿಗಳಿಗೆ ಟ್ರೋಲ್ ಪೇಜ್ ಗಳು ಹೇಳಿದ್ದೇನು ಗೊತ್ತಾ..?

    ಕಳೆದ ವಾರ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಸಾಧಕರ ಕುರ್ಚಿಗೆ ನಿಜವಾದ ಅರ್ಥ ಬಂದಿತ್ತು ಎನ್ನುವುದು ಅನೇಕರ ಮೆಚ್ಚುಗೆ. ಯಾಕಂದ್ರೆ ಕನ್ನಡಿಗರ ಹೆಮ್ಮೆಯ ಸಾಧಕರರು, ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ವೀಕೆಂಡ್ ಕುರ್ಚಿಯ ಮೇಲೆ ಇದ್ದರು.

    ಸುಧಾ ಮೂರ್ತಿ ದಂಪತಿಯನ್ನು ಸಾಧಕರ ಕುರ್ಚಿ ಮೇಲೆ ನೋಡುವುದು ಅನೇಕರ, ಅನೇಕ ದಿನಗಳ ಕನಸಾಗಿತ್ತು. ಪ್ರೇಕ್ಷಕರ ಈ ಕನಸನ್ನು ನನಸು ಮಾಡಿದೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ.

    ಚಪ್ಪಲಿ ಎಸೆದರೂ ದೇವದಾಸಿಯರ ಬದುಕು ಬದಲಿಸಿದ ಸುಧಾಮೂರ್ತಿ ಚಪ್ಪಲಿ ಎಸೆದರೂ ದೇವದಾಸಿಯರ ಬದುಕು ಬದಲಿಸಿದ ಸುಧಾಮೂರ್ತಿ

    ಇಬ್ಬರ ಸಾಧನೆ, ಸರಳತೆ, ಮುತ್ತಿನಂತ ಮಾತಗಳು ಅನೇಕರಿಗೆ ಸ್ಫೂರ್ತಿದಾಯಕವಾಗಿತ್ತು. ಇಸ್ಫೋಸಿಸ್ ಸಂಸ್ಥೆ ಕಟ್ಟಲು ಪಟ್ಟ ಶ್ರಮ, ತ್ಯಾಗ, ಕೋಟಿ ಕೋಟಿ ಗಳಿಸಿದ ನಂತರವು ಸರಳವಾಗಿ ಬದುಕು ಸಾಗಿಸುತ್ತ, ಕಷ್ಟದಲ್ಲಿ ಇದ್ದವರಿಗೆ ಸಹಾಯ ಹಸ್ತ ಚಾಚುತ್ತ ಜೀವಿಸುತ್ತಿರುವ ರೀತಿ ಪ್ರತಿಯೊಬ್ಬರಿಗೂ ಪ್ರೇರಣೆ. ಸುಧಾ ಮೂರ್ತಿ ದಂಪತಿಯ ಈ ಎಪಿಸೋಡ್ ಮತ್ತು ಅವರ ಸರಳತೆಗೆ ಟ್ರೋಲ್ ಪೇಜ್ ಗಳು ಮಾಡಿದ ಗುಣಗಾನ ವೈರಲ್ ಆಗಿವೆ.ಮುಂದೆ ಓದಿ..

    ಹಣ ಇಲ್ಲದೆ ಇದ್ದಾಗ ಮಕ್ಕಳನ್ನು ಸಾಕುವುದು ಸುಲಭ

    ಹಣ ಇಲ್ಲದೆ ಇದ್ದಾಗ ಮಕ್ಕಳನ್ನು ಸಾಕುವುದು ಸುಲಭ

    ಸುಧಾ ಮೂರ್ತಿ ಅವರ ಒಂದೊಂದು ಮಾತುಗಳು ಸಹ ಸ್ಪೂರ್ತಿದಾಯಕವಾಗಿವೆ. ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ. ಕೋಟಿ ಕೋಟಿಗೆ ಒಡೆಯರಾಗಿರುವ ಇವರಿಗೆ ಜೀವನದ ನಿಜವಾದ ಅರ್ಥ ತಿಳಿದಿದೆ. "ಹಣ ಇಲ್ಲದೇ ಇದ್ದಾಗ ಮಕ್ಕಳನ್ನು ಸಾಕುವುದು ತುಂಬಾ ಸುಲಭ. ಆದ್ರೆ ಹಣ ಇದ್ದಾಗ ಮಕ್ಕಳನ್ನು ಸಾಕೋದು ತುಂಬಾನೆ ಕಷ್ಟ" ಎಂದು ಹೇಳಿರುವ ಮಾತು ಸಿಕ್ಕಾಪಟ್ಟೆವೈರಲ್ ಆಗುತ್ತಿದೆ.

    ರಾಜ್ಯಕ್ಕೆ 4ನೇ Rank ಪಡೆದಿದ್ದ ನಾರಾಯಣಮೂರ್ತಿ ಬಳಿ ತಂದೆ ಹೀಗೆ ಹೇಳಿದ್ದರಂತೆ.! ರಾಜ್ಯಕ್ಕೆ 4ನೇ Rank ಪಡೆದಿದ್ದ ನಾರಾಯಣಮೂರ್ತಿ ಬಳಿ ತಂದೆ ಹೀಗೆ ಹೇಳಿದ್ದರಂತೆ.!

    ಮೂರು ಲಕ್ಷ ಕೋಟಿಯ ಒಡತಿ ಬಳಿ ಇಲ್ಲ ಒಡವೆ

    ಮೂರು ಲಕ್ಷ ಕೋಟಿಯ ಒಡತಿ ಬಳಿ ಇಲ್ಲ ಒಡವೆ

    ಮಹಿಳೆಯರು ಒಡವೆ ಪ್ರಿಯರು ಎಂದರೆ ತಪ್ಪಾಗಲ್ಲ. ಆದ್ರೆ ಸುಧಾ ಮೂರ್ತಿ ಅವರು ಹಾಗಲ್ಲ. ಎಲ್ಲಾ ಮಹಿಳೆಯರಿಗಿಂತ ಭಿನ್ನ. "ಮೂರು ಲಕ್ಷ ಕೋಟಿಯ ಒಡತಿಯಾದರೂ ಒಂದು ಗ್ರಾಂ ಬಂಗಾರ ತೊಟ್ಟಿಲ್ಲ, ಬಿಳಿಯ ಕೂದಲಿಗೆ ಬಣ್ಣ ಹಚ್ಚಿಲ್ಲ ಆಡಂಬರದ ಬದುಕಿಗೆ ಅವಕಾಶವೇ ಇಲ್ಲ. ಸರಳತೆಗೆ ಇನ್ನೇನು ಹೆಸರು"

    ಸರ್ಕಾರಿ ಶಾಲೆಯಲ್ಲೆ ವಿದ್ಯಾಭ್ಯಾಸ

    ಸರ್ಕಾರಿ ಶಾಲೆಯಲ್ಲೆ ವಿದ್ಯಾಭ್ಯಾಸ

    ಸುಧಾ ಮೂರ್ತಿ ಅವರು 10ನೇ ತರಗತಿಯವರೆಗು ಸರ್ಕಾರಿ ಶಾಲೆಯಲ್ಲೆ ಓದಿದ್ದು. "ಸರ್ಕಾರಿ ಶಾಲೆಯಲ್ಲಿ ಕಲಿತ್ರೆ ಉದ್ಧಾರ ಆಗಲ್ಲಾ. ಅನ್ನೋವ್ರು ಈ ಜೋಡಿನಾ ಒಮ್ಮೆ ನೋಡಿ, ಇಂಗ್ಲೀಷ್ ಮೀಡಿಯಂ ಅಲ್ಲಿ ಕಲಿತ ನಿಮ್ಮ ಇಂಜಿನಿಯರ್ ಮಕ್ಕಳಿಗೆ ಇವ್ರೆ ಬಾಸ್" ಎಂದು ಒಂದು ಟ್ರೋಲ್ ಪೇಜ್ ಬರೆದುಕೊಂಡ್ರೆ. ಇನ್ನೊಂದು ಟ್ರೋಲ್ ಪೇಜ್ ನಲ್ಲಿ "ಈ ತಾಯಿ ಹತ್ತಿರ ಇರುವ ಆಸ್ತಿಗೆ ಬೆಲೆ ಕಟ್ಟ ಬಹುದು. ಆದ್ರೆ ಈ ಮಹಾ ತಾಯಿಯಲ್ಲಿ ಇರುವ ಗುಣಕ್ಕೆ ಬೆಲೆ ಕಟ್ಟಲಾಗದು" ಎಂದು ಹಾಡಿಹೊಗಳಿದ್ದಾರೆ.

    ನಾರಾಯಣ ಮೂರ್ತಿ 'ಭಾರತದ ರಾಷ್ಟ್ರಪತಿ ಆಗ್ಬೇಕು' ಎನ್ನುವುದು ಇವರ ಆಸೆ ನಾರಾಯಣ ಮೂರ್ತಿ 'ಭಾರತದ ರಾಷ್ಟ್ರಪತಿ ಆಗ್ಬೇಕು' ಎನ್ನುವುದು ಇವರ ಆಸೆ

    ನಾರಾಯಣ ಮೂರ್ತಿ ಮದುವೆ ಆಗುವಾಗ ಏನು ಇರಲಿಲ್ಲ

    ನಾರಾಯಣ ಮೂರ್ತಿ ಮದುವೆ ಆಗುವಾಗ ಏನು ಇರಲಿಲ್ಲ

    ಸುಧಾ ಮೂರ್ತಿ ಅವರು ನಾರಾಯಣ ಮೂರ್ತಿ ಅವರನ್ನು ಮದುವೆಯಾಗುವಾಗ ಪತಿಯ ಬಳಿ ಕೆಲಸ ಕೂಡ ಇರಲಿಲ್ಲ, ಆದ್ರೆ ಅವರ ವ್ಯಕ್ತಿತ್ವ ಮತ್ತು ಸರಳತೆ ನೋಡಿ ಮದುವೆಯಾಗಿದ್ದಾರೆ. ಸುಧಾ ಮೂರ್ತಿ ಅವರ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಹೆಂಗ ವರ್ಣಿಸಲಿ ಅವ್ವಾರ ನಿಮ್ಮ

    ಹೆಂಗ ವರ್ಣಿಸಲಿ ಅವ್ವಾರ ನಿಮ್ಮ

    ಇಂದು ಸಾಧನೆ ಎನ್ನುವ ಉತ್ತುಂಗದ ಶಿಖರದ ತುತ್ತ ತುದಿಯಲ್ಲಿ ನಿಂತಿರುವ ಸುಧಾ ಮೂರ್ತಿ ಅವರು ಹಿರಿಯರಿಗೆ, ಗುರುಗಳಿಗೆ ಕೊಡುವ ಗೌರವ ನೋಡಿ ಇಡೀ ಕರ್ನಾಟಕ ಮೂಕ ಪ್ರೇಕ್ಷಕರಾಗಿ ವೀಕ್ಷಿಸುತ್ತಿದ್ದೆ. "ಅವ್ವರಾ ನಮಗೆಲ್ಲಾ ಮಾದರಿ ರೀ ನೀವಾ ಕುಲಕೋಟಿ ಕನ್ನಡಿಗರಿಂದ ನಿಮಗೆ ನಮಸ್ಕಾರ" ಎಂದು ಉತ್ತರ ಕರ್ನಾಟಕ ಭಾಷೆಯಲ್ಲಿ ಸುಧಾ ಮೂರ್ತಿ ಅವರನ್ನು ಹೊಗಳಿದ್ದಾರೆ.

    ಜನರನ್ನು ಮೆಚ್ಚಿಸಿ ಕುಣಿಸುವುದೆ ಲೇಸು

    ಜನರನ್ನು ಮೆಚ್ಚಿಸಿ ಕುಣಿಸುವುದೆ ಲೇಸು

    "ಹಣವನ್ನು ಎಣಿಸಿ ಎಣಿಸಿ ದಣಿಯುವಕ್ಕಿಂತ, ಜನರನ್ನು ಮೆಚ್ಚಿಸಿ ಕುಣಿಸುವುದೆ ಲೇಸು ಇವರ ಮಾತು ಕೇಳ್ತಿದ್ರೆ ಮೈ ಜುಮ್ ಅನ್ಸುತ್ತೆ ಇಂಥ ಸರಳತೆ" ಹಣದ ಬಗ್ಗೆ ಸುಧಾ ಮೂರ್ತಿ ಅವರು ಹೇಳಿದ ಮಾತುಗಳಿವು. ತುಂಬಿದ ಕೊಡ ತುಳುಕುವುದಿಲ್ಲ ಎಂದು ಇಂಥವರನ್ನೆ ನೋಡಿ ಗಾದೆ ಮಾಡಿರುವುದು ಎಂಬುದ್ರಲ್ಲಿ ಅನುಮಾನವೆ ಇಲ್ಲ.

    ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ

    ಸರಸ್ವತಿ ತಲೆಲಿ ಇದ್ರೆ ಲಕ್ಷ್ಮಿ ಕೈಗೆ ಬರ್ತಾಳೆ

    ಸರಸ್ವತಿ ತಲೆಲಿ ಇದ್ರೆ ಲಕ್ಷ್ಮಿ ಕೈಗೆ ಬರ್ತಾಳೆ

    ವಿದ್ಯೆ ಇದ್ರೆ ಹಣ ಸಂಪಾದನೆ ಕಷ್ಟ ಆಗಲ್ಲ. "ಸರಸ್ವತಿ ತಲೆಲಿ ಇದ್ರೆ ಲಕ್ಷ್ಮಿ ಕೈಗೆ ತಾನಾಗೆ ತಾನ್ ಬರ್ತಾಳೆ". "ದುಡ್ಡು ಇದೆ ಎಂಬ ಕಾರಣಕ್ಕೆ ಇಷ್ಟವಾಗಿದ್ದನ್ನೆಲ್ಲ ಕೊಳ್ಳಬೇಡಿ. ಅವಶ್ಯಕತೆ ಇದ್ದಲ್ಲಿ ಮಾತ್ರ ಕೊಂಡುಕೊಳ್ಳಿ, ಅನವಶ್ಯಕವಾಗಿ ನಾವು ಪೋಲು ಮಾಡುವ ದುಡ್ಡು ಇನ್ನೊಬ್ಬರ ಅವಶ್ಯಕತೆಯನ್ನು ನೀಗಿಸ ಬಹುದು"

    English summary
    Kannada troll pages reaction to Sudha Narayana Murthy speech in Weekend With Ramesh.
    Monday, June 3, 2019, 19:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X