'ಸುಬ್ಬಲಕ್ಷ್ಮಿ' ಪತಿಗೆ ರಿಯಲ್ಲಾಗಿ ಮದುವೆ ಆಗೇಹೋಯ್ತು ಕಣ್ರೀ.!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿ ಮತ್ತು ಕಲರ್ಸ್ ಕನ್ನಡ ವಾಹಿನಿಯ 'ರಕ್ಷಾ ಬಂಧನ' ಸೀರಿಯಲ್ ನಲ್ಲಿ ಅಭಿನಯಿಸಿದ್ದ ಭವಾನಿ ಸಿಂಗ್ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ.

ತಮ್ಮ ಬಹುಕಾಲದ ಗೆಳತಿ ಪಂಕಜಾ ಶಿವಣ್ಣ ಜೊತೆಗೆ ಭವಾನಿ ಸಿಂಗ್ ಸಪ್ತಪದಿ ತುಳಿದಿದ್ದಾರೆ. ಭವಾನಿ ಸಿಂಗ್-ಪಂಕಜಾ ಶಿವಣ್ಣ ವಿವಾಹ ಮಹೋತ್ಸವಕ್ಕೆ ಕಿರುತೆರೆ ಲೋಕದ ಗಣ್ಯರು ಸಾಕ್ಷಿ ಆಗಿದ್ದರು.

ಹಾಗ್ನೋಡಿದ್ರೆ, ಭವಾನಿ ಸಿಂಗ್ ಮತ್ತು ಪಂಕಜಾ ಶಿವಣ್ಣ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಎರಡು ವರ್ಷಗಳಿಂದ ಕ್ಲೋಸ್ ಫ್ರೆಂಡ್ಸ್ ಆಗಿದ್ದ ಭವಾನಿ ಸಿಂಗ್ ಮತ್ತು ಪಂಕಜಾ ಸ್ನೇಹ ಇತ್ತೀಚೆಗಷ್ಟೇ ಪ್ರೀತಿಗೆ ತಿರುಗಿತ್ತು. ತಮ್ಮ ಪ್ರೀತಿಗೆ ಕುಟುಂಬದ ಸಮ್ಮತಿ ಪಡೆದು, ಮದುವೆ ಎಂಬ ಅಧಿಕೃತ ಮುದ್ರೆ ಹಾಕಿಸಿಕೊಂಡಿದ್ದಾರೆ ಈ ಜೋಡಿ.

Kannada TV Actor Bhavani Singh got married to Pankaja Shivanna

'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಭವಾನಿ ಸಿಂಗ್ ಹಾಟ್ ಸೀಟ್ ಮೇಲೆ ಕೂತಾಗಲೂ, ಅವರನ್ನ ಸಪೋರ್ಟ್ ಮಾಡಲು ಪಂಕಜಾ ಆಗಮಿಸಿದ್ದರು.

ರಾಜಸ್ಥಾನ ಮೂಲದವರಾದರೂ ಭವಾನಿ ಸಿಂಗ್ ಬೆಂಗಳೂರಿನಲ್ಲಿ ಬಿಬಿಎಂ ಪದವಿ ಪಡೆದಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡುವ ಭವಾನಿ ಸಿಂಗ್ 'ಚರಣದಾಸಿ', 'ಸುಬ್ಬಲಕ್ಷ್ಮಿ ಸಂಸಾರ', 'ರಕ್ಷಾ ಬಂಧನ' ಸೀರಿಯಲ್ ಗಳಿಂದ ಖ್ಯಾತಿ ಗಳಿಸಿದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಭವಾನಿ ಸಿಂಗ್ ಗೆ ನಮ್ಮ ಕಡೆಯಿಂದಲೂ ಶುಭಾಶಯಗಳು.

More from Filmibeat

English summary
Kannada TV Actor Bhavani Singh of Subbalakshmi Samsara fame got married to Pankaja Shivanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X