Don't Miss!
- News
ಜನವರಿ 26ರಂದು BMTCಯ "ನಿಮ್ ಬಸ್" ಆ್ಯಪ್ ಆರಂಭ, ಉದ್ದೇಶವೇನು?, ಇಲ್ಲಿದೆ ವಿವರ
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ 2023ರ ಹೋಂಡಾ ಸಿಟಿ ಕಾರು
- Finance
ಉದ್ಯೋಗಿಗಳ ಸಂಬಳ ಕಡಿತಕ್ಕೆ ಕರೆ ನೀಡಿದ ಭಾರತೀಯ ಉದ್ಯಮಿ ಯಾರು? ರೊಚ್ಚಿಗೆದ್ದ ನೆಟ್ಟಿಗರು ಏನೆಂದರು?
- Sports
ಶಾಹಿದ್ ಅಫ್ರಿದಿಗೆ ಕೋಕ್; ಪಾಕಿಸ್ತಾನ ತಂಡದ ಆಯ್ಕೆ ಸಮಿತಿಗೆ ಹೊಸ ಮುಖ್ಯಸ್ಥನನ್ನು ನೇಮಿಸಿದ ಪಿಸಿಬಿ
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಾಪ್ ಲಿಸ್ಟ್‌ನಲ್ಲಿರೋ ಕನ್ನಡ ಧಾರಾವಾಹಿಗಳ್ಯಾವುವು? ವೀಕ್ಷಕರ ಆಸಕ್ತಿ ಯಾವ ಸೀರಿಯಲ್ ಕಡೆ?
ಕನ್ನಡದ ಮನರಂಜನಾ ವಾಹಿನಿಗಳು ವೀಕ್ಷಕರನ್ನು ರಂಜಿಸುವುದಕ್ಕೆ ಕಾಂಪಿಟೇಷನ್‌ಗೆ ಬೀಳುತ್ತವೆ. ಪ್ರತಿ ವಾರ ಹೇಗಾದರೂ ಮಾಡಿ ಟಾಪ್ ಬರಲೇ ಬೇಕು ಅಂತ ನಾನಾ ಪ್ರಯತ್ನಗಳಲ್ಲಿ ಧಾರಾವಾಹಿಗಳಲ್ಲಿ ಆಗುತ್ತಲೇ ಇರುತ್ತೆ.
ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ, ಉದಯ ಟಿವಿಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳು ವೀಕ್ಷಕರ ಮನಸ್ಸನ್ನು ಗೆದ್ದಿವೆ. ಇದರಲ್ಲಿ ಕಳೆದ ವಾರ ಯಾವ್ಯಾವ ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದಿವೆ ಅನ್ನೋದನ್ನು ನೋಡೋಣ ಬನ್ನಿ.
Gattimela:
ವೈದೇಹಿ
ವಿರುದ್ಧ
ಪ್ಲ್ಯಾನ್
ಮಾಡಿದ
ಅಗ್ನಿ
ಮತ್ತು
ಚಂದ್ರ

'ಗಟ್ಟಿಮೇಳ'
'ಗಟ್ಟಿಮೇಳ' ಧಾರಾವಾಹಿ ಈ ಬಾರಿ ಟಾಪ್ ಒನ್‌ನಲ್ಲಿ ಸ್ಥಾನವನ್ನು ಪಡೆದಿದೆ. ಟಿಆರ್‌ಪಿಯಲ್ಲಿ 10.2ರಷ್ಟನ್ನು ಪಡೆದುಕೊಂಡಿದೆ. ಇನ್ನೂ ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾವಾಹಿಯನ್ನು ಹಲವಾರು ವೀಕ್ಷಕರು ಇಷ್ಟು ಪಟ್ಟು ನೋಡುತ್ತಿದ್ದಾರೆ. ಈ ಧಾರಾವಾಹಿ ಒಂದು ಕೌಟುಂಬಿಕ ಧಾರಾವಾಹಿಯಾಗಿದೆ. ಪ್ರತಿ ಸಂಚಿಕೆಯಲ್ಲೂ ಸಹ ಒಂದೊಂದು ಟ್ಟಿಸ್ಟ್ ಕೊಟ್ಟು ಜನರಿಗೆ ಮನರಂಜನೆ ನೀಡುತ್ತಿದೆ. ಅಮೂಲ್ಯ ಹಾಗೂ ವೇದಾಂತ್ ಜೋಡಿ ಎಲ್ಲರಿಗೂ ಇಷ್ಟವಾಗುವ ಜೋಡಿಯಾಗಿದೆ. ಇವರಿಬ್ಬರ ಜೋಡಿಗಾಗಿಯೇ , ಕೋಳಿ ಜಗಳಕ್ಕಾಗಿ ವೀಕ್ಷರಕರು ಈ ಧಾರಾವಾಹಿ ನೋಡುತ್ತಿದ್ದಾರೆ.
ರಾಮಾಚಾರಿ:
ಚಾರುವನ್ನು
ಮನೆಗೆ
ಕರೆ
ತಂದ
ರಾಮಾಚಾರಿ!
ಮುಂದೇನು?

'ಪುಟ್ಟಕ್ಕನ ಮಕ್ಕಳು'
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಸಹ ಈ ವಾರದಲ್ಲಿ ಟಾಪ್‌ನಲ್ಲಿದ್ದು, 10.2 ಪಡೆದುಕೊಂಡಿದೆ. ಈ ಧಾರಾವಾಹಿಯಲ್ಲೂ ಸಹ ತಾಯಿ ಗಂಡನಿಂದ ದೂರವಾಗಿ ಮೂರು ಹೆಣ್ಣು ಮಕ್ಕಳನ್ನು ಪಡೆದುಕೊಂಡು ಕಷ್ಟಪಟ್ಟು ಹೇಗೆ ದಡವನ್ನು ಸೇರಿಸುತ್ತಾಳೆ ಎಂಬುದೇ ಧಾರಾವಾಹಿ ಆಶಯವಾಗಿದೆ.

'ಶ್ರೀರಸ್ತು ಶುಭಮಸ್ತು'
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಶ್ರೀರಸ್ತು-ಶುಭವಸ್ತು' ಧಾರಾವಾಹಿ ಈ ಬಾರಿ ಟಾಪ್ 2ನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. 9.2 ಟಿಆರ್‌ಪಿಯನ್ನು ಪಡೆದುಕೊಂಡಿದೆ. ಇದೊಂದು ಕೌಟುಂಬಿಕ ಧಾರಾವಾಹಿಯಾಗಿದೆ. ಇದರಲ್ಲಿ ಬರುವ ಪ್ರತಿಯೊಂದು ಪಾತ್ರವೂ ಸಹ ನಮ್ಮೊಳಗೆ ನಡೆಯುತ್ತಿರುವ ಕಥೆಯೇನೋ ಅನಿಸುತ್ತದೆ. ಅಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ.

'ಸತ್ಯ'
ಈ ಧಾರಾವಾಹಿ ಶುರುವಾದಾಗಿನಿಂದಲೂ ಸಹ ಒಂದಲ್ಲ ಒಂದು ಹೊಸತನದಿಂದ ಕೂಡಿದೆ. ಈ ಧಾರಾವಾಹಿ ಸಹ ಜನರನ್ನು ರಂಜಿಸುವಲ್ಲಿ ಪ್ರಮುಖ ಸ್ಥಾನದಲ್ಲಿದೆ.ಈ ವಾರದ ಟಿಆರ್‌ಪಿಯಲ್ಲಿ 8.4ರಷ್ಟು ಪಡೆದಿದೆ. ಇದು ಸಹ ಕೌಟುಂಬಿಕ ಧಾರಾವಾಹಿ ಆಗಿದ್ದು, ಇದು ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

'ಭಾಗ್ಯಲಕ್ಷ್ಮಿ'
ಟಾಪ್ 4 ನಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಇದ್ದು, ಇದು ಸಹ ಪ್ರೇಕ್ಷಕರನ್ನು ರಂಜಿಸುತ್ತಿದೆ. ಅತ್ತೆ ಹೇಳುವ ರೀತಿ ಸೊಸೆ ಕೇಳುತ್ತಾಳೆ. ಮುಂದೆ ಮತ್ತೊಬ್ಬ ಮಗನಿಗೆ ಸೊಸೆ ತರಲು ಹಿರೋ ತಾಯಿ ಮಾಡುವ ಪ್ರಯತ್ನ ಕಥೆಯ ಜೀವಾಳವಾಗಿದೆ.ಇದು 7.2 ಟಿಆರ್‌ಪಿಯನ್ನು ಪಡೆದುಕೊಂಡಿದೆ.

'ಹಿಟ್ಲರ್ ಕಲ್ಯಾಣ'
ಜೀ ಕನ್ನಡದಲ್ಲಿ ಪ್ರಸಾರವಾಗುವ 'ಹಿಟ್ಲರ್ ಕಲ್ಯಾಣ' ಮೊದಲು ಅತಿ ಹೆಚ್ಚು ಟಿಆರ್‌ಪಿಯನ್ನು ಹೊಂದಿತ್ತು ಹೊಸ ಧಾರಾವಾಹಿಗಳು ಬಂದ ನಂತರ ಇಂದು ನಾಲ್ಕನೇ ಸ್ಥಾನವನ್ನು ಪಡೆದಿದೆ. ಈ ವಾರ ಬಂದ ಟಿಆರ್‌ಪಿಯಲ್ಲಿ 7.2 ಪಡೆಯುವ ಮೂಲಕ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಲೀಲಾ ಮತ್ತು ಎಜೆ ಪಾತ್ರ ಪ್ರಧಾನವಾಗಿದೆ.

'ಕೆಂಡಸಂಪಿಗೆ'
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕೆಂಡ ಸಂಪಿಗೆ ಧಾರಾವಾಹಿ ಅನೇಕ ಪ್ರೇಕ್ಷಕರ ಮನಸನ್ನು ಗೆದ್ದಿದೆ. ಬಡ ಹೆಣ್ಣು ಮಕ್ಕಳ ಹೋರಾಟದ ಬದುಕು ಹೇಗೆ ತಿರುವು ಪಡೆಯುತ್ತದೆ ಎಂಬುದನ್ನು ಈ ಧಾರಾವಾಹಿ ತೋರಿಸುತ್ತದೆ. ಇದು ಈ ವಾರ ಟಾಪ್ 5ನಲ್ಲಿದೆ. 5.9 ಟಿಆರ್‌ಪಿಯನ್ನು ಪಡೆದುಕೊಂಡಿದೆ.

'ಜೊತೆ-ಜೊತೆಯಲಿ'
ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲ್ಲಿ ಧಾರಾವಾಹಿಯ ಪ್ರೇಕ್ಷಕರ ವರ್ಗ ಕೊಂಚ ಕಡಿಮೆಯಾದಂತೆ ಇದೆ. ಇದು ಈ ವಾರದ ಟಿಆರ್‌ಪಿಯಲ್ಲಿ ಟಾಪ್ 6 ಸ್ಥಾನವನ್ನು ಪಡೆದುಕೊಂಡಿದೆ. 5.5 ಟಿಆರ್‌ಪಿಯನ್ನು ಹೊಂದಿದ್ದು, ಜನರು ಈಗಲೂ ಸಹ ಜೊತೆ ಜೊತೆಯಲ್ಲಿ ಧಾರಾವಾಹಿ ನೋಡುತ್ತಿದ್ದಾರೆ ಎಂಬುದಕ್ಕೆ 'ಜೊತೆಜೊತೆಯಲಿ' ಸೀರಿಯಲ್ ಸಾಕ್ಷಿಯಾಗಿದೆ.

'ಪಾರು'
ಜೀ ಕನ್ನಡದಲ್ಲಿ ಪ್ರಸಾರವಾಗುವ ಪಾರು ಧಾರಾವಾಯಿಯ ಪಾರ್ವತಿ ಪಾತ್ರ ಇಂದಿಗೂ ಸಹ ಪ್ರೇಕ್ಷಕರಿಗೆ ಇಷ್ಟವಾಗಿದೆ. ಜೊತೆಗೆ ಕೌಟುಂಬಿಕ ಧಾರಾವಾಹಿಯಾಗಿದ್ದು ಅಖಿಲಾಂಡೇಶ್ವರಿಯ ಗಾಂಭೀರ್ಯತೆ ಎಲ್ಲರಿಗೂ ಇಷ್ಟವಾಗಿದೆ. ಈ ವಾರ ಪಾರು ಟಾಪ್ 7 ಸ್ಥಾನವನ್ನು ಪಡೆದುಕೊಂಡಿದೆ.5.3 ಟಿಆರ್‌ಪಿಯನ್ನು ಪಡೆದುಕೊಂಡಿದೆ.

'ಕನ್ನಡತಿ'
ಟಾಪ್ 8 ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡತಿ ಇದ್ದು, ಜನರನ್ನು ರಂಜಿಸುತ್ತಿದೆ. ಇಲ್ಲಿ ಭುವಿ ಪಾತ್ರವೇ ಪ್ರಧಾನವಾಗಿದ್ದು, ಹರ್ಷ ಹಾಗೂ ಭುವಿಯ ಕಾಂಬಿನೇಷನ್ ಚೆನ್ನಾಗಿ ಮೂಡಿ ಬರುತ್ತಿದ್ದು, ಜನರು ಇವರಿಬ್ಬರ ಪಾತ್ರವನ್ನು ಇಷ್ಟುಪಟ್ಟು ನೋಡುತ್ತಿದ್ದಾರೆ. ಇದು ಈ ವಾರದ ಟಿಆರ್‌ಪಿಯಲ್ಲಿ 5.2ನ್ನು ಪಡೆದುಕೊಂಡಿದೆ.

'ಗೀತಾ'
ಟಾಪ್ 9ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗೀತಾ ಧಾರಾವಾಹಿ ಇದ್ದು ಗೀತಾ ಹಾಗೂ ವಿಜಿಯ ಪಾತ್ರ ಇಷ್ಟವಾಗುತ್ತಿದೆ. ಈ ವಾರದ ಟಿಆರ್‌ಪಿಯಲ್ಲಿ 4.9ನ್ನು ಈ ಧಾರಾವಾಹಿ ಪಡೆದುಕೊಂಡಿದೆ. ದಿನಕ್ಕೊಂದು ತಿರುವು ನೀಡುವ ಮೂಲಕ ಧಾರಾವಾಹಿ ಕಥೆ ಸಾಗುತ್ತಿದೆ. ಗೀತಾ ಅತ್ತೆಯನ್ನು ಅಣಿಯಲು ಮಾಡುವ ಯೋಚನೆ ಎಲ್ಲವೂ ಚೆನ್ನಾಗಿ ಮೂಡಿ ಬರುತ್ತಿದೆ.

'ರಾಮಾಚಾರಿ'
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಾಮಾಚಾರಿ ಟಾಪ್ 10ರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ವಾರದ ಟಿಆರ್‌ಪಿಯಲ್ಲಿ 4.5ಯನ್ನು ಪಡೆದಿದೆ. ಈ ಧಾರಾವಾಹಿ ಸಹ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಇದಿಷ್ಟು ಕಳೆದ ವಾರದ ಟಿಆರ್‌ಪಿ ಲೆಕ್ಕಚಾರವಾಗಿದೆ. ಈ ವಾರ ಯಾವ್ಯಾವ ಸೀರಿಯಲ್ ಟಾಪ್‌ನಲ್ಲಿ ಬರಲಿದೆ ಅನ್ನೋದು ಕುತೂಹಲ.