For Quick Alerts
  ALLOW NOTIFICATIONS  
  For Daily Alerts

  ಪುನೀತ್ ಶೋಗೆ ಸವಾಲು ಆಗಲಿದ್ಯಾ ಇನ್ನೊಂದು ವಾಹಿನಿಯ ಈ ಶೋ?

  |

  ಟಿವಿಯಲ್ಲಿ ಒಂದು ಹೊಸ ಶೋ ಬರ್ತಿದೆ ಅಂದ್ರೆ ಉಳಿದ ಶೋಗಳಿಗೆ ಸಹಜವಾಗಿ ಆತಂಕ ಕಾಡುತ್ತೆ. ಅದರಲ್ಲೂ ಅದೇ ಸಮಯದಲ್ಲಿ ಪ್ರಸಾರವಾಗುವ ಬೇರೆ ವಾಹಿನಿಯ ಶೋ ನಿರ್ದೇಶಕರು ಸ್ವಲ್ಪ ಹುಷಾರ್ ಆಗ್ತಾರೆ. ಯಾಕಂದ್ರೆ, ಪೈಪೋಟಿ ಹೆಚ್ಚಾಗುತ್ತೆ.

  ಈಗ ಕಲರ್ಸ್ ಕನ್ನಡದ ವಾಹಿನಿಯಲ್ಲಿ ಕನ್ನಡದ ಕೋಟ್ಯಧಿಪತಿ ಬರ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗ್ತಿದೆ. ಕಳೆದ ಮೂರು ಆವೃತ್ತಿಯಲ್ಲಿ ಪ್ರತಿದಿನ ಟೆಲಿಕಾಸ್ಟ್ ಆಗ್ತಿದ್ದ ಶೋ ಹೊಸ ಚಾನಲ್ ಗೆ ಬಂದ ತಕ್ಷಣ ವಾರಾಂತ್ಯಕ್ಕೆ ಹೋಗಿದೆ.

  'ಕೋಟ್ಯಧಿಪತಿ' ಮಾತ್ರವಲ್ಲ ಪುನೀತ್ ಕೈಯಲ್ಲಿ ಇನ್ನು ಮೂರು ಟಿವಿ ಶೋ ಇದೆ.!

  ಇಂತಹ ಹೊಸ ನಿರ್ಧಾರವನ್ನ ಕಲರ್ಸ್ ಕನ್ನಡ ವಾಹಿನಿ ಅವರು ಮಾಡಿದ್ದು ಯಾಕೆ? ವೀಕೆಂಡ್ ನಲ್ಲಿ ಏಂಟು ಗಂಟೆಗೆ ಶೋ ಬರುವುದರಿಂದ ಈಗ ಪ್ಲಸ್ ಆಗುತ್ತೆ, ಮೈನಸ್ ಆಗಬಹುದು ಎಂಬ ಲೆಕ್ಕಾಚಾರ ಈಗ ಕಿರುತೆರೆ ಲೋಕದಲ್ಲಿ ಚರ್ಚೆಯಾಗ್ತಿದೆ. ಇದೆಲ್ಲದರ ನಡುವೆ ಕೋಟ್ಯಧಿಪತಿ ಶೋಗೆ ಇನ್ನೊಂದು ಕಾರ್ಯಕ್ರಮ ಸವಾಲಾಗಿ ನಿಲ್ಲಬಹುದು ಎಂಬ ನಿರೀಕ್ಷೆ ಇದೆ. ಯಾವುದು ಆ ಶೋ? ಮುಂದೆ ಓದಿ....

  ಕೋಟ್ಯಧಿಪತಿಗೆ ಎದುರಾಳಿ ಯಾರು?

  ಕೋಟ್ಯಧಿಪತಿಗೆ ಎದುರಾಳಿ ಯಾರು?

  ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕೋಟ್ಯಧಿಪತಿ ಬಂದ್ರೆ, ಈ ಕಾರ್ಯಕ್ರಮಕ್ಕೆ ಎದುರಾಳಿಯಾಗುವುದು ಜೀ ಕನ್ನಡ ವಾಹಿನಿಯ ಸರಿಗಮಪ. ಕಳೆದ ಹದಿನೈದು ಆವೃತ್ತಿಗಳಿಂದ ಸಂಗೀತ ಪ್ರಿಯರನ್ನ ರಂಜಿಸುತ್ತಾ ಬಂದಿರುವ ಸರಿಗಮಪ ಪ್ರಸಾರವಾಗುವ ಸಮಯದಲ್ಲೇ ಕೋಟ್ಯಧಿಪತಿ ಬಂದಿರುವುದು ಈಗ ಪೈಪೋಟಿಗೆ ಕಾರಣವಾಗಿದೆ.

  ಕನ್ನಡದ ಕೋಟ್ಯಧಿಪತಿ ಶೋ ಬಗ್ಗೆ ಒಂದು ನಿರಾಸೆ ಸುದ್ದಿ

  ಯಾರಿಗೆ ಪ್ರೇಕ್ಷಕ ಜೈ ಅಂತಾನೆ

  ಯಾರಿಗೆ ಪ್ರೇಕ್ಷಕ ಜೈ ಅಂತಾನೆ

  ಸರಿಗಮಪ ಶೋ ನೋಡುವ ಪ್ರೇಕ್ಷಕರೂ ಕೂಡ ಈಗ ಕೋಟ್ಯಧಿಪತಿ ನೋಡ್ಬೇಕು ಎಂಬ ನಿರೀಕ್ಷೆಯಲ್ಲಿರಬಹುದು. ಒಂದೇ ಸಮಯದಲ್ಲಿ ಎರಡೂ ಶೋಗಳು ಬರುವುದರಿಂದ ಸಹಜವಾಗಿ ಪ್ರೇಕ್ಷಕರ ವರ್ಗ ಇಬ್ಭಾಗವಾಗಬೇಕಿದೆ. ಸರಿಗಮಪ ಶೋನಿಂದ ಕೋಟ್ಯಧಿಪತಿ ಕಡೆಗೆ ಕೆಲವರು ವಾಲಬಹುದು. ಅಥವಾ ಕೋಟ್ಯಧಿಪತಿ ಆಟಕ್ಕೆ ಹೋಗದೇ ಅಲ್ಲೇ ಉಳಿಯಬಹುದು. ಒಟ್ನಲ್ಲಿ ಈ ಎರಡು ಶೋಗಳಿಂದ ಟಿ.ಆರ್.ಪಿ ಲೆಕ್ಕಾಚಾರ ವ್ಯತ್ಯಾಸವಾಗುವುದು ಖಚಿತ.

  ಸುದೀಪ್, ರಮೇಶ್ ನಿರೂಪಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಪುನೀತ್

  ಪುನೀತ್ ಶೋ ವೀಕೆಂಡ್ ಗೆ ಬಂದಿದ್ದು ಯಾಕೆ?

  ಪುನೀತ್ ಶೋ ವೀಕೆಂಡ್ ಗೆ ಬಂದಿದ್ದು ಯಾಕೆ?

  ಕಳೆದ ಮೂರು ಆವೃತ್ತಿಯಲ್ಲಿ ಕನ್ನಡದ ಕೋಟ್ಯಧಿಪತಿ ಶೋ ಪ್ರತಿದಿನವೂ ಪ್ರಸರವಾಗ್ತಿತ್ತು. ಆದ್ರೀಗ ವೀಕೆಂಡ್ ಗೆ ಯಾಕೆ ಹೋಯ್ತು ಎಂದು ನೋಡಿದ್ರೆ, ಅದಕ್ಕೆ ಕಾರಣ ಕಲರ್ಸ್ ಕನ್ನಡ ವಾಹಿನಿಯ ಶೆಡ್ಯೂಲ್. ಪ್ರತಿದಿನ ಟೆಲಿಕಾಸ್ಟ್ ಆಗುವ ಧಾರಾವಾಹಿಗಳಿಗೆ ಉತ್ತಮ ಪ್ರತಿಕ್ರಿಯೆ ಇದೆ. ಹಾಗಾಗಿ, ಅದನ್ನ ನಿಲ್ಲಿಸುವುದಕ್ಕೆ ಮುಂದಾಗಿಲ್ಲ. ರಿಯಾಲಿಟಿ ಶೋ, ಗೇಮ್ ಶೋಗಳನ್ನ ವಾರಾಂತ್ಯದಲ್ಲಿ ಮಾಡುವ ಸಂಪ್ರದಾಯ ಇದೆ. ಸೋ, ವೀಕೆಂಡ್ ಗೆ ಹೋದ್ರೆ ಏನೂ ಸಮಸ್ಯೆ ಇಲ್ಲ ಎಂದು ವಾಹಿನಿಯ ಶೆಡ್ಯೂಲ್ ಮೇಲೆ ನಿರ್ಧಾರ ಮಾಡಲಾಗಿದೆಯಂತೆ.

  ಜೀ ಟಿ.ಆರ್.ಪಿಗೆ ಸೆಡ್ಡು ಹೊಡೆಯುತ್ತಾ ಪುನೀತ್ ಶೋ?

  ಜೀ ಟಿ.ಆರ್.ಪಿಗೆ ಸೆಡ್ಡು ಹೊಡೆಯುತ್ತಾ ಪುನೀತ್ ಶೋ?

  ಟಿ.ಆರ್.ಪಿಯಲ್ಲಿ ಜೀ ಕನ್ನಡ ವಾಹಿನಿಯ ಮುಂದಿದೆ. ಮೊದಲ ಸ್ಥಾನದಲ್ಲಿದ್ದ ಕಲರ್ಸ್ ಕನ್ನಡ ವಾಹಿನಿಯನ್ನ ಹಿಂದಿಕ್ಕಿ ಅಗ್ರಪಟ್ಟಕ್ಕೇರಿತ್ತು. ಇದೀಗ, ಕನ್ನಡದ ಕೋಟ್ಯಧಿಪತಿ ಅಂತಹ ಗೇಮ್ ಶೋವನ್ನ ಬೇರೆ ವಾಹಿನಿಯನ್ನ ತಂದು ಮಾಡ್ತಿರುವುದರ ಹಿಂದೆ ಟಿ.ಆರ್.ಪಿ ರೇಸ್ ಲೆಕ್ಕಾಚಾರ ಕೂಡ ಇರಬಹುದು. ಸೋ ಕಲರ್ಸ್ ವಾಹಿನಿಗೆ ಪುನೀತ್ ಶೋ ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತೆ ಅಂತ ಕಾದು ನೋಡೋಣ.

  English summary
  Power Star puneeth rajkumar Kannadada kotyadhipathi season 4 stats from june 22nd. now, Kannadada kotyadhipathi want to compete with sarigamapa show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X