Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋಟ್ಯಧಿಪತಿಯಲ್ಲಿ ರಾಷ್ಟ್ರೀಯ ಕ್ವಿಜ್ ಮಾಸ್ಟರ್ ಹರ್ಷ ಗಳಿಸಿದ್ದೆಷ್ಟು?
ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ವಾರದಲ್ಲಿ ಹೊಸ ಆರು ಜನ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಒಬ್ಬರಿಗೆ ಮೊದಲ ದಿನ ಆಡಲು ಅವಕಾಶ ಸಿಕ್ತು.
ತಿಪಟೂರು ಮೂಲದ ಹರ್ಷ 'ಫಾಸ್ಟೆಸ್ಟ್ ಫಿಂಗರ್' ಪ್ರಶ್ನೆ ಸುತ್ತಿನಲ್ಲಿ ಅತಿ ವೇಗವಾಗಿ ಉತ್ತರಿಸಿ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವ ಅವಕಾಶ ಪಡೆದುಕೊಂಡರು. ಎಂಟೆಕ್ ಮುಗಿಸಿ ಎಂಜಿನಿಯರ್ ಆಗಿರುವ ಹರ್ಷ ರಾಷ್ಟ್ರೀಯ ಮಟ್ಟದಲ್ಲಿ ಕ್ವಿಜ್ ಮಾಸ್ಟರ್ ಕೂಡ ಆಗಿದ್ದಾರೆ. ಉತ್ತಮ ಆಟ ಆಡುತ್ತಿದ್ದ ಹರ್ಷ ಒಳ್ಳೆಯ ಮೊತ್ತ ಪಡೆದುಕೊಂಡರು. ಆದರೆ, ಕಾಂಗ್ರೆಸ್ ಪಕ್ಷದ ಕುರಿತಾಗಿ ಕೇಳಲಾದ ಒಂದು ಪ್ರಶ್ನೆಯಿಂದ ಹರ್ಷ ಗೊಂದಲಕ್ಕೆ ಸಿಲುಕಿ ಆಟದಿಂದ ನಿರ್ಗಮಿಸಿದರು.
ಕನ್ನಡದ ಕೋಟ್ಯಧಿಪತಿಯಲ್ಲಿ ಭರ್ಜರಿ ಬೇಟೆ ಮಾಡಿದ ಲಾರಿ ಡ್ರೈವರ್ ಈರಪ್ಪ
ಅಷ್ಟಕ್ಕೂ, ಕೋಟ್ಯಧಿಪತಿ ಸ್ಪರ್ಧಿ ಹರ್ಷ ಅವರ ಸೋಲಿಗೆ ಕಾರಣವಾದ ಆ ಕಾಂಗ್ರೆಸ್ ಪಕ್ಷದ ಪ್ರಶ್ನೆ ಯಾವುದು? ಅವರ ಬಳಿ ಇನ್ನು ಎರಡು ಲೈಫ್ ಲೈನ್ ಇದ್ದರೂ ಅವರು ಯಾಕೆ ಬಳಸಿಕೊಂಡಿಲ್ಲ. ಹರ್ಷ ಆಯ್ಕೆಯಾಗಲು ಸಹಕಾರಿಯಾದ ಆ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಯಾವುದು? ಮುಂದೆ ಓದಿ....

ಹರ್ಷಗೆ ಅವಕಾಶ ಕೊಟ್ಟ ಪ್ರಶ್ನೆ
ಚಿಕ್ಕದರಿಂದ ಪ್ರಾರಂಭಿಸಿ ಈ ಸೌರವ್ಯೂಹದ ಕಾಯಗಳನ್ನು ಅವುಗಳ ಗಾತ್ರಕ್ಕೆ ಅನುಗಾಣವಾಗಿ ಏರಿಕೆ ಕ್ರಮದಲ್ಲಿ ಜೋಡಿಸಿ.....?
A ಸೂರ್ಯ
B ಭೂಮಿ
C ಚಂದ್ರ
D ಗುರು
ಸರಿಯಾದ ಉತ್ತರ: C ಚಂದ್ರ, B ಭೂಮಿ, D ಗುರು, A ಸೂರ್ಯ
ಕೋಟ್ಯಧಿಪತಿಯಲ್ಲಿ ಇಂಚರಾ ಆಸೆಗೆ ತಣ್ಣೀರು ಹಾಕಿದ ಮಹಾತ್ಮ ಗಾಂಧಿ ಹತ್ಯೆ ಪ್ರಶ್ನೆ.!

ಎರಡೂ ಸೇಫ್ ಝೋನ್ ದಾಟಿದ್ದರು
ಬಹಳ ಹುಮ್ಮಸ್ಸಿನಿಂದ ಕನ್ನಡದ ಕೋಟ್ಯಧಿಪತಿ ಆಟ ಆಡಿದ ಹರ್ಷ ಅವರು ಕಾನ್ಫಿಡೆನ್ಸ್ ಆಗಿ ಪ್ರಶ್ನೆಗಳಿಗೆ ಉತ್ತರಿಸಿದರು. ಸತತ ಹತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಎರಡು ಸೇಫ್ ಝೋನ್ ಕ್ರಾಸ್ ಮಾಡಿದರು. ಅಲ್ಲಿಗೆ 3.20 ಲಕ್ಷ ತಮ್ಮ ಖಾತೆಯಲ್ಲಿ ಫಿಕ್ಸ್ ಮಾಡಿಕೊಂಡರು.

ಕೈಕೊಟ್ಟ ಹನ್ನೊಂದನೇ ಪ್ರಶ್ನೆ
6.40 ಲಕ್ಷದ ಪ್ರಶ್ನೆ ಎದುರಿಸಿದ ಹರ್ಷ ಅವರು ಗೊಂದಲಕ್ಕೆ ಒಳಗಾದರು. ಕಾಂಗ್ರೆಸ್ ಪಕ್ಷದ ಕುರಿತಾಗಿ ಕೇಳಿದ ಒಂದು ಪ್ರಶ್ನೆಗೆ ಉತ್ತರ ಗೊತ್ತಾಗದೇ ಕೈ ಸುಟ್ಟು ಕೊಂಡರು. ಹಾಗಾಗಿ, 6.40 ಲಕ್ಷದ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟ ಹರ್ಷ ಆಟದಿಂದ ನಿರ್ಗಮಿಸಿದರು.
ಕುಂದಾಪುರದ ಮಂಜುಳಾ ಗೆದ್ದಿದ್ದು ಬರಿ 10 ಸಾವಿರ: ಈಕೆ ಸೋಲಿಗೆ ಇದೇ ಪ್ರಶ್ನೆ ಕಾರಣ

ಯಾವುದು ಆ ಪ್ರಶ್ನೆ?
ಈ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಯಾರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿಲ್ಲ?
A ಮೌಲಾನ ಅಬುಲ್ ಕಲಾಂ ಅಝಾದ್
B ಮದನ್ ಮೋಹನ್ ಮಾಳವೀಯ
C ಮೋತಿಲಾಲ್ ನೆಹರು
D ಸಿ ರಾಜಗೋಪಾಲಾಚಾರಿ
12.5 ಲಕ್ಷ ಗೆದ್ದ ಮೀನುಗಾರ್ತಿ ದೀಪಾ ಎದುರಿಸಿದ ಹದಿಮೂರು ಪ್ರಶ್ನೆಗಳಿವೆ.!

ಸರಿಯಾದ ಉತ್ತರ ಯಾವುದು?
ಹರ್ಷ ಅವರಲ್ಲಿ ಇನ್ನು ಎರಡೂ ಲೈಫ್ ಲೈನ್ ಇತ್ತು. ಫೋನೋ ಫ್ರೆಂಡ್ ಮತ್ತು ಡಬಲ್ ಡಿಪ್ ಇತ್ತು. ಆದರೆ, ಮುಂದಿನ ಹಂತದಲ್ಲಿ ಬೇಕಾಗುತ್ತೆ ಎಂಬ ಕಾರಣಕ್ಕೆ ಹರ್ಷ ಲೈಫ್ ಲೈನ್ ಬಳಸಿಲ್ಲ. D ಸಿ ರಾಜಗೋಪಾಲಾಚಾರಿ ಮತ್ತು B ಮದನ್ ಮೋಹನ್ ಮಾಳವೀಯ ಆಯ್ಕೆಗಳಲ್ಲಿ ಗೊಂದಲವಾಗಿದ್ದ ಹರ್ಷ ಅಂತಿಮವಾಗಿ B ಮದನ್ ಮೋಹನ್ ಮಾಳವೀಯ ಎಂದು ಉತ್ತರಿಸಿದರು. ದುರಾದೃಷ್ಟವಶಾತ್ D ಸಿ ರಾಜಗೋಪಾಲಾಚಾರಿ ಸರಿ ಉತ್ತರ ಆಗಿತ್ತು. ಅಲ್ಲಿಗೆ 6.40 ಲಕ್ಷ ಬದಲು 3.20 ಲಕ್ಷ ಪಡೆದುಕೊಂಡು ಹೋದರು.