Just In
Don't Miss!
- Lifestyle
ವಾಸ್ತು ಪ್ರಕಾರ ನಿಮ್ಮ ಮನೆಯ ಬಣ್ಣ ಈ ರೀತಿ ಇದ್ದರೆ ಒಳ್ಳೆಯದು
- Automobiles
ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ
- News
ಡೊನಾಲ್ಡ್ ಟ್ರಂಪ್ರನ್ನು ಮತ್ತೆ ಕೆಣಕಿದ ಗ್ರೆಟಾ ಥನ್ಬರ್ಗ್
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- Finance
ದಿನದ ಗರಿಷ್ಠ ಮಟ್ಟದಿಂದ 500ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕುಂದಾಪುರದ ಮಂಜುಳಾ ಗೆದ್ದಿದ್ದು ಬರಿ 10 ಸಾವಿರ: ಈಕೆ ಸೋಲಿಗೆ ಇದೇ ಪ್ರಶ್ನೆ ಕಾರಣ
ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಯ ಮೊದಲ ಸ್ಪರ್ಧಿಯಾಗಿದ್ದ ಕುಮಟಾ ಮೂಲದ ದೀಪಾ ಶ್ರೀನಿವಾಸ್ ಅವರು 12.5 ಲಕ್ಷ ಗೆದ್ದರು. ಬಳಿಕ ಎರಡನೇ ಸ್ಪರ್ಧಿ ಬೆಂಗಳೂರು ಮೂಲದ ವಸಂತ್ ಅವರು 1.60 ಲಕ್ಷಕ್ಕೆ ತನ್ನ ಆಟ ಮುಗಿಸಿದರು. ಮೂರನೇ ಸ್ಪರ್ಧಿಯಾಗಿ ಹಾಟ್ ಸೀಟ್ ಗೆ ಆಯ್ಕೆಯಾದ ಕುಂದಾಪುರದ ಮಂಜುಳಾ ಅವರು ಭಾರಿ ನಿರಾಸೆಯೊಂದಿಗೆ ವಾಪಸ್ ಆದರು.
ಹೌದು, ಬಹಳ ಕಾನ್ಫಿಡೆಂಟ್ ಆಗಿ ಹಾಟ್ ಸೀಟ್ ಆಯ್ಕೆಯಾಗಿದ್ದ ಮಂಜುಳಾ ಅವರು ಸುಲಭವಾಗಿ ಮೊದಲ ಸೇಫ್ ಝೋನ್, ಅಂದ್ರೆ ಹತ್ತು ಸಾವಿರ ರೂಪಾಯಿ ಪ್ರಶ್ನೆವರೆಗೂ ಉತ್ತರ ಕೊಟ್ಟರು. ನಂತರ ಏಳನೇ ಪ್ರಶ್ನೆ ನಲವತ್ತು ಸಾವಿರ ರೂಪಾಯಿಗೆ ಉತ್ತರ ಕೊಡಲಾಗದೇ ಸೋಲು ಕಂಡರು.
ಕೋಟ್ಯಧಿಪತಿಯ ಮೊದಲ ಸ್ಪರ್ಧಿಗೆ ಕೈಕೊಟ್ಟ 25 ಲಕ್ಷದ ಆ ಪ್ರಶ್ನೆ ಇದೇ.!
ಕರ್ನಾಟಕ ರಾಜಕೀಯಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಮಂಜುಳಾ ಅವರು ಸ್ವಲ್ಪ ಗೊಂದಲಕ್ಕೆ ಒಳಗಾದರು. ಲೈಫ್ ಲೈನ್ ಬಳಸಿಕೊಂಡರು ಸರಿಯಾದ ಉತ್ತರ ಕೊಡಲು ಸಾಧ್ಯವಾಗಲಿಲ್ಲ. ಅಷ್ಟಕ್ಕೂ, ಮಂಜುಳಾ ಎದುರಿಸಿದ ಏಳನೇ ಪ್ರಶ್ನೆ ಯಾವುದು? ಮುಂದೆ ಓದಿ.....

ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ
ಕನ್ನಡದ ನುಡಿಗಟ್ಟೊಂದು ಬರುವ ಹಾಗೆ ಈ ಪದಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ?
A ಯಲ್ಲಮ್ಮನ
B ಯಾರ್ದೋ
C ದುಡ್ಡು
D ಜಾತ್ರೆ
ನಾಲ್ಕು ಜನರಲ್ಲಿ ಅತಿ ವೇಗವಾಗಿ ಉತ್ತರ ಕೊಟ್ಟ ಮಂಜುಳಾ ಅವರು ಹಾಟ್ ಸೀಟ್ ಗೆ ಆಯ್ಕೆಯಾದರು.
ಸರಿಯಾದ ಕ್ರಮ B ಯಾರ್ದೋ, C ದುಡ್ಡು, A ಯಲ್ಲಮ್ಮನ, D ಜಾತ್ರೆ

ಮಂಜುಳಾಗೆ ಕೈಕೊಟ್ಟ ಪ್ರಶ್ನೆ ಇದೇ
ಸಿದ್ದರಾಮಯ್ಯನವರಿಗಿಂತ ಮೊದಲ ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರೈಸಿದ ಕರ್ನಾಟಕದ ಕಡೆಯ ಮುಖ್ಯಮಂತ್ರಿ ಯಾರು?
A ಎಸ್ ಎಂ ಕೃಷ್ಣ
B ಬಿಎಸ್ ಯಡಿಯೂರಪ್ಪ
C ಎಸ್ ಬಂಗಾರಪ್ಪ
D ದೇವರಾಜ್ ಅರಸ್

ಸರಿಯಾದ ಉತ್ತರ ಯಾವುದು?
ಈ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಾಗದೇ ಮಂಜುಳಾ ಅವರು ಫಿಫ್ಟಿ ಫಿಫ್ಟಿ ಲೈನ್ ಬಳಸಿಕೊಂಡರು. ನಾಲ್ಕು ಆಯ್ಕೆಗಳಲ್ಲಿ ಎರಡು ಉತ್ತರವನ್ನ ಡಿಲೀಟ್ ಮಾಡಲಾಯಿತು. C ಎಸ್ ಬಂಗಾರಪ್ಪ ಮತ್ತು B ಬಿಎಸ್ ಯಡಿಯೂರಪ್ಪ ಆಯ್ಕೆಗಳು ಡಿಲೀಟ್ ಆಯ್ತು. ಉಳಿದ ಎರಡರಲ್ಲಿ ಮಂಜುಳಾ ಅವರು A ಎಸ್ ಎಂ ಕೃಷ್ಣ ಸರಿ ಉತ್ತರ ಎಂದು ಲಾಕ್ ಮಾಡಿದರು. ಆದರೆ, ಅದು ತಪ್ಪು ಉತ್ತರ ಆಗಿತ್ತು. ಸರಿ ಉತ್ತರ D ದೇವರಾಜ್ ಅರಸ್ ಆಗಿತ್ತು.
12.5 ಲಕ್ಷ ಗೆದ್ದ ಮೀನುಗಾರ್ತಿ ದೀಪಾ ಎದುರಿಸಿದ ಹದಿಮೂರು ಪ್ರಶ್ನೆಗಳಿವೆ.!

40 ಸಾವಿರದಿಂದ ಹತ್ತು ಸಾವಿರಕ್ಕೆ ಕುಸಿತ
ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಿದರೇ ಮುಂದಿನ ಹಂತಕ್ಕೆ ಹೋಗಬಹುದಿತ್ತು. ಆದರೆ, ತಪ್ಪು ಉತ್ತರ ಕೊಟ್ಟ ಕಾರಣ ನಲವತ್ತು ಸಾವಿರ ಪ್ರಶ್ನೆಯಿಂದ ಹತ್ತು ಸಾವಿರ ರೂಪಾಯಿಗೆ ಕುಸಿದರು. ಮೊದಲ ಐದು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದ ಕಾರಣ ಮೊದಲ ಸೇಫ್ ಝೋನ್ ದಾಟಿದ್ದರು. ಹಾಗಾಗಿ, ಹತ್ತು ಸಾವಿರ ಕೈಯಲ್ಲಿ ತೆಗೆದುಕೊಂಡು ಹೋದರು.