twitter
    For Quick Alerts
    ALLOW NOTIFICATIONS  
    For Daily Alerts

    'ಕನ್ನಡದ ಕೋಟ್ಯಧಿಪತಿ'ಯಲ್ಲಿ ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸದ ಸೌಮ್ಯ.!

    By Bharath Kumar
    |

    Recommended Video

    Kannadada Kotyadipathi Season 3 : ಕನ್ನಡದ ಕೋಟ್ಯಧಿಪತಿಯಲ್ಲಿ ಸೌಮ್ಯ ಆಟ ಹೇಗಿತ್ತು..!

    'ಕನ್ನಡದ ಕೊಟ್ಯಧಿಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗೋದು ಕಷ್ಟ. ಈ ಹಾಟ್ ಸೀಟ್ ನಲ್ಲಿ ಕೂರಬೇಕು ಎಂದು ಸಾವಿರಾರು ಸಂಖ್ಯೆಯಲ್ಲಿ ಜನರು ಕಾಯುತ್ತಿದ್ದಾರೆ. ನಮಗೊಂದು ಚಾನ್ಸ್ ಸಿಕ್ಕರೇ ಅದನ್ನ ಸದ್ಬಳಕೆ ಮಾಡಿಕೊಳ್ತೀವಿ ಎಂಬ ಗಟ್ಟಿ ನಂಬಿಕೆ ಅವರದ್ದು.

    ಆದ್ರೆ, ಇಂತಹ ಅವಕಾಶ ಸಿಕ್ಕಾಗ ಕೆಲವರು ಸರಿಯಾಗಿ ಬಳಸಿಕೊಳ್ಳಲು ಎನ್ನುವುದು ಬೇಸರ. ಇಂತಹ ಆಟವನ್ನ ನೋಡಿದಾಗ ವೀಕ್ಷಕರಿಗೆ ಒಂದು ಕ್ಷಣ ಕೋಪದ ಜೊತೆ ಬೇಸರವಾಗುತ್ತೆ.

    ಬದಲಾದ ಸಮಯದಲ್ಲಿ ಬರಲಿದೆ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ ಬದಲಾದ ಸಮಯದಲ್ಲಿ ಬರಲಿದೆ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ

    ಇತ್ತೀಚಿಗಷ್ಟೆ ಸೌಮ್ಯ ಎಂಬುವವರು ಕನ್ನಡದ ಕೋಟ್ಯಧಿಪತಿಯ ಹಾಟ್ ಸೀಟ್ ನಲ್ಲಿ ಕೂತಿದ್ದರು. ಬಹುತೇಕ ಎಲ್ಲ ಪ್ರಶ್ನೆಗಳಿಗೂ ಸುಲಭವಾಗಿ, ಸರಳವಾಗಿ ಉತ್ತರ ನೀಡುತ್ತಿದ್ದ ಸೌಮ್ಯ ಒಂದು ಹಂತದಲ್ಲಿ ಯೋಚನೆ ಮಾಡದೆ ತಪ್ಪು ನಿರ್ಧಾರ ತೆಗೆದುಕೊಂಡು ಬಿಟ್ಟರು. ಅದು ಅವರ ಆಟಕ್ಕೆ ಮುಳುವಾಯಿತು. ಅಷ್ಟಕ್ಕೂ, ಸೌಮ್ಯ ಮಾಡಿದ ಎಡವಟ್ಟು ಏನು.? ಏನಾಯಿತು.?

    ಹನ್ನೊಂದನೇ ಪ್ರಶ್ನೆ ವೇಳೆ ಎಡವಟ್ಟು

    ಹನ್ನೊಂದನೇ ಪ್ರಶ್ನೆ ವೇಳೆ ಎಡವಟ್ಟು

    ಹತ್ತು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದ ಸೌಮ್ಯ ಅವರಿಗೆ ಹನ್ನೊಂದನೇ ಪ್ರಶ್ನೆ ಕೇಳಲಾಯಿತು. ಆ ಪ್ರಶ್ನೆ ಇದೇ ನೋಡಿ ''ಇಲ್ಲಿ ಯಾವ ದ್ವೀಪಸಮೂಹದಲ್ಲಿ ಚಾರ್ಲ್ಸ್ ಡಾರ್ವಿನ್ ಗೌರವಾರ್ಥವಾಗಿ ಆತನ ಹೆಸರನ್ನಿಟ್ಟ ದ್ವೀಪ ಇದೆ.?''

    A ಮಲೆ

    B ಹವಾಯಿ ದ್ವೀಪಗಳು

    C ಗ್ಯಾಲಪಗೋಸ್ ದ್ವೀಪಗಳು

    D ಬಹಾಮ ದ್ವೀಪಗಳು

    ಆಟ ಕ್ವಿಟ್ ಮಾಡಿದ ಪಾರ್ವತಿಗೆ ಅಚ್ಚರಿ ನೀಡಿದ ರಮೇಶ್ ಅರವಿಂದ್ಆಟ ಕ್ವಿಟ್ ಮಾಡಿದ ಪಾರ್ವತಿಗೆ ಅಚ್ಚರಿ ನೀಡಿದ ರಮೇಶ್ ಅರವಿಂದ್

    'ಡಬಲ್ ಡಿಪ್' ಯಾಕೆ ಬಳಸಿಲ್ಲ

    'ಡಬಲ್ ಡಿಪ್' ಯಾಕೆ ಬಳಸಿಲ್ಲ

    ಸೌಮ್ಯ ಅವರ ಬಳಿ ಎರಡು ಲೈಫ್ ಲೈನ್ ಇತ್ತು. ಉತ್ತರ ಗೊತ್ತಿಲ್ಲದ ಕಾರಣ ಫೋನ್ ಎ ಫ್ರೆಂಡ್ ಬಳಸಿದರು. ಅದು ವ್ಯರ್ಥವಾಗಿತ್ತು. ನಂತರ ಅವರ ಬಳಿ ಡಬಲ್ ಡಿಪ್ ಆಯ್ಕೆ ಇತ್ತು. ಆದ್ರೆ, ಸೌಮ್ಯ ಅವರು ಈ ಲೈಫ್ ಲೈನ್ ಬಳಸುವ ಯೋಚನೆ ಮಾಡಲೇ ಇಲ್ಲ. ಒಂದು ಉತ್ತರ ತಪ್ಪಾಗಿದ್ದರು, ಇನ್ನೊಂದು ಉತ್ತರ ನೀಡುವ ಅವಕಾಶ ಸಿಕ್ಕಿತ್ತು. ಆದ್ರೆ, ಯಾಕೆ ಬಳಸಿಲ್ಲ ಎನ್ನುವುದೇ ಕುತೂಹಲ.

    ಸ್ವಲ್ಪ ಯಾಮಾರಿದ್ರೆ 'ಕೋಟ್ಯಧಿಪತಿ'ಯಲ್ಲಿ 9 ಲಕ್ಷ ಕಳೆದುಕೊಳ್ಳುತ್ತಿದ್ದ ಆಶಾಬಾಯಿ ಸ್ವಲ್ಪ ಯಾಮಾರಿದ್ರೆ 'ಕೋಟ್ಯಧಿಪತಿ'ಯಲ್ಲಿ 9 ಲಕ್ಷ ಕಳೆದುಕೊಳ್ಳುತ್ತಿದ್ದ ಆಶಾಬಾಯಿ

    ಸೌಮ್ಯ ಕೊಟ್ಟ ಉತ್ತರ

    ಸೌಮ್ಯ ಕೊಟ್ಟ ಉತ್ತರ

    ಲೈಫ್ ಲೈನ್ ಬಾಕಿ ಇದ್ದರೂ, ರಮೇಶ್ ಅರವಿಂದ್ ಅವರು ಅದನ್ನ ಬಳಸಿ ಎಂದು ಸಲಹೆ ನೀಡಿದರೂ, ಬೇಡ ಇದೇ ಉತ್ತರ ಇರಲಿ ಎಂದು ಸೌಮ್ಯ ಅವರು ಆಯ್ಕೆ 'B ಹವಾಯಿ ದ್ವೀಪಗಳು' ಲಾಕ್ ಮಾಡಿದರು. ಕೊನೆಗೆ ಆ ಉತ್ತರ ತಪ್ಪಾಗಿತ್ತು. ಇಲ್ಲಿಗೆ ಸೌಮ್ಯ ಆಟ ಅಂತ್ಯವಾಯಿತು.

    ಸರಿಯಾದ ಉತ್ತರ ಯಾವುದು.?

    ಸರಿಯಾದ ಉತ್ತರ ಯಾವುದು.?

    ಇಲ್ಲಿ ಯಾವ ದ್ವೀಪಸಮೂಹದಲ್ಲಿ ಚಾರ್ಲ್ಸ್ ಡಾರ್ವಿನ್ ಗೌರವಾರ್ಥವಾಗಿ ಆತನ ಹೆಸರನ್ನಿಟ್ಟ ದ್ವೀಪ ಇದೆ.?

    ಈ ಪ್ರಶ್ನೆಗೆ ಸರಿ ಉತ್ತರ ಆಯ್ಕೆ C C ಗ್ಯಾಲಪಗೋಸ್ ದ್ವೀಪಗಳು

    6.40 ಲಕ್ಷ ಗೆಲ್ಲುವ ಚಾನ್ಸ್ ಮಿಸ್

    6.40 ಲಕ್ಷ ಗೆಲ್ಲುವ ಚಾನ್ಸ್ ಮಿಸ್

    ಹನ್ನೊಂದನೇ ಪ್ರಶ್ನೆಗೆ ತಪ್ಪು ಉತ್ತರ ಕೊಡುವ ಮೂಲಕ 6.40 ಲಕ್ಷ ಗೆಲ್ಲುವ ಅವಕಾಶವನ್ನ ಸೌಮ್ಯ ಕಳೆದುಕೊಂಡರು. ಅಲ್ಲಿಗೆ ಸೌಮ್ಯ ಗಳಿಸಿದ್ದು 3.20 ಲಕ್ಷ ರೂಪಾಯಿ.

    'ಡಬಲ್ ಡಿಪ್' ಬಳಸಿದ್ರು ಕಳೆದುಕೊಳ್ಳುತ್ತಿರಲಿಲ್ಲ

    'ಡಬಲ್ ಡಿಪ್' ಬಳಸಿದ್ರು ಕಳೆದುಕೊಳ್ಳುತ್ತಿರಲಿಲ್ಲ

    ಅಂದ್ಹಾಗೆ, ಸೌಮ್ಯ ಅವರು ಡಬಲ್ ಡಿಪ್ ಲೈಫ್ ಲೈನ್ ಬಳಸಿಕೊಂಡರು ತಪ್ಪು ಉತ್ತರ ನೀಡಿದ್ದರು ಗಳಿಸಿದ್ದ ಯಾವುದೇ ಹಣ ಕಳೆದುಕೊಳ್ಳುತ್ತಿರಲಿಲ್ಲ. ಯಾಕಂದ್ರೆ, ಅವರು ಎರಡನೇ ಜಗಲಿಕಟ್ಟೆಯ ಹಂತವನ್ನ ತಲುಪಿದ್ದರು. 3.20 ಲಕ್ಷ ಗ್ಯಾರೆಂಟಿ ಆಗಿತ್ತು. ಹೀಗಾಗಿ, ಲೈಫ್ ಲೈನ್ ವ್ಯರ್ಥ ಮಾಡುವ ಬದಲು ಪ್ರಯತ್ನ ಪಟ್ಟಿದ್ದರೇ ಸರಿ ಉತ್ತರ ನೀಡಬಹುದಿತ್ತೇನೋ, ನಂತರ ಮುಂದಿನ ಪ್ರಶ್ನೆಯಲ್ಲಿ ಆಟ ಕ್ವಿಟ್ ಮಾಡಬಹದಿತ್ತು.?

    English summary
    'Kannadada Kotyadhipathi season 3' contestant sowmya has won 3.20 lakhs rupees.
    Saturday, August 11, 2018, 11:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X