»   » 'ಬಿಗ್ ಬಾಸ್' ಮನೆಗೆ ಬರ್ತಾರೆ ಹೊರನಾಡ ಕನ್ನಡಿಗ.!

'ಬಿಗ್ ಬಾಸ್' ಮನೆಗೆ ಬರ್ತಾರೆ ಹೊರನಾಡ ಕನ್ನಡಿಗ.!

Posted By:
Subscribe to Filmibeat Kannada

ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರೊಬ್ಬರು (ಹೊರನಾಡ ಕನ್ನಡಿಗ) ಈ ಬಾರಿ 'ಬಿಗ್ ಬಾಸ್' ಮನೆ ಪ್ರವೇಶ ಮಾಡ್ತಾರಂತೆ.

ಹಾಗಂತ ಸ್ವತಃ 'ಬಿಗ್ ಬಾಸ್' ಕಾರ್ಯಕ್ರಮದ ನಿರ್ದೇಶಕ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ. ಆದ್ರೆ, ಅವರು 'ಶ್ರೀಸಾಮಾನ್ಯ'ರೋ.? ಅಥವಾ 'ಸೆಲೆಬ್ರಿಟಿ'ಯೋ.? ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.

Kannadiga residing in Mumbai to enter Bigg Boss Kannada 5

ಆರು ಜನ 'ಕಾಮನ್ ಮ್ಯಾನ್'ಗೆ ಒಲಿದ 'ದೊಡ್ಮನೆ' ಅವಕಾಶ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕಾಗಿ ಕರ್ನಾಟಕದ ವಿವಿಧ ಭಾಗಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಹೊರ ರಾಜ್ಯಗಳಲ್ಲಿ ಇರುವ ಕನ್ನಡಿಗರಿಗೂ ಅವಕಾಶ ಮಾಡಿಕೊಡಲಾಗಿದ್ಯಂತೆ.

'ಬಿಗ್ ಬಾಸ್ ಕನ್ನಡ-5': ಈ ಬಾರಿ ಹೊಸದೇನಿದೆ.?

ಒಂದೇ ಮನೆಯಲ್ಲಿ ಕರ್ನಾಟಕದ ವಿವಿಧ ಸಂಸ್ಕೃತಿ, ಆಚಾರ, ವಿಚಾರಗಳನ್ನು ಒಗ್ಗೂಡಿಸಿ ವಿವಿಧತೆಯಲ್ಲಿ ಏಕತೆಯನ್ನು ಹೊರತರುವ ಉದ್ದೇಶ 'ಬಿಗ್ ಬಾಸ್' ತಂಡಕ್ಕಿದೆ.

ಅಂದ್ಹಾಗೆ, ಈ ಬಾರಿ 'ದೊಡ್ಮನೆ'ಯೊಳಗೆ ಯಾರೆಲ್ಲ ಹೋಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಅಕ್ಟೋಬರ್ 15 ರಂದು ಸಂಜೆ ಆರು ಗಂಟೆಗೆ ಲಭ್ಯವಾಗಲಿದೆ.

English summary
A Kannadiga residing in Mumbai to enter Bigg Boss Kannada 5.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada