For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ಕಪಿಲ್ ಶರ್ಮಾ, ಎಪಿಸೋಡ್‌ಗೆ ಎಷ್ಟು ಗೊತ್ತೆ?

  |

  ಕಮಿಡಿಯನ್ ಕಪಿಲ್ ಶರ್ಮಾ ಹಿಂದಿ ಟಿವಿ ದುನಿಯಾದ ಬಹುದೊಡ್ಡ ಸ್ಟಾರ್. ಕಾಮಿಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ವೃತ್ತಿ ಆರಂಭಿಸಿದ ಕಪಿಲ್ ಶರ್ಮಾ ಏರಿದ ಎತ್ತರ ಸಾಮಾನ್ಯದ್ದಲ್ಲ.

  'ಕಾಮಿಡಿ ನೈಟ್ಸ್ ವಿತ್ ಕಪಿಲ್' ಹೆಸರಿನ ಹಾಸ್ಯ ಶೋ ಆರಂಭಿಸಿದ ಕಪಿಲ್ ಶರ್ಮಾ ಏರದಿ ಎತ್ತರ ಸಾಮಾನ್ಯದ್ದಲ್ಲ. ಆ ನಂತರ ಸಂಭಾವನೆ ವಿಷಯಕ್ಕೆ ಚಾನೆಲ್‌ನವರೊಂದಿಗೆ ಜಗಳ ಮಾಡಿ 'ದಿ ಕಪಿಲ್ ಶರ್ಮಾ ಶೋ' ಹೆಸರಿನ ಮತ್ತೊಂದು ಶೋ ಆರಂಭಿಸಿದರು. ಆ ಶೋ ಸಹ ಭರ್ಜರಿಯಾಗಿ ಹಿಟ್ ಆಯಿತು.

  ಇದೀಗ ಯಶಸ್ವಿಯಾಗಿ ನಡೆಯುತ್ತಿರುವ 'ದಿ ಕಪಿಲ್ ಶರ್ಮಾ ಶೋ'ನ ಹೊಸ ಭಾಗ ಪ್ರಾರಂಭವಾಗುತ್ತಿದ್ದು, ಹೊಸ ಎಪಿಸೋಡ್‌ ಆರಂಭಕ್ಕೂ ಮುನ್ನವೇ ಮತ್ತೊಂದು ಬಾರಿ ಕಪಿಲ್ ಶರ್ಮಾ ತಮ್ಮ ಸಂಭಾವನೆ ಏರಿಸಿಕೊಂಡಿದ್ದಾರೆ.

  ಹೊಸ ಸೀಸನ್‌ನಲ್ಲಿ ಹೊಸ ಮುಖಗಳು

  ಹೊಸ ಸೀಸನ್‌ನಲ್ಲಿ ಹೊಸ ಮುಖಗಳು

  ಹೊಸ ಸೀಸನ್‌ನಲ್ಲಿ ಇನ್ನಷ್ಟು ಹೊಸ ಮುಖಗಳು ಹೊಸ ಪಾತ್ರಗಳು, ಭಿನ್ನ ನಿರೂಪಣೆಯೊಂದಿಗೆ ಇನ್ನಷ್ಟು ನಗಿಸಲು ತಯಾರಾಗಿ ಬರುತ್ತಿದ್ದಾರೆ. ಶೋನ ಅತಿಥಿ ಆಗಿರುವ ಅರ್ಚನಾ ಪೂರನ್ ಸಿಂಗ್ ಸಹ ಹೊಸ ಸೀಸನ್‌ನಲ್ಲಿಯೂ ಅತಿಥಿಯಾಗಿ ಮುಂದುವರೆಯಲಿದ್ದಾರೆ.

  ಎಪಿಸೋಡ್‌ಗೆ 50 ಲಕ್ಷ ಸಂಭಾವನೆ

  ಎಪಿಸೋಡ್‌ಗೆ 50 ಲಕ್ಷ ಸಂಭಾವನೆ

  ಇನ್ನು ಹೊಸ ಸೀಸನ್‌ ಆರಂಭಕ್ಕೂ ಮುನ್ನವೇ ತಮ್ಮ ಸಂಭಾವನೆಯನ್ನು ದೊಡ್ಡ ಮಟ್ಟದಲ್ಲಿ ಏರಿಸಿಕೊಂಡಿದ್ದಾರೆ ಕಪಿಲ್ ಶರ್ಮಾ. ಈ ಹಿಂದಿನ ಸೀಸನ್‌ನಲ್ಲಿ ಎಪಿಸೋಡ್‌ ಒಂದಕ್ಕೆ 30 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದ ಕಪಿಲ್ ಶರ್ಮಾ. ಹೊಸ ಸೀಸನ್‌ನಲ್ಲಿ ಎಪಿಸೋಡ್‌ ಒಂದಕ್ಕೆ 50 ಲಕ್ಷ ಸಂಭಾವನೆ ಪಡೆಯಲಿದ್ದಾರೆ.

  ಹಿಂದೆ ವಾರವೊಂದಕ್ಕೆ 60 ಲಕ್ಷ ಸಂಭಾವನೆ

  ಹಿಂದೆ ವಾರವೊಂದಕ್ಕೆ 60 ಲಕ್ಷ ಸಂಭಾವನೆ

  ಕೆಲವು ಸೀಸನ್‌ಗಳ ಹಿಂದೆ ವಾರವೊಂದಕ್ಕೆ 60 ಲಕ್ಷ ಸಂಭಾವನೆ ಪಡೆಯುತ್ತಿದ್ದರು ಕಪಿಲ್ ಶರ್ಮಾ. ಶೋನ ಜನಪ್ರಿಯತೆ ಹೆಚ್ಚಾಗುತ್ತಾ ಹೋದಂತೆ ಎಪಿಸೋಡ್‌ಗೆ 30 ಲಕ್ಷ ಸಂಭಾವನೆಗೆ ಬಂದು ನಿಂತಿತು. ಇದೀಗ ಎಪಿಸೋಡ್‌ ಒಂದಕ್ಕೆ 50 ಲಕ್ಷಕ್ಕೆ ಬಂದಿದ್ದಾರೆ ಕಪಿಲ್ ಶರ್ಮಾ.

  ಹಲವು ಕಮಿಡಿಯನ್‌ಗಳು ಇದ್ದಾರೆ

  ಹಲವು ಕಮಿಡಿಯನ್‌ಗಳು ಇದ್ದಾರೆ

  'ದಿ ಕಪಿಲ್ ಶರ್ಮಾ ಶೋ'ಗೆ ಕಪಿಲ್ ಶರ್ಮಾ, ಸಲ್ಮಾನ್ ಖಾನ್ ಹಾಗೂ ದೀಪಕ್ ಧಾರ್ ಒಟ್ಟಿಗೆ ಬಂಡವಾಳ ಹೂಡಿದ್ದಾರೆ. ಶೋ ಅನ್ನು ಭರತ್ ಕುಕ್ರುತಿ ಹಾಗೂ ಪಂಕಜ್ ಸುಧೀರ್ ಮಿಶ್ರ ನಿರ್ದೇಶನ ಮಾಡಿದ್ದಾರೆ. ಶೋನಲ್ಲಿ ಕೃಷ್ಣ, ಕಿಕು ಶರ್ದಾ, ಭಾರತಿ, ಸುಗಂಧ ಇನ್ನೂ ಹಲವರು ಇದ್ದಾರೆ.

  English summary
  Comedian Kapil sharma raised his remuneration for New season of The Kapil sharma show.
  Thursday, July 1, 2021, 10:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X