»   » ವೈಟ್ ಹಾರ್ಸ್ ಬೆನ್ನೇರಿದ ಕನ್ನಡದ ಕಸ್ತೂರಿ ವಾಹಿನಿ

ವೈಟ್ ಹಾರ್ಸ್ ಬೆನ್ನೇರಿದ ಕನ್ನಡದ ಕಸ್ತೂರಿ ವಾಹಿನಿ

By: ಉದಯರವಿ
Subscribe to Filmibeat Kannada

ಕನ್ನಡಿಗರ ಮೊಟ್ಟಮೊದಲ ವಾಹಿನಿ ಎಂಬ ಹೆಮ್ಮೆಗೆ ಪಾತ್ರವಾಗಿದ್ದ ಕಸ್ತೂರಿ ವಾಹಿನಿ ಇದೀಗ ಬೇರೊಂದು ಸಂಸ್ಥೆಗೆ ಹಸ್ತಾಂತರವಾಗಿದೆ. ಐದು ವರ್ಷಗಳ ಗುತ್ತಿಗೆ ಆಧಾರದ ಮೇಲೆ ವೈಟ್ ಹಾರ್ಸ್ ನೆಟ್ ವರ್ಕ್ ಸರ್ವಿಸ್ ಸಂಸ್ಥೆಗೆ ನೀಡಲಾಗಿದೆ ಎನ್ನುತ್ತವೆ ಮೂಲಗಳು.

ಶೇ.60ರಷ್ಟು ಮನರಂಜನೆ ಹಾಗೂ ಶೇ.40ರಷ್ಟು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಕಸ್ತೂರಿ ವಾಹಿನಿ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದರೂ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದೆ ಇದ್ದದ್ದೇ ಈ ಬೆಳವಣಿಗೆಗೆ ಕಾರಣವಂತೆ. [ಅನಿತಾ ಕುಮಾರಸ್ವಾಮಿ ಪಾತ್ರದಲ್ಲಿ ನಟಿ ಭವ್ಯಾ]

Kasthuri Channel

ಈ ಹಿನ್ನೆಲೆಯಲ್ಲಿ ವಾಹಿನಿಯನ್ನು ಅಭಿವೃದ್ಧಿಪಡಿಸುವ, ಜನರಿಗೆ ಇನ್ನಷ್ಟು ಹತ್ತಿರವಾಗಿಸುವ, ಮತ್ತಷ್ಟು, ಮಗದಷ್ಟು ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳನ್ನು ನೀಡುವ ಉದ್ದೇಶದಿಂದ ವಾಹಿನಿಯನ್ನು ಐದು ವರ್ಷಗಳ ಒಪ್ಪಂದ ಮೇರೆಗೆ ವೈಟ್ ಹಾರ್ಸ್ ಸಂಸ್ಥೆ ತೆಕ್ಕೆಗೆ ನೀಡಲು ಕಾರಣ ಎನ್ನಲಾಗಿದೆ.

ಐದು ವರ್ಷಗಳ ಕಾಲ ಕಸ್ತೂರಿ ವಾಹಿನಿಯನ್ನು ವೈಟ್ ಹಾರ್ಸ್ ಸಂಸ್ಥೆ ಮುನ್ನಡೆಸಲಿದೆ. ಇನ್ನು ಮುಂದೆ ಕಸ್ತೂರಿ ವಾಹಿನಿ ವೀಕ್ಷಕರು ಹೊಸ ಹೊಸ ಕಾರ್ಯಕ್ರಮಗಳು, ಧಾರಾವಾಹಿಗಳು, ರಿಯಾಲಿಟಿ ಶೋ, ಚಾಟ್ ಶೋಗಳನ್ನು ನಿರೀಕ್ಷಿಸಬಹುದು.

ಏಳು ವರ್ಷಗಳ ಹಿಂದೆ ಆರಂಭವಾದ ಕಸ್ತೂರಿ ವಾಹಿನಿ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಮಕ್ಕಳಲ್ಲಿನ ಗಾಯನ ಪ್ರತಿಭೆಯನ್ನು ಹೊರತಂದ ಸಪ್ತಸ್ವರ, ಕಾಮಿಡಿ ಶೋ ನಕರಾ ಬಕರಾ, ಸಿಟಿಜನ್ ನಂತಹ ರಿಯಾಲಿಟಿ ಶೋ, ಗೇಮ್ ಶೋ ಬಂಗಾರ ಬೇಟೆ, ಸೀರೆ ಬೇಕಾ ಸೀರೆ, ನಾನೇ ರಾಜಕುಮಾರಿಯಂತಹ ವೈವಿಧ್ಯಮಯ ಶೋಗಳ ಮೂಲಕ ಕಸ್ತೂರಿ ವಾಹಿನಿ ಮನೆಮತಾಗಿದೆ.

English summary
Kasturi Media Private Limited owned Kananda general entertainment channel Kasthuri hand overs on five years contract to Whitehorse Network Services. The channel managed by Anitha Kumaraswamy, wife of the ex-chief minister of Karnataka, H. D. Kumaraswamy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada