For Quick Alerts
  ALLOW NOTIFICATIONS  
  For Daily Alerts

  ಪತಿ ರಣ್ವೀರ್ ಸಿಂಗ್ ಕುರಿತು ಅಮಿತಾಬ್ ಬಳಿ ದೂರು ಹೇಳಿದ ನಟಿ ದೀಪಿಕಾ ಪಡುಕೋಣೆ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗ್ ಕರೋಡ್ ​ಪತಿ 13ನೇ ಶೋ ಯಶಸ್ವಿಯಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೆ ಕ್ರಿಕೆಟ್ ದಿಗ್ಗಜರಾದ ಸೌರವ್ ಗಂಗೂಲಿ ಮತ್ತು ವಿರೇಂದ್ರ ಸೆಹ್ವಾಗ್ ಕೌನ್ ಬನೇಗಾ ಕರೋಡ್ ​ಪತಿ 13ನೇ ಸೀಸನ್ ​ನಲ್ಲಿ ಭಾಗಿಯಾಗಿದ್ದರು. ಸೆಲೆಬ್ರಿಟಿ ಸಂಚಿಕೆಯಲ್ಲಿ ಇಬ್ಬರು ಖ್ಯಾತ ಕ್ರಿಕೆಟ್ ಆಟಗಾರರು ಹಾಟ್ ಸೀಟಿನಲ್ಲಿ ಕುಳಿತು ಉತ್ತಮ ಆಟ ಆಗಿದ್ದರು. ಇದೀಗ 2ನೇ ವಾರ ಬಾಲಿವುಡ್​ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕಿ, ನೃತ್ಯ ಸಂಯೋಜಕಿ ಫರ್ಹಾ ಖಾನ್ ಹಾಟ್ ಸೀಟ್ ನಲ್ಲಿ ಕುಳಿತಿದ್ದಾರೆ.

  ಇಬ್ಬರು ಸೆಲೆಬ್ರಿಟಿಗಳು ಹಾಟ್ ಸೀಟಿನಲ್ಲಿ ಕುಳಿತು ಆಟವಾಡುವ ಜೊತೆಗೆ ಅಚ್ಚರಿಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಮತ್ತು ಫರ್ಹಾ ಖಾನ್ ಇಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವ ಮತ್ತೊಂದು ಪ್ರೋಮೊದಲ್ಲಿ ದೀಪಿಕಾ ತನ್ನ ಪತಿ ರಣ್ವೀರ್ ಸಿಂಗ್ ಕುರಿತು ಅಮಿತಾಬ್ ಬಚ್ಚನ್ ಬಳಿ ದೂರು ನೀಡಿದ್ದಾರೆ.

  ಅಮಿತಾಭ್ ಬಚ್ಚನ್ ಮುಂದೆ ಹಾಟ್ ಸೀಟಿನಲ್ಲಿ ಕುಳಿತಿದ್ದ ದೀಪಿಕಾ, ಪತಿ ರಣ್ವೀರ್ ಸಿಂಗ್ ಮಾತು ನೀಡಿದಂತೆ ನಡೆದುಕೊಂಡಿಲ್ಲ ಎಂದು ಕಂಪ್ಲೇಂಟ್ ಮಾಡಿದ್ದಾರೆ. ರಣವೀರ್ ಸಿಂಗ್ ಪತ್ನಿ ದೀಪಿಕಾಗೆ ಬೆಳಗಿನ ಉಪಾಹಾರವನ್ನು ತಾವೇ ಕೈಯಾರೆ ಮಾಡಿಕೊಡುತ್ತೇನೆ ಎಂದು ಮಾತು ನೀಡಿದ್ದರಂತೆ. ಆದರೆ ಅದನ್ನು ಇದುವರೆಗೂ ನಡೆಸಿಕೊಟ್ಟಿಲ್ಲ ಎಂದು ದೀಪಿಕಾ ಆರೋಪಿಸಿದ್ದಾರೆ. ಈ ಕುರಿತಂತೆ ಅಮಿತಾಬ್, ರಣವೀರ್ ​ಗೆ ಕರೆ ಮಾಡಿ ಸ್ಪಷ್ಟನೆಯನ್ನೂ ಕೇಳಿದ್ದಾರೆ.

  ಅಮಿತಾಬ್ ಕರೆಗೆ ಉತ್ತರಿಸಿದ ರಣವೀರ್, ದೀಪಿಕಾಗೆ ಮರು ಪ್ರಶ್ನೆ ಮಾಡಿದ್ದಾರೆ ''ಶೋಗೆ ಹೋಗಿ ಅಮಿತಾಬ್ ಬಳಿ ನನ್ನ ವಂದನೆಗಳನ್ನು ತಿಳಿಸುವುದನ್ನು ಬಿಟ್ಟು, ನನ್ನ ಕುರಿತು ದೂರು ನೀಡಿದ್ದೀಯಲ್ಲಾ'' ಎಂದು ರಣವೀರ್ ಪತ್ನಿಗೆ ಹೇಳಿದ್ದಾರೆ. ಬಳಿಕ ಅಮಿತಾಬ್ ಎದುರೇ ದೀಪಿಕಾಗೆ ಹೊಸ ಭರವಸೆಯನ್ನೂ ನೀಡದರು ''ಅಮಿತಾಬ್ ಸರ್ ಹೇಳಿದ ಮೇಲೆ ನಿನಗೆ ನಾನು ಖಂಡಿತವಾಗಿಯೂ ಆಮ್ಲೆಟ್ ತಯಾರಿಸಿ, ತೊಡೆಯ ಮೇಲೆ ಕೂರಿಸಿಕೊಂಡು ತಿನ್ನಿಸುತ್ತೇನೆ'' ಎಂದು ರಣವೀರ್ ಹೇಳಿದರು.

  ತಕ್ಷಣ ದೀಪಿಕಾ ಪಕ್ಕದಲ್ಲೇ ಕುಳಿತಿದ್ದ ಫರ್ಹಾ ಖಾನ್ ಮಧ್ಯ ಪ್ರವೇಶಿಸಿ, ''ಇಲ್ಲಿ ಅಮಿತಾಬ್ ಕೇಳಿರುವುದು ತಿಂಡಿಯ ಬಗ್ಗೆ ಮಾತ್ರ, ಹೇಗೆ ತಿನ್ನಿಸುತ್ತೀರಿ ಎಂದಲ್ಲ'' ಎಂದು ರಣ್ವೀರ್ ಕಾಲೆಳೆದಿದ್ದಾರೆ. ಈ ಪ್ರೋಮೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಅಂದಹಾಗೆ ದೀಪಿಕಾ ಮತ್ತು ಅಮಿತಾಬ್ ಇಬ್ಬರು ಕೊನೆಯದಾಗಿ ಪಿಕು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದಲ್ಲಿ ಬಿಗ್ ಬಿ ಅಮಿತಾಬ್, ದೀಪಿಕಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಪ್ರಮುಖ ಪಾತ್ರದಲ್ಲಿ ದಿವಂಗತ ನಟ ಇರ್ಫಾನ್ ಖಾನ್ ಸಹ ನಟಿಸಿದ್ದರು. ಇದೀಗ ಮತ್ತೆ ಕಿರುತೆರೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳ ಸಂತಸ ನೀಡಿದೆ. ಇಬ್ಬರು ಒಂದೇ ವೇದಿಕೆ ಮೇಲಿರುವ ಕಾರ್ಯಕ್ರಮವನ್ನು ನೋಡಲು ಪ್ರೇಕ್ಷಕರು ಸಹ ಕುತೂಹಲ ರಾಗಿದ್ದಾರೆ. ಅಂದಹಾಗೆ ಈ ವಿಶೇಷ ಸಂಚಿಕೆ ಶುಕ್ರವಾರ ಅಂದರೆ ಇಂದೇ ತಿಂಗಳು 10ರಂದು ಪ್ರಸಾರವಾಗಲಿದೆ.

  ಕೌನ್ ಬನೇಗಾ ಕರೋಡ್ ಪತಿ 13 ಸೀಸನ್ ನಲ್ಲ ಶಾನ್ದಾರ್ ಶುಕ್ರವಾರ್ ಎನ್ನುವ ವಿಶೇಷ ಸಂಚಿಕೆ ಪ್ರಸಾರವಾಗುತ್ತಿದೆ. ಪ್ರತಿವಾರ ವಿಶೇಷ ಅತಿಥಿಗಳು ಅಮಿತಾಬ್ ಮುಂದೆ ಹಾಟ್ ಸೀಟಿನಲ್ಲಿ ಕೂರಲಿದ್ದಾರೆ. ಈ ವಾರ ದೀಪಿಕಾ ಮತ್ತು ಫರ್ಹಾ ಖಾನ್ ಕಾಣಿಸಿಕೊಂಡಿದ್ದಾರೆ. ಮುಂದಿನ ವಾರ ಯಾರು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

  English summary
  Kaun Banega Crorepati 13; Deepika Padukone complaints on Ranveer Singh infront of Amitabh Bachchan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X