For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೇ ಕೌನ್ ಬನೇಗಾ ಶೂನ್ಯಾಧಿಪತಿ

  By Rajendra
  |
  ಇಷ್ಟು ದಿನ ಕನ್ನಡದ ಕೋಟ್ಯಾಧಿಪತಿ, ಕೌನ್ ಬನೇಗಾ ಕರೋಡ್ ಪತಿ, ಕಾಸ್ ಗೆ ಟಾಸ್, 'ಕೈಯಲ್ಲಿ ಕೋಟಿ ಹೇಳಿ ಬಿಟ್ಟು ಹೊಡೀರಿ'ಯಂತಹ ರಿಯಾಲಿಟಿ ಶೋಗಳನ್ನು ನೋಡಿರುತ್ತೀರಿ. ಈಗ ಮತ್ತೊಂದು ವಿಭಿನ್ನ ಶೋ ಶೀಘ್ರದಲ್ಲೇ ಆರಂಭವಾಗಲಿದೆ. ಹೆಸರು ಕೌನ್ ಬನೇಗಾ ಶೂನ್ಯಾಧಿಪತಿ.

  ಹೆಸರು ಕೇಳಿದ ತಕ್ಷಣ ಒಂಚೂರು ನಗು ಬರುತ್ತದೆ ಅಲ್ಲವೆ? ಹೌದು ಇದೊಂದು ಅಪ್ಪಟ ನಕ್ಕು ನಲಿಸುವ ಮನರಂಜನಾ ಶೋ. ರಾಜ್ ಮ್ಯೂಸಿಕ್ ಚಾನಲ್ ನಲ್ಲಿ ಈ ಶೋ ಮೂಡಿಬರಲಿದೆ. ಕಾರ್ಯಕ್ರಮದ ನಿರ್ದೇಶಕ ಫೈವ್ ಈಡಿಯಟ್ಸ್ ಖ್ಯಾತಿಯ ಮಾಸ್ಟರ್ ಆನಂದ್.

  ಈ ಶೋನಲ್ಲಿ ಗೆದ್ದವರಿಗೆ ಹಣ ಸಿಗಲ್ಲ. ಇದೊಂದು ಸಂಪೂರ್ಣ ಕಾಮಿಡಿ ಶೋ. ಇಲ್ಲಿ ವಿಚಿತ್ರ ನಿಯಮಗಳಿರುತ್ತವೆ. ಆಡಲು ಬಂದವರೇ ದುಡ್ಡು ಕಟ್ಟಿ ಆಡಬೇಕು. ಚಿಯರ್ ಗರ್ಲ್ಸ್ ಪೋಲ್, ಕಾಲ್ ಟು ಕುಚಿಕ್ಕು, ದ್ರಾಬೆ ಎತ್ತಿ ಹಾಕು...ಈ ರೀತಿಯ ವಿಚಿತ್ರದ ಲೈಫ್ ಲೈನ್ ಗಳನ್ನು ಸ್ಪರ್ಧಿಗಳು ಬಳಸಿಕೊಳ್ಳಬಹುದು.

  ಇಷ್ಟಕ್ಕೂ ಈ ಶೋನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಸೆಲೆಬ್ರಿಟಿಗಳು. ಜೊತೆಗೆ ಜೂನಿಯರ್ ಸ್ಟಾರ್ ಹೀರೋಗಳು ಪಾಲ್ಗೊಳ್ಳಲಿದ್ದಾರೆ. ಯಾರನ್ನೂ ಅನುಕರಿಸದೆ ನಗಿಸುವುದೇ ಈ ಕಾರ್ಯಕ್ರಮದ ಧರ್ಮ ಎನ್ನುತ್ತಾರೆ ಆನಂದ್.

  ಇನ್ನೂ ದಿನಾಂಕ ನಿಗಧಿಯಾಗದಿದ್ದರೂ ಮೇ ತಿಂಗಳ ಮೂರನೇ ವಾರದಿಂದ ಕಾರ್ಯಕ್ರಮ ಆರಂಭವಾಗಲಿದೆ. ಒಂದು ಗಂಟೆ ಕಾಲ ವೀಕ್ಷಕರು ನಕ್ಕು ನಲಿಯಬಹುದು. ಅಶೋಕ್ ಶರ್ಮಾ ಅವರ ನಿರೂಪಣೆ ಈ ಕಾರ್ಯಾಕ್ರಮಕ್ಕಿದೆ. ಸಂಭಾಷಣೆ ಛಲಂ ರಾಧಾಬಾಯಿ.

  English summary
  Raj Musix Kannada channel soon to start a comedy show titled as 'Kaun Bange Shunyadhipati'. The show directed by Master Anand. Its an one hour comedy show starts from 3rd week of May.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X