For Quick Alerts
  ALLOW NOTIFICATIONS  
  For Daily Alerts

  KBC 13: ಅಮಿತಾಬ್ ಎದುರು ಹಾಟ್ ಸೀಟ್ ಏರಿದ ಕನ್ನಡದ ಖ್ಯಾತ ನಟ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್​ ಪತಿ ಶೋ ಅನೇಕ ಕಾರಣಕ್ಕೆ ಪ್ರೇಕ್ಷಕರ ಗಮನ ಸಳೆಯುತ್ತಿದೆ. ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗುತ್ತಿರುವ ಈ ಶೋನಲ್ಲಿ ಈ ಬಾರಿ ಪ್ರತಿ ಶುಕ್ರವಾರ 'ಶಾನ್ದಾರ್ ಶುಕ್ರವಾರ್' ಎಂಬ ಹೆಸರಿನಲ್ಲಿ ವಿಶೇಷ ಸಂಚಿಕೆ ಪ್ರಸಾರವಾಗುತ್ತಿದೆ. ಈ ಸಂಚಿಕೆಯಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಾರೆ. ಚಾರಿಟಿಯ ಉದ್ದೇಶದಿಂದ ಸೆಲೆಬ್ರಿಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, ಗೆದ್ದ ಹಣವನ್ನು ಸಾಮಾಜಿಕ ಕೆಲಸಕ್ಕೆ ನೀಡುತ್ತಾರೆ.

  'ಶಾನ್ದಾರ್ ಶುಕ್ರವಾರ್' ಕಾರ್ಯಕ್ರಮದ ಮೊದಲ ವಾರ ಖ್ಯಾತ ಕ್ರಿಕೆಟ್ ತಾರೆಯರಾದ ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ನಂತರ ಬಾಲಿವುಡ್​ನ ಖ್ಯಾತ ನಿರ್ದೇಶಕಿ ಫರ್ಹಾ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು. ಕಳೆದ ವಾರ ಟೋಕಿಯೋ ಒಲಂಪಿಕ್ಸ್​​ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಜಾವೆಲಿನ್ ಪಟು ನೀರಜ್ ಚೋಪ್ರಾ ಹಾಗೂ ಹಾಕಿ ಆಟಗಾರ ಪಿ.ಶ್ರೀಜೇಶ್ ಭಾಗವಹಿಸಿದ್ದರು. ಪ್ರತೀ ವಾರದ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬರುತ್ತಿದ್ದು, ವೀಕ್ಷಕರ ಗಮನ ಸೆಳೆಯುತ್ತಿವೆ.

  ಪ್ರತಿ ಶುಕ್ರವಾರ ಯಾವ ಸೆಲೆಬ್ರಿಟಿ ಹಾಟ್ ಸೀಟಿನಲ್ಲಿ ಕೂರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಈಗಾಗಲೇ ವಿಶೇಷ ಅತಿಥಿಗಳ ಭಾಗಿಯಾಗಿರುವ ಪ್ರೋಮೋ ಬಿಡುಗಡೆಯಾಗಿದೆ. ಸ್ಯಾಂಡಲ್​ ವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿರುವ ಬಾಲಿವುಡ್ ನಟ, ಕರಾವಳಿ ಮೂಲದ ಸುನೀಲ್ ಶೆಟ್ಟಿ ಮತ್ತು ಹಿರಿಯ ನಟ ಜಾಕಿ ಶ್ರಾಫ್, ಅಮಿತಾಬ್ ಮುಂದೆ ಹಾಟ್ ಸೀಟ್ ಏರಿದ್ದಾರೆ.

  ಪ್ರೋಮೋ ಈಗಾಗಲೇ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಫಿಟ್ನೆಸ್ ಫ್ರೀಕ್ ಸುನೀಲ್ ಶೆಟ್ಟಿ ತನ್ನ ಫಿಟ್ನೆಸ್ ರಹಸ್ಯದ ಬಗ್ಗೆ ಅಮಿತಾಬ್ ಮುಂದೆ ಬಹಿರಂಗ ಪಡಿಸಿದ್ದಾರೆ. ವಾರದಲ್ಲಿ 6 ದಿನಗಳು ಕಟ್ಟುನಿಟ್ಟಿ ವರ್ಕೌಟ್ ಮಾಡುವ ಸುನೀಲ್ ಶೆಟ್ಟಿ ಯುವಕರು ಅಚ್ಚರಿ ಪಡುವ ರೀತಿಯಲ್ಲಿದ್ದಾರೆ. ವಿಶೇಷ ಎಂದರೆ ಶೋನಲ್ಲಿ ಸುನೀಲ್ ಶೆಟ್ಟಿ ಜಾಕಿ ಶ್ರಾಫ್ ಇಬ್ಬರೂ ವೇದಿಕೆಯಲ್ಲೇ ಯೋಗ ಮಾಡಿ ಅಚ್ಚರಿ ಮೂಡಿಸಿದರು.

  ಸುನೀಲ್ ಶೆಟ್ಟಿ ಮತ್ತು ಜಾಕಿ ಶ್ರಾಫ್ ಇಬ್ಬರೂ ಉತ್ತಮವಾಗಿ ಆಟವಾಡುವ ಜೊತೆಗೆ ಸಾಕಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಏನೆಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  ಅಂದಹಾಗೆ ಸುನೀಲ್ ಶೆಟ್ಟಿ, ಕಿಚ್ಚ ಸುದೀಪ್ ನಟನೆಯ 'ಪೈಲ್ವಾನ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಕನ್ನಡದವರೇ ಆದ ಸುನೀಲ್ ಶೆಟ್ಟಿ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದರು. ಬಳಿಕ ಮತ್ತೆ ಕನ್ನಡದ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಎಲ್ಲಾ ಭಾಷೆಯಲ್ಲೂ ಮಿಂಚಿರುವ ನಟ ಸುನೀಲ್ ಶೆಟ್ಟಿಯನ್ನು ಕೆಬಿಸಿಯಲ್ಲಿ ನೋಡಲು ಅಭಿಮಾನಿಗಳು ಕಾರರಾಗಿದ್ದಾರೆ.

  English summary
  KBC 13; Actor Suniel Shetty and Jackie Shroff are special guest on KBC 13.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X