twitter
    For Quick Alerts
    ALLOW NOTIFICATIONS  
    For Daily Alerts

    ಅಂತರ್‌ ರಾಜ್ಯ ಡ್ರಗ್ಸ್‌ ದಂಧೆ: ಕಿರುತೆರೆ ನಟ ಅರೆಸ್ಟ್‌

    |

    ನಟ-ನಟಿಯರಿಗೂ ಮಾದಕ ವಸ್ತು ದಂಧೆಗೆ ನಂಟು ಹೊಸತಲ್ಲ. ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಈಗಾಗಲೇ ಅನೇಕ ನಟ-ನಟಿಯರ ಹೆಸರು ಕೇಳಿಬಂದಿದೆ. ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೂ ಡ್ರಗ್ಸ್‌ ಲಿಂಕ್‌ ಆರೋಪ ಕೇಳಿಬಂದಿದ್ದು, ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯಾನ್‌ ಖಾನ್‌, ನಟಿ ರಿಯಾ ಚಕ್ರಬೋರ್ತಿ ಸೇರಿದಂತೆ ಅನೇಕರು ಡ್ರಗ್ಸ್‌ ಪ್ರಕರಣದಲ್ಲಿ ಅರೆಸ್ಟ್‌ ಆಗಿ ವಿಚಾರಣೆ ಅನುಭವಿಸಿದ್ದರು.

    ಜನರು ತಮ್ಮ ಜೀವನದ ಒಂದು ಭಾಗವನ್ನಾಗಿಸಿಕೊಂಡಿರುವ ಸಿನಿಮಾ ಅಥವಾ ನಟನಾ ಕ್ಷೇತ್ರದಲ್ಲಿ, ಮಾದಕ ವಸ್ತು ಎನ್ನುವುದು ಆ ರಂಗಕ್ಕೆ ಅಂಟಿದ ಕಳಂಕದಂತೆ. ನಟ-ನಟಿಯರ ಈ ಹವ್ಯಾಸದ ಬಗ್ಗೆ ಜನರು ಅನೇಕ ಬಾರಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಿತ್ರರಂಗದ ಕೆಲ ಗಣ್ಯರಿಗೂ ಅಸಮಾಧಾನವಿದೆ. ಆದರೂ ನಟ ಅಥವಾ ನಟಿ ಮಾದಕ ವಸ್ತು ಜಾಲದಲ್ಲಿ ಸಿಲುಕಿಕೊಂಡಂತಹ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ.

    ಮಾದಕ ವಸ್ತು ಸೇವನೆ ಮಾಡುವ ಆರೋಪ ಒಂದಡೆಯಾದರೆ, ಇನ್ನೂ ಕೆಲ ನಟ-ನಟಿಯರು ಡ್ರಗ್‌ ಪೆಡ್ಲರ್‌ಗಳ ಜೊತೆ ನಂಟು ಹೊಂದಿರುತ್ತಾರೆ. ಇದೀಗ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಈ ನಟ ತಾನೇ ಸ್ವತಃ ಡ್ರಗ್‌ ಪೆಡ್ಲರ್‌ ಆಗಿ ಕೆಲಸ ಮಾಡುತ್ತಿದ್ದ ಎನ್ನುವುದು ಬಹಿರಂಗವಾಗಿದೆ. ಮಲಯಾಳಂ ನಟನ ವಿರುದ್ಧ ಈ ಆರೋಪ ಕೇಳಿಬಂದಿದೆ.

    Kerala Small Screen Actor Siyaz Arrested In Drugs Case

    ಬೆಂಗಳೂರು ನಗರದಲ್ಲಿ ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮಲಯಾಳಂ ಕಿರುತೆರೆ ನಟ ಸಿಯಾಜ್‌ ಎನ್ನುವಾತನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಕೇರಳದಿಂದ ಬಂದ ಅಂತರ್‌ ರಾಜ್ಯ ಆರೋಪಿಗಳು ಬೆಂಗಳೂರಿನಲ್ಲಿ ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಡ್ರಗ್ಸ್‌ ದಂಧೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಕೂಡ ಈ ಬಗ್ಗೆ ಅಲರ್ಟ್ ಆಗಿದ್ದಾರೆ. ನಟ ಸಿಯಾಜ್‌ ಮೇಲಿನ ಆರೋಪದ ಬಗ್ಗೆ ಕೂಡ ತನಿಖೆ ನಡೆಸಿದ ಪೊಲೀಸರು ಸಿಯಾಜ್‌ ಸೇರಿದಂತೆ ಇತರ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

    ಡ್ರಗ್‌ ಪೆಡ್ಲರ್‌ಗಳು ಹೆಚ್‌ಎಸ್‌ಆರ್‌ ಹಾಗೂ ಕೋರಮಂಗಲ ಭಾಗದ ಪ್ರತಿ‍ಷ್ಠಿತ ಕಾಲೇಜಿನ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡು ಅವರ ಸ್ನೇಹ ಸಂಪಾದಿಸಿ, ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಅಲ್ಲದೇ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದರು. ಈ ಎಲ್ಲಾ ವಿಚಾರದ ಬಗ್ಗೆ ನಿಖರ ಮಾಹಿತಿ ಕಲೆ ಹಾಕಿದ ಪೊಲೀಸರು ನಿನ್ನೆ( ಸೆಪ್ಟಂಬರ್ 23) ಆರೋಪಿಗಳಿರುವಲ್ಲಿ ದಾಳಿ ನಡೆಸಿ, ಬಂಧಿಸಿದ್ದಾರೆ.

    ಕೇರಳ ಮೂಲದ ಕಿರುತೆರೆ ನಟ ಸಿಯಾಜ್‌, ಮೊಹಮ್ಮದ್‌ ಶಾಹಿದ್, ಮಂಗಲ್‌ ಥೋಡಿ ಜತಿನ್‌ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ನಾರ್ಕೋಟಿಕ್ಸ್‌ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್‌ ಸಬ್‌ಸ್ಟೆನ್ಸ್‌ ಆ್ಯಕ್ಡ್‌(ಎನ್‌ಡಿಪಿಎಸ್‌) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳಿಂದ 12.50 ಲಕ್ಷ ರೂಪಾಯಿ ಮೌಲ್ಯದ 191 ಗ್ರಾಂ ಎಂಡಿಎಂಎ ಮತ್ತು 2.80 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

    ಇನ್ನು ಕೇರಳದಲ್ಲಿ ಮಲಯಾಳಂ ಕಿರುತೆರೆಯಲ್ಲಿ ನಟನಾಗಿ ಗುರುತಿಸಿಕೊಂಡಿದ್ದ ಸಿಯಾಜ್‌, ಇತ್ತೀಚಿಗೆ ಅಕ್ರಮವಾಗಿ ದುಡ್ಡು ಮಾಡಲು ಕರ್ನಾಟಕದಲ್ಲಿ ಡ್ರಗ್ಸ್‌ ದಂಧೆ ಆರಂಭಿಸಿದ್ದಾನೆ. ಈ ದಂಧೆಗೆ ತನ್ನ ಸ್ನೇಹಿತರನ್ನು ಒಗ್ಗೂಡಿಸಿ ಬೆಂಗಳೂರಿನಲ್ಲಿ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಕೇರಳದ ಕಿರುತೆರೆ ನಟ ಸಿಯಾಜ್‌ ಬಗ್ಗೆ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

    English summary
    Kerala small screen actor Siyaz and two more arrested by Karnataka police in drugs case.
    Saturday, September 24, 2022, 12:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X