twitter
    For Quick Alerts
    ALLOW NOTIFICATIONS  
    For Daily Alerts

    ತೆರೆಮೇಲೆ ರಾಕಿಭಾಯ್ ದರ್ಬಾರ್, ಟಿವಿಯಲ್ಲಿ ಸುಮಾರ್: ಕನ್ನಡ & ತೆಲುಗು TRP ಎಷ್ಟು?

    |

    ಬಾಕ್ಸಾಫೀಸ್ ಶೇಕ್ ಮಾಡಿ ದಾಖಲೆ ಬರೆದಿದ್ದ 'KGF'-2 ಸಿನಿಮಾ ನಂತರ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲೂ ರಿಲೀಸ್ ಆಗಿ ಸದ್ದು ಮಾಡಿತ್ತು. ಇತ್ತೀಚೆಗೆ ಸಿನಿಮಾ ಕಿರುತೆರೆಯಲ್ಲೂ ಪ್ರಸಾರವಾಗಿ ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ TRP ಬಂದಿದ್ದು ಟಿವಿಯಲ್ಲಿ ರಾಕಿಭಾಯ್‌ಗೆ ಆರ್ಭಟ ನಡೆದಿಲ್ಲ. ಅದ್ಯಾಕೋ ವೀಕ್ಷಕರು ದೊಡ್ಡಮಟ್ಟದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನೋಡಿಲ್ಲ ಎನ್ನುವುದು ಗೊತ್ತಾಗಿದೆ.

    ಟಿವಿ ರೇಂಟಿಂಗ್ ಪಾಯಿಂಟ್ ಅನ್ನುವುದು ಕಿರುತೆರೆಯಲ್ಲಿ ಪ್ರಸಾರವಾದ ಯಾವುದೇ ಕಾರ್ಯಕ್ರಮವನ್ನು ಎಷ್ಟು ಜನ ನೋಡಿದ್ರು, ಅದರಿಂದ ಬಂದ ರೇಟಿಂಗ್ ಎಷ್ಟು ಎನ್ನುವುದನ್ನು ಹೇಳುವ ಪಟ್ಟಿ. ಒಂದು ಸಿನಿಮಾ ಸಕ್ಸಸ್ ಹೇಗೆ ಬಾಕ್ಸಾಫೀಸ್‌ ಕಲೆಕ್ಷನ್ ಮೇಲೆ ನಿರ್ಧಾರವಾಗಿರುತ್ತದೋ ಅದೇ ರೀತಿ ಒಂದು ಸಿನಿಮಾ ಟಿವಿಯಲ್ಲಿ ಎಷ್ಟರಮಟ್ಟಿಗೆ ಸದ್ದು ಮಾಡಿದೆ ಎನ್ನುವುದು ಈ TRP ರೇಟಿಂಗ್‌ನಿಂದ ಗೊತ್ತಾಗಿಬಿಡುತ್ತದೆ. ಕಿರುತೆರೆ ವಾಹಿನಿಗಳು ಸಿನಿಮಾ ಕ್ರೇಜ್ ನೋಡಿ ಮುಗಿಬಿದ್ದು ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿರುತ್ತಾರೆ. ಸಿನಿಮಾ ಪ್ರಸಾರ ಮಾಡುವಾಗ ಜಾಹೀರಾತುಗಳನ್ನು ಪ್ರದರ್ಶಿಸಿ ಹಣ ಗಳಿಸುತ್ತಾರೆ. ಇತ್ತೀಚೆಗೆ ಕನ್ನಡ ಹಾಗೂ ತೆಲುಗು ಜೀಟಿವಿಯಲ್ಲಿ 'KGF' ಚಾಪ್ಟರ್-2 ಪ್ರಸಾರವಾಗಿತ್ತು. ಎರಡರಲ್ಲೂ ಕಡಿಮೆ TRP ಬಂದಿರುವುದು ಅಚ್ಚರಿ ಮೂಡಿಸಿದೆ.

    ತಮಿಳುನಾಡಿನಲ್ಲಿ ನರಾಚಿ ಕೋಟೆ, ಕಾಳಿ ಗುಡಿ, ಗಣೇಶನ ವೀರಗಲ್ಲು: ಇದ್ದಪ್ಪಾ ರಾಕಿ ಭಾಯ್ ಕ್ರೇಜ್ ಅಂದ್ರೆ!ತಮಿಳುನಾಡಿನಲ್ಲಿ ನರಾಚಿ ಕೋಟೆ, ಕಾಳಿ ಗುಡಿ, ಗಣೇಶನ ವೀರಗಲ್ಲು: ಇದ್ದಪ್ಪಾ ರಾಕಿ ಭಾಯ್ ಕ್ರೇಜ್ ಅಂದ್ರೆ!

    ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'KGF' ಸರಣಿ ಸಿನಿಮಾ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಯಶ್ ಆರ್ಭಟ, ಎಲಿವೇಷನ್ ಸೀನ್ಸ್‌ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮುಖ್ಯವಾಗಿ ಬಾಲಿವುಡ್‌ನಲ್ಲಿ ಈ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಕನ್ನಡದ ಹೆಮ್ಮೆ 'KGF' ಸರಣಿ ಸಿನಿಮಾ ಹೊಸ ಇತಿಹಾಸ ನಿರ್ಮಿಸಿದ್ದು ಸುಳ್ಳಲ್ಲ.

    'KGF'-2 ಕನ್ನಡ TRP ಎಷ್ಟು?

    'KGF'-2 ಕನ್ನಡ TRP ಎಷ್ಟು?

    ಭಾರೀ ಪ್ರಚಾರ ಮಾಡಿ ಜೀ ಕನ್ನಡ ವಾಹಿನಿ 'KGF' ಚಾಪ್ಟರ್-2 ಸಿನಿಮಾ ಪ್ರಸಾರ ಮಾಡಿತ್ತು. ಆಗಸ್ಟ್‌ 20ರಂದು ಸಿನಿಮಾ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಿತ್ತು. ಸದ್ಯ TRP ಲಿಸ್ಟ್ ಬಂದಿದ್ದು, ಕೇವಲ 10.2 TVR ಮಾತ್ರ ದಕ್ಕಿದೆ. ಇದು 'KGF'-2 ರೀತಿಯ ಸೂಪರ್ ಹಿಟ್ ಚಿತ್ರಕ್ಕೆ ಬಹಳ ಕಡಿಮೆ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಭಜರಂಗಿ'-2 ಸಿನಿಮಾ ಕೂಡ 12.5 TVR ಗಳಿಸಿತ್ತು. ಅದ್ಯಾಕೋ ವೀಕ್ಷಕರು ಮನೆಗಳಲ್ಲಿ ರಾಕಿಭಾಯ್ ಅಬ್ಬರ ನೋಡಲು ಇಷ್ಟಪಟ್ಟಂತೆ ಕಾಣುತ್ತಿಲ್ಲ.

    ಚಿತ್ರಕ್ಕೆ ತೆಲುಗಿನಲ್ಲಿ ಸಿಕ್ಕ TRP ಎಷ್ಟು?

    ಚಿತ್ರಕ್ಕೆ ತೆಲುಗಿನಲ್ಲಿ ಸಿಕ್ಕ TRP ಎಷ್ಟು?

    ತೆಲುಗಿನಲ್ಲಿ 'KGF' ಫಸ್ಟ್‌ ಚಾಪ್ಟರ್‌ಗಿಂತಲೂ ಸೆಕೆಂಡ್ ಚಾಪ್ಟರ್‌ಗೆ TRP ಡಲ್ಲಾಗಿರುವುದು ವಿಪರ್ಯಾಸ. ಜೀ ತೆಲುಗು ವಾಹಿನಿ 80 ಅಡಿ ಬ್ಯಾನರ್‌ ಹಾಕಿ ಭರ್ಜರಿ ಪ್ರಮೋಷನ್ ಮಾಡಿ ಚಿತ್ರವನ್ನು ಪ್ರಸಾರ ಮಾಡಿತ್ತು. ಆದರೆ ಸಿಕ್ಕಿರುವುದು 9.15 TVR ಮಾತ್ರ. 'KGF' ಪ್ರೀಕ್ವೆಲ್ 11.9 TVR ಗಳಿಸಿತ್ತು. ಹಾಗಾಗಿ ಮೊದಲ ಭಾಗಕ್ಕಿಂತಲೂ ಎರಡನೇ ಭಾಗಕ್ಕೆ ರೆಸ್ಪಾನ್ಸ್ ಕಮ್ಮಿ ಇದೆ. ತೆಲುಗು ಡಬ್ಬಿಂಗ್ ಸಿನಿಮಾಗಳಲ್ಲಿ 'ರೋಬೊ' 19.4, 'ಬಿಚ್ಚಗಾಡು' 18.75 ಹಾಗೂ 'ಕಬಾಲಿ' ಸಿನಿಮಾ 14.53 ರೇಟಿಂಗ್ ಗಳಿಸಿದ್ದವು. ಅದೆಲ್ಲಕ್ಕಿಂತಲೂ 'KGF'-2 ರೇಟಿಂಗ್ ಕಮ್ಮಿ ಆಗಿದೆ.

    TRP ಕಮ್ಮಿ ಬರಲು ಕಾರಣ ಏನು?

    TRP ಕಮ್ಮಿ ಬರಲು ಕಾರಣ ಏನು?

    'KGF' ಚಾಪ್ಟರ್-2 ಚಿತ್ರವನ್ನು ಥಿಯೇಟರ್‌ಗಳಲ್ಲೇ ಸಾಕಷ್ಟು ಬಾರಿ ನೋಡಿದವರು ಇದ್ದಾರೆ. ಇನ್ನು ಓಟಿಟಿಯಲ್ಲೂ ಜನ ಮುಗಿಬಿದ್ದು ನೋಡಿದ್ದಾರೆ. ಹಾಗಾಗಿ ಟಿವಿಯಲ್ಲಿ ಜಾಹೀರಾತುಗಳ ನಡುವೆ ನೋಡಲು ಇಷ್ಟಪಟ್ಟಿಲ್ಲ ಎನ್ನಿಸುತ್ತಿದೆ. ಇನ್ನು ಚಿತ್ರದಲ್ಲಿ ವೈಲೆನ್ಸ್ ಜಾಸ್ತಿ ಇರುವುದು ಕೂಡ ಮನೆ ಮಂದಿಯೆಲ್ಲಾ ಕೂತು ಸಿನಿಮಾ ನೋಡಲು ಬೇಸರವಾದಂತೆ ಕಾಣುತ್ತಿದೆ.

    TRP ಕಿಂಗ್ ಪವರ್ ಸ್ಟಾರ್!

    TRP ಕಿಂಗ್ ಪವರ್ ಸ್ಟಾರ್!

    ಕನ್ನಡದ TRP ಕಿಂಗ್ ಪುನೀತ್‌ ರಾಜ್‌ಕುಮಾರ್ ಎಂದು ಹೇಳಬಹುದು. ಯಾಕಂದ್ರೆ ಅಪ್ಪು ನಟನೆಯ ಯಾವುದೇ ಸಿನಿಮಾ ಟಿವಿಗೆ ಬಂದರೆ ಮನೆಮಂದಿಯೆಲ್ಲಾ ಕೂತು ನೋಡುತ್ತಾರೆ. ದೊಡ್ಮನೆ ಹುಡ್ಗ ಸಿನಿಮಾ ಬರೋಬ್ಬರಿ 20.7 TVR ಸಾಧಿಸಿ ಸೂಪರ್ ಸಕ್ಸಸ್ ಕಂಡಿತ್ತು. ಈ ದಾಖಲೆಯನ್ನು ಮುರಿಯಲು ಯಾವುದೇ ಚಿತ್ರದಿಂದ ಸಾಧ್ಯವಾಗಿಲ್ಲ. ಅತಿ ಹೆಚ್ಚು TRP ಪಡೆದ ಟಾಪ್ 5 ಲಿಸ್ಟ್‌ನಲ್ಲಿ ಅಪ್ಪು ನಟನೆಯ 4 ಸಿನಿಮಾಗಳಿರುವುದು ವಿಶೇಷ. 'ರಾಜಕುಮಾರ', 'ನಟಸಾರ್ವಭೌಮ', 'ಅಂಜನಿಪುತ್ರ' ಸಿನಿಮಾ ಹೆಚ್ಚು TRP ಗಳಿಸಿ ಕನ್ನಡದ TRP ಕಿಂಗ್ ಎಂಬುದನ್ನು ಪದೇ ಪದೇ ಸಾಧಿಸಿ ತೋರಿಸಿದೆ.

    English summary
    KGF Chapter-2 TRP Rating Shocks Prashanth Neel And Team. Know More.
    Saturday, September 3, 2022, 11:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X