»   » ಮಾಳವಿಕಾ-ಪರಮೇಶ್ವರ್ ಗುಂಡ್ಕಲ್ ವಿಡಿಯೋ ಲೀಕ್ : ಸುದೀಪ್ ಪ್ರತಿಕ್ರಿಯೆ ಹೇಗಿತ್ತು.?

ಮಾಳವಿಕಾ-ಪರಮೇಶ್ವರ್ ಗುಂಡ್ಕಲ್ ವಿಡಿಯೋ ಲೀಕ್ : ಸುದೀಪ್ ಪ್ರತಿಕ್ರಿಯೆ ಹೇಗಿತ್ತು.?

Posted By:
Subscribe to Filmibeat Kannada

ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಲೀಕ್ ಆದ ಒಂದು ವಿಡಿಯೋ ಕ್ಲಿಪ್ ನಿಂದಾಗಿ 'ಬಿಗ್ ಬಾಸ್' ಅಂತಹ ಅತಿ ದೊಡ್ಡ ರಿಯಾಲಿಟಿ ಶೋದ ಡೈರೆಕ್ಟರ್ ಆಗಿರುವ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ನಟಿ ಮಾಳವಿಕಾ ಅವಿನಾಶ್ ರವರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸುವ ಸಂದರ್ಭದ ವಿಡಿಯೋ ಅದಾಗಿದ್ದು, ಅದರಲ್ಲಿ ಇಬ್ಬರೂ ಗುಸು-ಗುಸು ಅಂತ ಮಾತನಾಡುತ್ತಿರುವುದು ಕ್ಯಾಮರಾ ಕಂಗಳಲ್ಲಿ ಸೆರೆಯಾಗಿದೆ.

''ವಿಡಿಯೋದಲ್ಲಿ ಹೆಚ್ಚಿನದ್ದು ಏನೋ ಇದೆ ಅಂತ ನನಗೆ ಅನಿಸಲ್ಲ'' ಎಂದು ಪತ್ರಿಕಾಗೋಷ್ಟಿಯಲ್ಲಿ ಸ್ವತಃ ಪರಮೇಶ್ವರ್ ಗುಂಡ್ಕಲ್ ಸ್ಪಷ್ಟನೆ ನೀಡಿದ್ದಾರೆ. ಪರಮೇಶ್ವರ್ ಗುಂಡ್ಕಲ್ ಪರವಾಗಿ ಬ್ಯಾಟಿಂಗ್ ಮಾಡಿದ 'ಬಿಗ್ ಬಾಸ್' ಹೋಸ್ಟ್, ನಟ ಕಿಚ್ಚ ಸುದೀಪ್ ಮೈಕ್ ಹಿಡಿದು ಮಾತನಾಡಿದ್ದು ಹೀಗೆ -

ಅವಿನಾಶ್ ಅಥವಾ ಪರಮೇಶ್ವರ್ ಗುಂಡ್ಕಲ್ ಪತ್ನಿಗೆ ಸಮಸ್ಯೆ ಆಗಬೇಕು.!

''ತುಂಬಾ ಹಿಂದಿನಿಂದಲೂ ನನಗೆ ಪರಮೇಶ್ವರ್ ಗುಂಡ್ಕಲ್ ಹಾಗೂ ಮಾಳವಿಕಾ ಗೊತ್ತು. ವಿಡಿಯೋದಿಂದ ಏನಾದರೂ ಪ್ರಾಬ್ಲಂ ಇದ್ದರೆ, ಅದು ಮಾಳವಿಕಾ ಪತಿ ಅವಿನಾಶ್ ಗೆ ಇರಬೇಕು. ಇಲ್ಲ ಅಂದ್ರೆ ಪರಮೇಶ್ವರ್ ಗುಂಡ್ಕಲ್ ಪತ್ನಿಗೆ ಪ್ರಾಬ್ಲಂ ಆಗಬೇಕು'' ಎಂದು ಪತ್ರಿಕಾಗೋಷ್ಟಿಯಲ್ಲಿ ನಟ ಕಿಚ್ಚ ಸುದೀಪ್ ಹೇಳಿದರು.

'ಬಿಗ್ ಬಾಸ್' ಮನೆಗೆ ಹೋಗಬೇಕಂದ್ರೆ ಈ ಅರ್ಹತೆ ಇರಲೇಬೇಕು.!

'ಬಿಗ್ ಬಾಸ್' ಡೈರೆಕ್ಟರ್ ಪರವಾಗಿ ಸುದೀಪ್ ಮಾತು

''ನಾನು ಪರಮೇಶ್ವರ್ ಗುಂಡ್ಕಲ್ ಪರವಾಗಿ ಮಾತನಾಡುತ್ತಿದ್ದೇನೆ. ಎಲ್ಲ ಸ್ಪರ್ಧಿಗಳ ಜವಾಬ್ದಾರಿ ಪರಮೇಶ್ವರ್ ಗುಂಡ್ಕಲ್ ರವರ ಮೇಲಿದೆ. ಪ್ರತಿಯೊಬ್ಬರು ಗೆಲ್ಲಲೇಬೇಕು ಅಂತಲೇ 'ಬಿಗ್ ಬಾಸ್' ಮನೆಗೆ ಬರ್ತಾರೆ. ಒಂದು ವಾರ-ಎರಡು ವಾರಕ್ಕಾಗಿ ಯಾರೂ ಬರಲ್ಲ. ಯಾರು ಗೆಲ್ಲಬೇಕು ಅಂತ ನಾವು ಡಿಸೈಡ್ ಮಾಡಲ್ಲ. ಭರವಸೆ ಕೊಡುವುದು ನಮ್ಮ ಕರ್ತವ್ಯ ಅಷ್ಟೆ'' - ಕಿಚ್ಚ ಸುದೀಪ್

ಪರಮೇಶ್ವರ ಗುಂಡ್ಕಲ್ ಅವರ ಪ್ರಕಾರ 'BBK5'ನಲ್ಲಿ ಯಾವೆಲ್ಲಾ ಸ್ಪರ್ಧಿಗಳಿರುತ್ತಾರೆ.?

ಹೊರಗೆ ಕಳುಹಿಸಿ ಎಂದಿದ್ದರು ಅವಿನಾಶ್

''ಮಾಳವಿಕಾ ಒಬ್ಬ ನಟಿ, ರಾಜಕಾರಣಿ. 'ಬಿಗ್ ಬಾಸ್' ಮನೆಯೊಳಗೆ ಬರುವ ಮೊದಲು ಅವರಿಗೂ ಅಳುಕು ಇತ್ತು. ನಂತರ ಸ್ಪರ್ಧಿಯಾಗಿ ಒಳಗೆ ಬಂದ್ಮೇಲೆ, 'ಅನವಶ್ಯಕವಾಗಿ ಹೆಸರು ಹಾಳಾಗುತ್ತಿದೆ ಬೇಡ ಕಳುಹಿಸಿಬಿಡಿ' ಅಂತ ಸ್ವತಃ ಅವಿನಾಶ್ ಕೇಳಿಕೊಂಡಿದ್ದರು. ಈ ಬಗ್ಗೆ ಅವಿನಾಶ್ ಅವರು ನನ್ನನ್ನೂ ಕೇಳಿಕೊಂಡಿದ್ದರು. ಆದ್ರೆ, ಕಾರ್ಯಕ್ರಮದ ನಿಯಮದ ಪ್ರಕಾರ, ಎಲಿಮಿನೇಟ್ ಆಗುವ ತನಕ ಯಾರನ್ನೂ ಹೊರಗೆ ಕಳುಹಿಸುವ ಹಾಗಿಲ್ಲ'' - ಕಿಚ್ಚ ಸುದೀಪ್

ಸುದೀಪ್ ಬಗ್ಗೆ 'ಬಿಗ್ ಬಾಸ್' ಹೇಳಿದ ಯಶಸ್ಸಿನ ಸತ್ಯಕಥೆ.!

ಸಹಜ ಪ್ರತಿಕ್ರಿಯೆ ಅಷ್ಟೆ

''ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಮಾಳವಿಕಾ ''ಪ್ರಪಂಚಕ್ಕೆ ನಾನು ಹೇಗೆ ಕಾಣುತ್ತಿದ್ದೇನೆ'' ಅಂತ ಸಹಜವಾಗಿ ಕೇಳಿದ್ದಾರೆ. ಅದಕ್ಕೆ ಡೈರೆಕ್ಟರ್ ಆಗಿ ಪರಮೇಶ್ವರ್ ಗುಂಡ್ಕಲ್ ಉತ್ತರ ಕೊಟ್ಟಿದ್ದಾರೆ'' - ಕಿಚ್ಚ ಸುದೀಪ್

ಅಮಾಯಕ 'ಬಿಗ್ ಬಾಸ್'

''ಒಬ್ಬ ನಿರ್ದೇಶಕ ಆಗಿ ಪರಮೇಶ್ವರ್ ಗುಂಡ್ಕಲ್ ರವರಿಗೆ ಕ್ಯಾಮರಾ ಎಲ್ಲಿದೆ ಅಂತ ಗೊತ್ತು. ಕ್ಯಾಮರಾ ಸ್ವಿಚ್ ಆಫ್ ಮಾಡಿ ಅಂತ ಹೇಳಬಹುದಿತ್ತು. ಅಥವಾ ಅಲ್ಲಿಂದ ಅಲ್ಲಿಗೆ ಹೋಗಿ ಕ್ಲಿಪ್ಪಿಂಗ್ ಡಿಲೀಟ್ ಮಾಡಬಹುದಿತ್ತು. ಆದ್ರೆ, ಇದಾವುದೂ ಆಗಿಲ್ಲ. ಹೀಗಾಗಿ 'ಬಿಗ್ ಬಾಸ್' ಅಮಾಯಕ (Innocent) ಅನ್ನೋದು ಇದರಲ್ಲೇ ಗೊತ್ತಾಗುತ್ತೆ'' - ಕಿಚ್ಚ ಸುದೀಪ್

ನನಗೂ ಎಷ್ಟೋ ಜನ ಮುತ್ತು ಕೊಟ್ಟಿದ್ದಾರೆ

''ಹಾಗೆ ನೋಡಲು ಹೋದರೆ, ವೇದಿಕೆ ಮೇಲೆ ಎಷ್ಟೋ ಜನ ನನಗೆ ಮುತ್ತು ಕೊಟ್ಟಿದ್ದಾರೆ. ನನ್ನ ಅದೃಷ್ಟ ಅದು ಓಪನ್ ಆಗಿ ಪ್ರಸಾರ ಆಯ್ತು. ವೈರಲ್ ಆಗಿಲ್ಲ. ಮೇಲಾಗಿ, ಮಾಳವಿಕಾ ತುಂಬಾ ಫ್ರೆಂಡ್ಲಿ'' - ಕಿಚ್ಚ ಸುದೀಪ್

'ಬಿಗ್ ಬಾಸ್' ಸ್ಕ್ರಿಪ್ಟೆಡ್ ಆಗಿದ್ದರೆ...

''ಬಿಗ್ ಬಾಸ್' ಸ್ಕ್ರಿಪ್ಟೆಡ್ ಆಗಿದ್ದರೆ, ಮಾಳವಿಕಾ ಗೆಲ್ಲಬೇಕಿತ್ತು. ಆದ್ರೆ, ಅದು ಆಗಲಿಲ್ಲ'' - ಕಿಚ್ಚ ಸುದೀಪ್

ಹುಚ್ಚ ವೆಂಕಟ್ ಗೆಲ್ಲಬೇಕಿತ್ತು

''ಒಂದು ಟೈಮ್ ನಲ್ಲಿ ವೋಟ್ ಹೇಗೆ ಬರ್ತಿತ್ತು ಅಂದ್ರೆ, ಹುಚ್ಚ ವೆಂಕಟ್ ಹೊಡೆಯಲಿಲ್ಲ ಅಂದಿದ್ರೆ ಗೆದ್ದು ಬಿಟ್ಟಿರೋರು'' - ಕಿಚ್ಚ ಸುದೀಪ್

ಮುತ್ತು ಕೊಡಲೇಬೇಕು ಅಂತಿದ್ದರೆ...

''ಕೆಲ ಚುಂಬನಗಳು ನಡೆಯಲೇಬೇಕು ಅಂದರೆ ಬಾಗಿಲು ಓಪನ್ ಆಗುವ ಮುನ್ನ ನಡೆಯಬಹುದಲ್ವಾ.? ಬಾಗಿಲು ಓಪನ್ ಆಗಿ, ಇವರು ಕ್ಯಾಮರಾಗೆ ಮುಖ ತೋರಿಸಿ ಕೊಡಬೇಕಾದ್ದು ಏನಿದೆ.?'' - ಕಿಚ್ಚ ಸುದೀಪ್

ಬ್ಲಾಕ್ ಮೇಲ್ ಮಾಡಿದ್ದಾರೆ

''ಈ ವಿಡಿಯೋ ಬರ್ತಿದೆ'' ಅಂತ ಪರಮೇಶ್ವರ್ ಗುಂಡ್ಕಲ್ ರವರಿಗೂ ಫೋನ್ ಕಾಲ್ ಬಂದಿದೆ. ''ಇಷ್ಟು ದುಡ್ಡು ಕೊಟ್ಟರೆ ನಾವು ಲೀಕ್ ಮಾಡಲ್ಲ'' ಅಂತ ಹೇಳಿದ್ದರು. ಆದ್ರೆ, ಇವರು ಕೇರ್ ಮಾಡಲಿಲ್ಲ'' - ಕಿಚ್ಚ ಸುದೀಪ್

ಅವಿನಾಶ್ ಗೆ ತೊಂದರೆ ಆಗಬಾರದು

''ಶೋಗಾಗಿ ನಾನು ಪರಮೇಶ್ವರ್ ಗುಂಡ್ಕಲ್ ಪರವಾಗಿ ಮಾತನಾಡುತ್ತಿಲ್ಲ. ಅವರು ತುಂಬಾ ಒಳ್ಳೆಯವರು. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಮಾಳವಿಕಾ ಕೂಡ ಒಳ್ಳೆಯವರು. ನಮ್ಮ ಪ್ರತಿಯೊಂದು ಪ್ರಶ್ನೆ ಕೂಡ ಅವಿನಾಶ್ ಗೆ ತೊಂದರೆ ಕೊಡುವುದು ಬೇಡ'' ಎಂದು ಕೇಳಿಕೊಂಡರು ಕಿಚ್ಚ ಸುದೀಪ್.

ಸತ್ಯ ಪರ ನಿಲ್ಲುವುದು ಧರ್ಮ

''ನಾನು ಸೇಫ್ ಆಗಿ ಬಿಡಬಹುದು. ಸರಿಯಾದ ವ್ಯಕ್ತಿ ಪಕ್ಕ ನಿಲ್ಲುವುದು ನನ್ನ ಧರ್ಮ. ಇದರಲ್ಲಿ ಅವರಿಗೆ ಕೆಟ್ಟ ಹೆಸರು ಬಂದರೆ, ನನಗೂ ಕೆಟ್ಟ ಹೆಸರು ಬರುತ್ತದೆ. ನಾವು ಸರಿ ಇದ್ದರೆ, ಎಲ್ಲವೂ ಸರಿಯಾಗಿ ನಡೆಯುತ್ತದೆ'' - ಕಿಚ್ಚ ಸುದೀಪ್

ಎಕ್ಸ್ ಟ್ರಾ ಪಬ್ಲಿಸಿಟಿ ಸಿಕ್ಕಿದೆ

''ಕಳೆದ ವರ್ಷದ ವಿಡಿಯೋನ ಈ ವರ್ಷ ಬಿಡುಗಡೆ ಮಾಡಿರುವ ವ್ಯಕ್ತಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ. ಇದರಿಂದ ಈ ಸೀಸನ್ ಗೆ ಎಕ್ಸ್ ಟ್ರಾ ಪಬ್ಲಿಸಿಟಿ ಸಿಕ್ಕಿದೆ'' - ಕಿಚ್ಚ ಸುದೀಪ್

English summary
Bigg Boss Host, Kannada Actor Kiccha Sudeep comments on Malavika Avinash-Parameshwar Gundkal kissing video. ಮಾಳವಿಕಾ-ಪರಮೇಶ್ವರ್ ಗುಂಡ್ಕಲ್ 'ಮುತ್ತಿನ' ವಿಡಿಯೋ ಬಗ್ಗೆ ಕಿಚ್ಚ ಸುದೀಪ್ ಕಾಮೆಂಟ್ ಮಾಡಿದ್ದಾರೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X