»   » 'ವೀಕೆಂಡ್ ವಿತ್ ರಮೇಶ್'ನಲ್ಲಿ ಕಿಚ್ಚ ಸುದೀಪ್; ವೀಕ್ಷಕರ ಅಭಿಪ್ರಾಯವೇನು?

'ವೀಕೆಂಡ್ ವಿತ್ ರಮೇಶ್'ನಲ್ಲಿ ಕಿಚ್ಚ ಸುದೀಪ್; ವೀಕ್ಷಕರ ಅಭಿಪ್ರಾಯವೇನು?

Posted By:
Subscribe to Filmibeat Kannada

ಕನ್ನಡ ನಾಡಿನ ಹಲವಾರು ಸಾಧಕರ ಸಾಧನೆಯ ಹಾದಿಯನ್ನು ಮೆಲುಕು ಹಾಕಿ, ಕರ್ನಾಟಕದಾದ್ಯಂತ ಜನಪ್ರಿಯವಾಗಿರುವ, ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಇದೀಗ ಮುಕ್ತಾಯ ಹಂತ ತಲುಪಿದೆ.

ಏಪ್ರಿಲ್ 23 ಹಾಗೂ 24 ರಂದು ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್-2' ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಅಭಿನಯ ಚಕ್ರವರ್ತಿ ಸುದೀಪ್, ತಮ್ಮ ಜೀವನ ಪುಟಗಳನ್ನ ತಿರುವಿ ಹಾಕಲಿದ್ದಾರೆ. [ಆಪ್ತಮಿತ್ರ ದರ್ಶನ್ ಬಗ್ಗೆ 'ವೀಕೆಂಡ್' ನಲ್ಲಿ ಸುದೀಪ್ ಆಡಿದ ಮಾತೇನು?]

ಹಾಗ್ನೋಡಿದ್ರೆ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೊದಲ ಸೀಸನ್ ನಲ್ಲೇ ಕಿಚ್ಚ ಸುದೀಪ್ ಭಾಗವಹಿಸಬೇಕಿತ್ತು. ಆದ್ರೆ, ಹಲವಾರು ಕಾರಣಗಳಿಂದ ಅದು ಸಾಧ್ಯವಾಗಿರ್ಲಿಲ್ಲ. [ಪತ್ನಿ ಪ್ರಿಯಾ ಬಗ್ಗೆ 'ವೀಕೆಂಡ್' ನಲ್ಲಿ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?]

ಈ ಬಾರಿ 'ವೀಕೆಂಡ್ ವಿತ್ ರಮೇಶ್-2' ಕೊನೆಯ ಸಂಚಿಕೆಯಲ್ಲಿ ಭಾಗವಹಿಸಲು ಸುದೀಪ್ ಗ್ರೀನ್ ಸಿಗ್ನಲ್ ನೀಡಿ, ಸಾಧಕರ ಕುರ್ಚಿ ಅಲಂಕರಿಸಿದ್ದಾರೆ. ಈ ಬಗ್ಗೆ ವೀಕ್ಷಕರ ಅಭಿಪ್ರಾಯವೇನು? ಬನ್ನಿ ನೋಡೋಣ, ಕೆಳಗಿರುವ ಸ್ಲೈಡ್ ಗಳಲ್ಲಿ.....

ಜೀ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಅಭಿಮಾನಿಗಳ ಅಭಿಪ್ರಾಯ

ಇಷ್ಟು ದಿನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸುದೀಪ್ ರವರ ಜೀವನ ಚರಿತ್ರೆ ನೋಡ್ಬೇಕು ಅಂತ ಕಾತರದಿಂದ ಕಾಯ್ತಿದ್ದ ಅಭಿಮಾನಿಗಳು ಇದೀಗ ಸಂತಸಗೊಂಡಿದ್ದಾರೆ. ಜೀ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರು ಹಂಚಿಕೊಂಡಿರುವ ಅಭಿಪ್ರಾಯಗಳ ಗುಚ್ಛ ಇಲ್ಲಿದೆ. ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

ಸುದೀಪ್ ಅಭಿಮಾನಿಗಳಲ್ಲಿ ಹರ್ಷ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಭಾಗವಹಿಸಿರುವ ಬಗ್ಗೆ ವೀಕ್ಷಕರು ಫುಲ್ ಖುಷ್ ಆಗಿ ಮಾಡಿರುವ ಕಾಮೆಂಟ್ಸ್ ಇದು. ['ವೀಕೆಂಡ್ ವಿತ್ ರಮೇಶ್-2'ಗೆ ಶುಭಂ ಹಾಡಲಿದ್ದಾರೆ ಕಿಚ್ಚ ಸುದೀಪ್!]

ಜೀ ಕನ್ನಡ ಟಿ.ಆರ್.ಪಿ ಧೂಳಿಪಟ

'ವೀಕೆಂಡ್ ವಿತ್ ರಮೇಶ್' ನಲ್ಲಿ ಈ ವಾರ ಸುದೀಪ್ ಇರೋದ್ರಿಂದ ಟಿ.ಆರ್.ಪಿ ಧೂಳಿಪಟ ಗ್ಯಾರೆಂಟಿ ಅನ್ನೋದು ವೀಕ್ಷಕರ ಅಭಿಪ್ರಾಯ. [ಫೋಟೋ ಗ್ಯಾಲರಿ; ಸಾಧಕರ ಸೀಟ್ ನಲ್ಲಿ ಮಿಂಚಿದ ಕಿಚ್ಚ ಸುದೀಪ್]

ಈಗ್ಲಿಂದ್ಲೇ ಕಾತರ

ಶನಿವಾರ ಹಾಗೂ ಭಾನುವಾರ ಪ್ರಸಾರವಾಗುವ ಸಂಚಿಕೆಯನ್ನ ಕಣ್ತುಂಬಿಕೊಳ್ಳುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.

ಜೀ ಕನ್ನಡಗೆ ಥ್ಯಾಂಕ್ಸ್

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ರನ್ನ ಆಹ್ವಾನಿಸಿರುವುದಕ್ಕೆ ಅಭಿಮಾನಿಗಳು ಜೀ ಕನ್ನಡ ವಾಹಿನಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ.

ಕಾರ್ಯಕ್ರಮವನ್ನು ಯಾಕೆ ನೋಡ್ಬೇಕು?

'ಸುದೀಪ್ ಬಗ್ಗೆ ತಿಳಿದುಕೊಳ್ಳದೇ ಕೆಲವರು ಮಾತನಾಡುತ್ತಾರೆ. ಅಂತವರು ಈ ಶೋ ನೋಡಲೇಬೇಕು' ಅಂತ ಸುದೀಪ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಸಾಧಕರ ಸೀಟ್ ಗೆ ಅರ್ಹ!

ಸಾಧಕರ ಕುರ್ಚಿಯಲ್ಲಿ ಕೂರಲು ಸುದೀಪ್ ಅರ್ಹ ವ್ಯಕ್ತಿ ಅನ್ನೋದು ಅಭಿಮಾನಿಗಳ ಅಭಿಪ್ರಾಯ

ಜೀ ಕನ್ನಡ ವಾಹಿನಿಗೆ ಅಭಿಮಾನಿಗಳ ಮನವಿ

''ವೀಕೆಂಡ್ ವಿತ್ ರಮೇಶ್-2' ಚಿತ್ರರಂಗದವರಿಗೆ ಮಾತ್ರ ಸೀಮಿತವಾಯ್ತು. ಮುಂದಿನ ಸೀಸನ್ ನಲ್ಲಿ ಇತರೆ ಕ್ಷೇತ್ರದ ಸಾಧಕರ ಪರಿಚಯ ಮಾಡಿಕೊಡಿ'' ಅಂತ ಕೆಲವರು ಜೀ ಕನ್ನಡ ವಾಹಿನಿಗೆ ಮನವಿ ಮಾಡಿದ್ದಾರೆ.

ಡ್ರಾವಿಡ್ ಗಾಗಿ ವೇಯ್ಟಿಂಗ್!

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ಡ್ರಾವಿಡ್, ದೇವೇಗೌಡ, ಚಕ್ರವರ್ತಿ ಸೂಲಿಬೆಲೆ, ಪ್ರಾಣೇಶ್ ರವರನ್ನು ಕರೆಸಿ ಅನ್ನೋದು ಕೆಲವರ ಆಗ್ರಹ.

ಜಯಂತಿ, ಜಗ್ಗೇಶ್ ಬೇಕು!

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಜಗ್ಗೇಶ್ ಹಾಗೂ ಜಯಂತಿ ಭಾಗವಹಿಸಲಿ ಅನ್ನೋದು ಕೆಲವರ ಬೇಡಿಕೆ.

English summary
Zee Kannada Channel Viewers are happy over Kannada Actor, Director Kiccha Sudeep for taking part in Weekend With Ramesh season2.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada