For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಗೂ 'ಬಿಗ್ ಬಾಸ್' ದೊಡ್ಡ ಸವಾಲು.! ಯಾಕೆ ಗೊತ್ತಾ.?

  By ಭರತ್ ಕುಮಾರ್
  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹುಮುಖ ಪ್ರತಿಭೆ. ಒಂದು ಕಡೆ ಸಿನಿಮಾಗಳಲ್ಲಿ ಅಭಿನಯಿಸುತ್ತಾ, ಮತ್ತೊಂದೆಡೆ ಕ್ರಿಕೆಟ್ ಆಡುತ್ತಾ, ಬಿಜಿ ಶೆಡ್ಯೂಲ್ ನಡುವೆಯೂ 'ಬಿಗ್ ಬಾಸ್' ಕಾರ್ಯಕ್ರಮ ನಡೆಸಿಕೊಡುವ ಸುದೀಪ್ ತಾಳ್ಮೆ, ವೃತ್ತಿಪರತೆ ಹಾಗೂ ಬದ್ಧತೆಗೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು.

  ಕಿರುತೆರೆ ವೀಕ್ಷಕರು ತುದಿಗಾಲಲ್ಲಿ ನಿಂತು ಕಾಯುತ್ತಿರುವ 'ಬಿಗ್‌ ಬಾಸ್‌ ಕನ್ನಡ-4' ಇದೇ ತಿಂಗಳ 9 ರಿಂದ ಶುರುವಾಗಲಿದೆ. ಈ ಬಾರಿಯೂ 'ಬಿಗ್‌ ಬಾಸ್‌' ವೇದಿಕೆ ಮೇಲೆ 'ವಾರದ ಕಥೆ ಕಿಚ್ಚನ ಜೊತೆ' ನಡೆಯಲಿದೆ. [ಬಿಗ್ ಬಾಸ್ ಕನ್ನಡ 4: 5 ಮಂದಿ ಸ್ಪರ್ಧಿಗಳ ಹೆಸರು ಬಹಿರಂಗ!]

  'ಬಿಗ್ ಬಾಸ್' ಸ್ಪರ್ಧಿಗಳಿಗೆ ಮಾತ್ರ ಈ ರಿಯಾಲಿಟಿ ಶೋ ದೊಡ್ಡ ಸವಾಲು ಅಂತ ಎಲ್ಲರೂ ಭಾವಿಸಿದ್ರೆ, ಎಲ್ಲಾ ಸ್ಪರ್ಧಿಗಳಿಗಿಂತ ದೊಡ್ಡ ಸವಾಲನ್ನ ಎದುರಿಸಬೇಕಾಗಿರುವುದು ಕಿಚ್ಚ ಸುದೀಪ್. ಅದು ಹೇಗೆ ಮತ್ತು ಯಾಕೆ ಎಂಬ ಗೊಂದಲ ಇದ್ದರೆ, ಸುದೀಪ್ ಮಾತುಗಳನ್ನ ಓದಿ ಡೌಟ್ ಕ್ಲಿಯರ್ ಮಾಡಿಕೊಳ್ಳಿ....

  'ಬಿಗ್ ಬಾಸ್ ಕನ್ನಡ-4' ಬಗ್ಗೆ ಕಿಚ್ಚ ಸುದೀಪ್ ಮಾತು

  'ಬಿಗ್ ಬಾಸ್ ಕನ್ನಡ-4' ಬಗ್ಗೆ ಕಿಚ್ಚ ಸುದೀಪ್ ಮಾತು

  ''ನೋಡ್ತಾ ನೋಡ್ತಾ ಮೂರು ಸೀಸನ್ ಮುಗಿದು ಹೋಗಿದೆ. ಈಗ ನಾಲ್ಕನೆ ಸೀಸನ್ ಶುರುವಾಗ್ತಿದೆ. ಹೊಸ ಸ್ವರ್ಧಿಗಳು, ಹೊಸ ವ್ತಕ್ತಿತ್ವಗಳು, ಹೊಸ ಮಾತು, ಹೊಸ ಜಗಳ ಎಲ್ಲರಂತೆ ನಾನು ಕೂಡ ಕಾಯ್ತಿದ್ದೀನಿ'' - ಕಿಚ್ಚ ಸುದೀಪ್ [ಎಕ್ಸ್ ಕ್ಲೂಸಿವ್: 'ಬಿಗ್ ಬಾಸ್ ಕನ್ನಡ-4' ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸಂದರ್ಶನ]

  'ಬಿಗ್ ಬಾಸ್' ಅಂದ್ರೆ ನನಗೆ ದೊಡ್ಡ ಸವಾಲು

  'ಬಿಗ್ ಬಾಸ್' ಅಂದ್ರೆ ನನಗೆ ದೊಡ್ಡ ಸವಾಲು

  ''ಬಿಗ್‌ ಬಾಸ್‌ ಅನ್ನೋದು ವ್ಯಕ್ತಿತ್ವಗಳನ್ನ ಹೊರ ಹಾಕೋ ವೇದಿಕೆ. ಅಲ್ಲಿ ಭಾವನೆಗಳಿದೆ, ಕಿರಿಕ್‌ ಇದೆ, ಕೋಪ ಇದೆ, ಅಳುನೂ ಇದೆ. ಎಲ್ಲರನ್ನ ಸಮಾಧಾನ ಮಾಡ್ಬೇಕು. ಎಲ್ಲವನ್ನ ನಿಯಂತ್ರಣ ಮಾಡ್ಬೇಕು. ಎಲ್ಲವೂ ಗೊತ್ತಿದ್ರೂ, ಏನೂ ಗೊತ್ತಿಲ್ಲದ ಹಾಗೆ ನಟಿಸಬೇಕು. ಇದೊಂಥರ ನನಗೆ ದೊಡ್ಡ ಸವಾಲು. ಅದು ನನ್ನ ಜವಾಬ್ದಾರಿ ಕೂಡ ಹೌದು'' - ಕಿಚ್ಚ ಸುದೀಪ್

  ಹೆಸ್ರಲ್ಲಿ 'ಕಿರಿಕ್‌' ಇಲ್ಲದವರೂ 'ಕಿರಿಕ್‌' ಮಾಡ್ತಾರೆ

  ಹೆಸ್ರಲ್ಲಿ 'ಕಿರಿಕ್‌' ಇಲ್ಲದವರೂ 'ಕಿರಿಕ್‌' ಮಾಡ್ತಾರೆ

  ''ಹೆಸ್ರಲ್ಲಿ ಕಿರಿಕ್‌ ಇದ್ದವರು ಮಾತ್ರ ಕಿರಿಕ್‌ ಮಾಡಲ್ಲ, ಹೆಸ್ರಲ್ಲಿ ಕಿರಿಕ್‌ ಇಲ್ಲದವರೂ ಕೂಡ 'ಬಿಗ್‌ ಬಾಸ್‌' ನಲ್ಲಿ ಕಿರಿಕ್‌ ಮಾಡಿದ್ದಾರೆ. ಹುಚ್ಚ ವೆಂಕಟ್‌ ವಿಷ್ಯದಲ್ಲಿ ಹಾಗೆ ಆಗುತ್ತೆ ಅಂತ ನಾವ್ಯಾರೂ ಪ್ಲಾನ್ ಮಾಡಿಲ್ಲ. ಅದು ಆಗಿದ್ದು ಅಷ್ಟೇ.'' - ಕಿಚ್ಚ ಸುದೀಪ್

  ಸುದೀಪ್ ತಪ್ಪದೇ 'ಬಿಗ್ ಬಾಸ್' ನೋಡ್ತಾರೆ

  ಸುದೀಪ್ ತಪ್ಪದೇ 'ಬಿಗ್ ಬಾಸ್' ನೋಡ್ತಾರೆ

  ಸುದೀಪ್‌ ಬಿಗ್‌ ಬಾಸ್‌ ಎಪಿಸೋಡ್ ಗಳನ್ನ ನೋಡಲ್ಲ. ನೋಡದೇ ವಾರಾಂತ್ಯದ ಕಾರ್ಯಕ್ರಮವನ್ನ ನಿರೂಪಣೆ ಮಾಡ್ತಾರೆ ಅನ್ನೋದು ಕೆಲವರ ವಾದ. ಆದ್ರೆ, ಸುದೀಪ್‌ 'ಬಿಗ್‌ಬಾಸ್‌'ನ ಎಲ್ಲಾ ಎಪಿಸೋಡ್ ಗಳನ್ನ ಮಿಸ್‌ ಮಾಡ್ದೆ ನೋಡ್ತಾರಂತೆ.

  ಕಿಚ್ಚ ಮಾಡುತ್ತಾರೆ ಹೋಮ್ ವರ್ಕ್

  ಕಿಚ್ಚ ಮಾಡುತ್ತಾರೆ ಹೋಮ್ ವರ್ಕ್

  ಹೌದು, ಸುದೀಪ್‌ 'ಬಿಗ್‌ ಬಾಸ್‌' ಕಾರ್ಯಕ್ರಮಕ್ಕಾಗಿ ಹೋಮ್‌ ವರ್ಕ್ ಮಾಡ್ತಾರಂತೆ. ಸುದೀಪ್‌ ಮನೆಯಲ್ಲಿ ಎಲ್ಲರೂ ಬಿಗ್‌ ಬಾಸ್‌ ನೋಡ್ತಾರಂತೆ. ಆದ್ರೆ, ಸುದೀಪ್‌ ಮಾತ್ರ ಒಬ್ಬರೇ ಕೂತು ಕಾರ್ಯಕ್ರಮ ವೀಕ್ಷಿಸುತ್ತಾರೆ. ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುವ ಎಲ್ಲಾ ಎಪಿಸೋಡ್ ಗಳನ್ನ ಕಿಚ್ಚ ತಪ್ಪದೇ ನೋಡುತ್ತಾರೆ.

  ಶೂಟಿಂಗ್ ಇದ್ದರೆ?

  ಶೂಟಿಂಗ್ ಇದ್ದರೆ?

  ಸಿನಿಮಾಗಳ ಶೂಟಿಂಗ್ ನಲ್ಲಿ ಬಿಜಿಯಾಗಿದ್ದರೆ, 'ಬಿಗ್‌ ಬಾಸ್‌' ನೋಡಲು ಸಾಧ್ಯವಾಗದೆ ಇದ್ರೆ, ಆ ಎಪಿಸೋಡ್ ಗಳನ್ನ ರೆಕಾಡ್ ಮಾಡಿ ನೋಡ್ತಾರಂತೆ.

  ರೂಲ್ಸ್ ಬ್ರೇಕ್‌ ಮಾಡಿದ್ದಾರೆ.!

  ರೂಲ್ಸ್ ಬ್ರೇಕ್‌ ಮಾಡಿದ್ದಾರೆ.!

  ಬಿಗ್‌ ಬಾಸ್‌ನ ಕೆಲವು ರೂಲ್ಸ್ ಗಳನ್ನ ಸ್ವತಃ ಕಿಚ್ಚ ಸುದೀಪ್ ಕೂಡ ಬ್ರೇಕ್‌ ಮಾಡಿದ್ದಾರಂತೆ. ಕೆಲವೊಂದು ವಿಚಾರಗಳಲ್ಲಿ ಕೆಲವರನ್ನ ಬೇಡವಾದ್ರೂ ಸಮಾಧಾನ ಮಾಡಿದ್ದಾರಂತೆ. ಭಾವನೆಗಳಿಗೆ ಬೆಲೆ ಕೊಟ್ಟಿದ್ದಾರಂತೆ.

  ಈ ಬಾರಿ 'ಹೆಬ್ಬುಲಿ' ಶೂಟಿಂಗ್ ಇದೆ

  ಈ ಬಾರಿ 'ಹೆಬ್ಬುಲಿ' ಶೂಟಿಂಗ್ ಇದೆ

  ಬಿಗ್‌ ಬಾಸ್‌ ಕಾರ್ಯಕ್ರಮದ ಜೊತೆಗೆ 'ಹೆಬ್ಬುಲಿ' ಚಿತ್ರದ ಶೂಟಿಂಗ್ ಕೂಡ ನಡೆಯಬೇಕಿದೆ. 'ಹೆಬ್ಬುಲಿ' ಚಿತ್ರದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಇದೇ ತಿಂಗಳ 9 ರಂದು ಸ್ವಿಟ್ಜರ್ಲ್ಯಾಂಡ್ಗೆ ಹೊರಟು ನಿಂತಿದ್ದಾರೆ ಸುದೀಪ್.

  ಅಕ್ಟೋಬರ್ 9 ರಿಂದ ನಿಮ್ಮ ಮುಂದೆ 'ಬಿಗ್‌ ಬಾಸ್‌'

  ಅಕ್ಟೋಬರ್ 9 ರಿಂದ ನಿಮ್ಮ ಮುಂದೆ 'ಬಿಗ್‌ ಬಾಸ್‌'

  ಅಕ್ಟೋಬರ್‌ 9 ರಂದು 'ಬಿಗ್‌ ಬಾಸ್‌ ಕನ್ನಡ-4' ಶುರುವಾಗುತ್ತದೆ. ಪ್ರತಿ ದಿನ ರಾತ್ರಿ 9ಕ್ಕೆ 'ಬಿಗ್ ಬಾಸ್' ಕಾರ್ಯಕ್ರಮ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಸುದೀಪ್‌ ನಿಮ್ಮ ಮುಂದೆ ಬರಲಿದ್ದಾರೆ.

  English summary
  Kannada Actor Kiccha Sudeep has spoken about his challenges in 'Bigg Boss' reality show. Have a look

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X