»   » ಆಪ್ತಮಿತ್ರ ದರ್ಶನ್ ಬಗ್ಗೆ 'ವೀಕೆಂಡ್' ನಲ್ಲಿ ಸುದೀಪ್ ಆಡಿದ ಮಾತೇನು?

ಆಪ್ತಮಿತ್ರ ದರ್ಶನ್ ಬಗ್ಗೆ 'ವೀಕೆಂಡ್' ನಲ್ಲಿ ಸುದೀಪ್ ಆಡಿದ ಮಾತೇನು?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಗಾಂಧಿನಗರದಲ್ಲಿ ಜನಜನಿತ.

ಅದ್ರಲ್ಲೂ, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ರನ್ನ ದರ್ಶನ್ Unfollow ಮಾಡಿದ್ಮೇಲಂತೂ, ಇಬ್ಬರ ದೋಸ್ತಿ ಖತಂ ಅಂತಲೇ ಎಲ್ಲರೂ ಭಾವಿಸಿದ್ದಾರೆ.

ಯಾರು ಏನೇ ಅಂದುಕೊಂಡರೂ, ಅದಕ್ಕೆ ಸ್ಪಷ್ಟನೆ ನೀಡಿ, ಅಂತೆ-ಕಂತೆ ಪುರಾಣಗಳಿಗೆ ಪೂರ್ಣ ವಿರಾಮ ಇಡುವ ಗೋಜಿಗೆ ಮಾತ್ರ ಕಿಚ್ಚ ಸುದೀಪ್ ಹಾಗೂ ದರ್ಶನ್ ಹೋಗಿಲ್ಲ. [ಪತ್ನಿ ಪ್ರಿಯಾ ಬಗ್ಗೆ 'ವೀಕೆಂಡ್' ನಲ್ಲಿ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?]

ಹೀಗಿರುವಾಗಲೇ, ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. [ಕಿಚ್ಚ ಸುದೀಪ್ ವಿಶೇಷ 'ವೀಕೆಂಡ್'ಗೆ ಆಗಮಿಸಿದ ಸ್ಪೆಷಲ್ ಗೆಸ್ಟ್ ಯಾರು?]

ಹಾಗಾದ್ರೆ, 'ಆಪ್ತಮಿತ್ರ' ದರ್ಶನ್ ಬಗ್ಗೆ ಸುದೀಪ್ ಮಾತನಾಡಿದ್ರಾ? ಇಬ್ಬರ ಸ್ನೇಹ ಈಗ ಹೇಗಿದೆ? ಸಾಧಕರ ಸೀಟ್ ಮೇಲೆ ಕೂತಿರುವ ಸುದೀಪ್ ರನ್ನ ಭೇಟಿ ಮಾಡಲು ದರ್ಶನ್ ಬಂದಿದ್ರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ....

ಸುದೀಪ್ ಸ್ನೇಹ ಜೀವಿ.!

ಕಿಚ್ಚ ಸುದೀಪ್ ದುರಹಂಕಾರಿ ಅನ್ನೋ ಗುಸು ಗುಸು ಹಬ್ಬಿರಬಹುದು. ಆದ್ರೆ, ಅವರು ಸ್ನೇಹ ಜೀವಿ ಅನ್ನೋದಕ್ಕೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣವಾದ ಕೆಲ ಸತ್ಯ ಸಂಗತಿಗಳೇ ಸಾಕ್ಷಿ. [ಫೋಟೋ ಗ್ಯಾಲರಿ; ಸಾಧಕರ ಸೀಟ್ ನಲ್ಲಿ ಮಿಂಚಿದ ಕಿಚ್ಚ ಸುದೀಪ್ ]

ರವಿಚಂದ್ರನ್ ಕೂಡ ಅದನ್ನೇ ಹೇಳಿದ್ದು!

ಸಾಧಕರ ಸೀಟ್ ಮೇಲೆ ಕೂತಿದ್ದ ಕಿಚ್ಚ ಸುದೀಪ್ ರನ್ನ ಭೇಟಿ ಮಾಡಲು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಪಾಲ್ಗೊಂಡಿದ್ದರು. ಆಗ ಸುದೀಪ್ ಬಗ್ಗೆ ರವಿಚಂದ್ರನ್ ಹೇಳಿದ ಮಾತಿದು - ''ಸುದೀಪ್ ನನ್ನ ಮಗನ ಸಮಾನ. ಅವನೊಂದಿಗೆ ಸಮಯ ಕಳೆಯಲು ಖುಷಿಯಾಗುತ್ತದೆ. ಅವನಿಗೆ ದುರಹಂಕಾರ ಎಂದು ಎಲ್ಲರೂ ಹೇಳುತ್ತಾರೆ. ಅದು ಸುಳ್ಳು'' ['ವೀಕೆಂಡ್ ವಿತ್ ರಮೇಶ್-2'ಗೆ ಶುಭಂ ಹಾಡಲಿದ್ದಾರೆ ಕಿಚ್ಚ ಸುದೀಪ್!]

ಸುದೀಪ್ ಅಂತರಾಳದ ಮಾತು

ಸುದೀಪ್ ರವರ ಅಂತರಾಳ ಕೆದಕುತ್ತಾ ಹೋದಂತೆ, ಆಪ್ತಮಿತ್ರ ದರ್ಶನ್ ಬಗ್ಗೆ ಅವರ ಹೃದಯದಲ್ಲಡಗಿದ್ದ ಮಾತುಗಳು ಒಂದೊಂದಾಗಿ ಹೊರಬರತೊಡಗಿದವು.

ದರ್ಶನ್ ಬಗ್ಗೆ ಸುದೀಪ್ ಮಾತು

''ದರ್ಶನ್ ಜೊತೆಗಿನ ನನ್ನ ಸ್ನೇಹ ವಿವಾದಗಳನ್ನು ಮೀರಿದ್ದು. ನಮ್ಮ ಗೆಳೆತನ ಬಹಳ ಎತ್ತರದ್ದು'' ಅಂತ ಸುದೀಪ್ ಹೇಳಿದರು.

ದರ್ಶನ್ ರನ್ನ ಮಿಸ್ ಮಾಡಿಕೊಂಡ ಸುದೀಪ್!

'ಈ ಕಾರ್ಯಕ್ರಮದಲ್ಲಿ ನಾನು ದರ್ಶನ್ ಅವರನ್ನು ಮಿಸ್ ಮಾಡಿಕೊಂಡೆ' ಅಂತ ಸುದೀಪ್ ಹೇಳಿದರು.

ಹಾಗಾದ್ರೆ, ದರ್ಶನ್ ಬರ್ಲಿಲ್ವಾ?

ಈ ಪ್ರಶ್ನೆಗೆ ಉತ್ತರ ಸಿಗ್ಬೇಕು ಅಂದ್ರೆ, ಈ ವಾರಾಂತ್ಯದಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ನೋಡ್ಬೇಕು.

ಶಿವಣ್ಣ ಹಾಗೂ ಪುನೀತ್ ಬಗ್ಗೆ ಸುದೀಪ್ ಮಾತು

''ನಾನು, ಶಿವಣ್ಣ ಹಾಗೂ ಪುನೀತ್ ಗೆಳೆಯರು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ'' ಅಂತ ಇದೇ ಕಾರ್ಯಕ್ರಮದಲ್ಲಿ ಸುದೀಪ್ ಹೇಳಿದರು.

ಸುದೀಪ್ ಬಗ್ಗೆ ಶಿವಣ್ಣ-ಅಪ್ಪು ಕೂಡ ಮಾತನಾಡಿದ್ದಾರೆ!

ವಿಶೇಷ ಅಂದ್ರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್, ಸುದೀಪ್ ಗಾಗಿ ವಿಡಿಯೋ ಬೈಟ್ಸ್ ಕಳುಹಿಸಿದ್ದರು.

ಸುದೀಪ್ ರನ್ನ ಕೊಂಡಾಡಿದ ಚಿತ್ರರಂಗ

ಕ್ರೇಜಿ ಸ್ಟಾರ್ ರವಿಚಂದ್ರನ್, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ಯೋಗರಾಜ್ ಭಟ್, ಅರ್ಜುನ್ ಜನ್ಯ. ನಂದಕಿಶೋರ್, ಅರುಣ್ ಸಾಗರ್, ಧರ್ಮ...ಚಿತ್ರರಂಗದಿಂದ ಹಲವು ಗಣ್ಯರು ಆಗಮಿಸಿ ಕಿಚ್ಚ ಸುದೀಪ್ ರನ್ನ ಕೊಂಡಾಡಿದರು.

ಇದು ಸ್ಯಾಂಪಲ್ ಮಾತ್ರ

ಸುದೀಪ್ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಹೈಲೈಟ್ಸ್ ಮಾತ್ರ ನಿಮ್ಮ ಮುಂದೆ ಇಟ್ಟಿದ್ದೀವಿ. ದರ್ಶನ್ ಬಗ್ಗೆ ಹಾಗೂ ಚಿತ್ರರಂಗದ ಅನೇಕರ ಬಗ್ಗೆ ಸುದೀಪ್ ಇನ್ನೂ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎಲ್ಲವನ್ನೂ ಜೀ ಕನ್ನಡದಲ್ಲಿ ಪ್ರಸಾರವಾಗುವ ಸಂಚಿಕೆಯಲ್ಲಿ ನೋಡಿ....

ಸಂಚಿಕೆ ಪ್ರಸಾರ ಯಾವಾಗ?

ಈ ವಾರಾಂತ್ಯ ಅಂದ್ರೆ, ಏಪ್ರಿಲ್ 23 ಹಾಗೂ 24 ರಂದು ಸುದೀಪ್ ರವರ ವಿಶೇಷ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಪ್ರಸಾರವಾಗಲಿದೆ.

English summary
Kannada Actor, Director Kiccha Sudeep spoke about Challenging Star Darshan in Weekend With Ramesh season2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada