Don't Miss!
- News
ಶ್ವಾನಗಳಿಂದ ಕೊರೊನಾ ಸೋಂಕು ನಿಖರ ಪತ್ತೆ: ಅಧ್ಯಯನ ವರದಿ
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Automobiles
ಹೊಸ ದರ ಪ್ರಕಟ- ಮಾರುತಿ ಸುಜುಕಿ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್‌ಬಾಸ್‌ಗಿಂತಲೂ ದೊಡ್ಡ ರಿಯಾಲಿಟಿ ಶೋನ ಭಾಗವಾಗಲಿದ್ದಾರೆ ಸುದೀಪ್!
ಬಿಗ್‌ಬಾಸ್ ರಿಯಾಲಿಟಿ ಶೋ ನ ನಿರೂಪಕರಾಗಿರುವ ಸುದೀಪ್ ಆ ಕಾರ್ಯವನ್ನು ಅತ್ಯದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಸುದೀಪ್ ಅವರನ್ನು ಹೊರತುಪಡಿಸಿ ಇನ್ಯಾರನ್ನೂ ಬಿಗ್‌ಬಾಸ್ ನಿರೂಪಕರಾಗಿ ಊಹಿಸಲು ಸಾಧ್ಯವಿಲ್ಲದಂತೆ ಸುದೀಪ್ ಅವರು ಆ ಶೋ ಅನ್ನು ನಡೆಸಿಕೊಡುತ್ತಿದ್ದಾರೆ.
ಆದರೆ ಇದರ ನಡುವೆ ಮತ್ತೊಂದು ಬಹುದೊಡ್ಡ ರಿಯಾಲಿಟಿ ಶೋ ಅನ್ನು ಸುದೀಪ್ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ಸುದ್ದಿಗಳು ನಿಜವಾದಲ್ಲಿ ಬಿಗ್‌ಬಾಸ್ ಗಿಂತ ಎಲ್ಲ ರೀತಿಯಲ್ಲಿಯೂ ದೊಡ್ಡ ರಿಯಾಲಿಟಿ ಶೋ ನ ಭಾಗವಾಗಲಿದ್ದಾರೆ ಸುದೀಪ್.
ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸುದೀಪ್ ಭೇಟಿ: ಕಿಚ್ಚನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು
ಪ್ರಖ್ಯಾತ ನೆಟ್‌ವರ್ಕ್ ಸಂಸ್ಥೆ ಸನ್ ನೆಟ್‌ವರ್ಕ್ ತೆರೆಗೆ ತರಲಿರುವ ನಾಲ್ಕು ಭಾಷೆಗಳಲ್ಲಿ ಒಟ್ಟಿಗೆ ಪ್ರಸಾರವಾಗಲಿರುವ ಬಹುದೊಡ್ಡ ಅಡುಗೆ ಶೋ (ಕುಕಿಂಗ್ ಶೋ) ಅನ್ನು ಸುದೀಪ್ ಅವರು ನಿರೂಪಣೆ ಮಾಡಲಿದ್ದಾರೆ.

ಅಡುಗೆ ಮಾಡುವುದು ಸುದೀಪ್ ಗೆ ಬಹುಪ್ರಿಯ
ಸುದೀಪ್ ಅವರು ಸ್ವತಃ ಪಾಕಪ್ರಿಯರು. ಅಡುಗೆ ಮಾಡುವುದನ್ನು ಬಹಳವಾಗಿ ಎಂಜಾಯ್ ಮಾಡುತ್ತಾರೆ ಸುದೀಪ್. ಅಡುಗೆ ಮಾಡುವುದು ಸುದೀಪ್ ಅವರಿಗೆ ಧ್ಯಾನದಂತೆ, ಒತ್ತಡ ನಿವಾರಣೆಗೆ ಸಹಕಾರಿ ಈ ವಿಷಯವನ್ನು ಅವರೇ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

ತಮಗಾಗಿಯೇ ಅಡುಗೆ ಮನೆ ನಿರ್ಮಿಸಿಕೊಂಡಿದ್ದಾರೆ
ತಮ್ಮ ಮನೆಗೆ ಆಗಮಿಸುವ ಅತಿಥಿಗಳಿಗೆ ತಾವೇ ಅಡುಗೆ ಮಾಡಿ ಬಡಿಸುವ ಅಭ್ಯಾಸವೂ ಸುದೀಪ್ ಅವರಿಗೆ ಇದೆ. ತಮಗಾಗಿಯೇ ವಿಶಾಲವಾದ ಅಡುಗೆ ಮನೆಯನ್ನು ಸುದೀಪ್ ಅವರು ತಮ್ಮ ಮನೆಯಲ್ಲಿ ನಿರ್ಮಾಣ ಮಾಡಿಕೊಂಡಿದ್ದಾರೆ.
ಉಪೇಂದ್ರ 'ಕಬ್ಜ' ಚಿತ್ರೀಕರಣ: ಸುದೀಪ್ ಎಂಟ್ರಿಗೆ ಸಮಯ ನಿಗದಿ

ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದೆ?
ಸುದೀಪ್ ಅವರ ಅಡುಗೆ ಪ್ರೇಮ ಗೊತ್ತಿರುವ ಕಾರಣಕ್ಕೆ ಸುದೀಪ್ ಅವರನ್ನು ಸನ್ ನೆಟ್‌ವರ್ಕ್ ಆಯ್ಕೆ ಮಾಡಿದ್ದು. ಕನ್ನಡದಲ್ಲಿ ಈ ಶೋ ಅನ್ನು ಸುದೀಪ್ ಅವರು ನಡೆಸಿಕೊಡಲಿದ್ದಾರೆ. ಕೆಲವೇ ದಿನಗಳಲ್ಲಿ ಈ ರಿಯಾಲಿಟಿ ಶೋ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ.

ಯಾವ ಭಾಷೆಯಲ್ಲಿ ಯಾವ ನಟ?
ಇದೇ ರಿಯಾಲಿಟಿ ಶೋ ಅನ್ನು ತೆಲುಗಿನಲ್ಲಿ ವೆಂಕಟೇಶ್, ತಮಿಳಿನಲ್ಲಿ ವಿಜಯ್ ಸೇತುಪತಿ, ಮಲಯಾಳಂ ನಲ್ಲಿ ಪ್ರಥ್ವಿರಾಜ್ ನಡೆಸಿಕೊಡಲಿದ್ದಾರೆ. ಈ ರಿಯಾಲಿಟಿ ಶೋ 156 ಎಪಿಸೋಡ್‌ಗಳನ್ನು ಒಳಗೊಂಡಿರುತ್ತದೆಯಂತೆ.