»   » 'ವೀಕೆಂಡ್ ವಿತ್ ರಮೇಶ್' ಬಗ್ಗೆ ಟ್ವಿಟ್ಟರ್ ನಲ್ಲಿ ಮನದಾಳ ಬಿಚ್ಚಿಟ್ಟ ಸುದೀಪ್!

'ವೀಕೆಂಡ್ ವಿತ್ ರಮೇಶ್' ಬಗ್ಗೆ ಟ್ವಿಟ್ಟರ್ ನಲ್ಲಿ ಮನದಾಳ ಬಿಚ್ಚಿಟ್ಟ ಸುದೀಪ್!

Posted By:
Subscribe to Filmibeat Kannada

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರ ಜೀವನದ ಪುಟಗಳನ್ನು ತಿರುವಿ ಹಾಕುವ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಎರಡನೇ ಸೀಸನ್ ಮುಕ್ತಾಯ ಹಂತ ತಲುಪಿದೆ.

'ಜೋಗಿ' ಪ್ರೇಮ್ ರಿಂದ ಶುರುವಾದ 'ವೀಕೆಂಡ್ ವಿತ್ ರಮೇಶ್-2' ಪಯಣ ಕಿಚ್ಚ ಸುದೀಪ್ ರಿಂದ ಅಂತ್ಯವಾಗಲಿದೆ. [ಕಿಚ್ಚ ಸುದೀಪ್ ವಿಶೇಷ 'ವೀಕೆಂಡ್'ಗೆ ಆಗಮಿಸಿದ ಸ್ಪೆಷಲ್ ಗೆಸ್ಟ್ ಯಾರು?]

ಈಗಾಗಲೇ, ಕಿಚ್ಚ ಸುದೀಪ್ ಭಾಗಿಯಾಗಿರುವ 'ವೀಕೆಂಡ್ ವಿತ್ ರಮೇಶ್-2' ಗ್ರ್ಯಾಂಡ್ ಫಿನಾಲೆ ಸಂಚಿಕೆ ಚಿತ್ರೀಕರಣ ಮುಕ್ತಾಯಗೊಂಡಿದೆ. [ಪತ್ನಿ ಪ್ರಿಯಾ ಬಗ್ಗೆ 'ವೀಕೆಂಡ್' ನಲ್ಲಿ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?]

'ವೀಕೆಂಡ್ ಟೆಂಟ್' ನಲ್ಲಿ ತಮ್ಮ ಜೀವನದ ದರ್ಶನ ಮಾಡಿದ ಕಿಚ್ಚ ಸುದೀಪ್ ಅಕ್ಷರಶಃ ಭಾವುಕರಾಗಿದ್ದಾರೆ. ಕಾರ್ಯಕ್ರಮದ ಚಿತ್ರೀಕರಣ ಮುಗಿದ ಕೂಡಲೆ, ಟ್ವಿಟ್ಟರ್ ನಲ್ಲಿ ತಮ್ಮ ಮನದಾಳವನ್ನು ಸುದೀಪ್ ಹಂಚಿಕೊಂಡಿದ್ದಾರೆ. ಮುಂದೆ ಓದಿ....

'ವೀಕೆಂಡ್ ವಿತ್ ರಮೇಶ್' ಬಗ್ಗೆ ಸುದೀಪ್ ಟ್ವೀಟ್

ಕಳೆದ ವಾರವಷ್ಟೇ ಬೆಂಗಳೂರಿನ ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ 'ವೀಕೆಂಡ್ ವಿತ್ ರಮೇಶ್ ಸುದೀಪ್ ವಿಶೇಷ' ಸಂಚಿಕೆಯ ಚಿತ್ರೀಕರಣ ನಡೆಯಿತು. ಶೂಟಿಂಗ್ ಮುಗಿದ ಬಳಿಕ ಸಂತಸಗೊಂಡ ಕಿಚ್ಚ ಸುದೀಪ್ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಸುದೀಪ್ ಮಾಡಿರುವ ಟ್ವೀಟ್ ಗಳನ್ನ ನೋಡಲು ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

ವಂಡರ್ ಫುಲ್ ಜರ್ನಿ!

''ಕೆಲಸ ಮಾಡಲು ಶುರು ಮಾಡಿದಾಗಿನಿಂದ, ಹಿಂದಿರುಗಿ ನೋಡಿರಲಿಲ್ಲ. ಇವತ್ತು ಒಮ್ಮೆ ಹಿಂದೆ ತಿರುಗಿ ನೋಡಿದಾಗ, ನನ್ನ ಜೀವನ ಪಯಣ ಎಷ್ಟು ಸುಂದರವಾಗಿತ್ತು ಅಂತ ಅನಿಸ್ತು'' ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ.

ರಮೇಶ್ ಅರವಿಂದ್ ಗೆ ಥ್ಯಾಂಕ್ಸ್!

''ಜೀ ಕನ್ನಡ ವಾಹಿನಿ ಹಾಗೂ ರಮೇಶ್ ಅರವಿಂದ್ ಸರ್ ಗೆ ನನ್ನ ಧನ್ಯವಾದಗಳು. ಇವತ್ತಿನ ದಿನ ಇಷ್ಟು ಚೆನ್ನಾಗಿರಲು ನೀವು ಕಾರಣ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಯಶಸ್ಸಿಗೆ ನನ್ನ ಶುಭಹಾರೈಕೆ'' - ಸುದೀಪ್.

ಹಿಂದಿನ ದಿನಗಳೇ ಚೆಂದ!

''ನನ್ನ ಶಾಲೆ, ಕಾಲೇಜಿನ ಗೆಳೆಯರು, ಶಿಕ್ಷಕರನ್ನು ನೋಡಿ ತುಂಬಾ ಖುಷಿ ಆಯ್ತು. ಅಂದಿನ ದಿನಗಳಿಗೆ ನನ್ನನ್ನ ಕರೆದುಕೊಂಡು ಹೋಗುವ ಒಂದು ಟೈಮ್ ಮಷಿನ್ ಇದಿದ್ರೆ ಎಷ್ಟು ಚೆನ್ನಾಗಿರ್ತಿತ್ತು'' - ಸುದೀಪ್

ಎಲ್ಲರಿಗೂ ಥ್ಯಾಂಕ್ಸ್!

''ನನಗೆ ವಿಶ್ ಮಾಡಲು ಚಿತ್ರರಂಗದಿಂದ ಬಂದ ಎಲ್ಲರಿಗೂ ಹಾಗೂ ವಿಡಿಯೋ ಬೈಟ್ಸ್ ಕಳುಹಿಸಿದ ಎಲ್ಲರಿಗೂ ನನ್ನ ಧನ್ಯವಾದ'' - ಸುದೀಪ್

ಎಲ್ಲಾ ಸ್ನೇಹಿತರಿಗೆ....

''ಸ್ಟುಡಿಯೋದಲ್ಲಿ ಇಡೀ ದಿನ ಚಿಯರ್ ಮಾಡುತ್ತಾ, ನಗುತ್ತಾ ಕಾಲ ಕಳೆದ ನನ್ನ ಎಲ್ಲಾ ಸ್ನೇಹಿತರಿಗೆ ಹೃತ್ಪೂರ್ವಕ ಧನ್ಯವಾದ'' - ಸುದೀಪ್

ಪತ್ರಕರ್ತರ ಬಗ್ಗೆ ಗೌರವ

''ಕಾರ್ಯಕ್ರಮದ ಬಗ್ಗೆ ವರದಿ ಮಾಡಲು ಎಷ್ಟೋ ಪತ್ರಕರ್ತರು ಸ್ಟುಡಿಯೋಗೆ ಬಂದಿದ್ರು ಅಂತ ಗೊತ್ತಾಯ್ತು. ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಬಗ್ಗೆ ಸದಾ ಗೌರವ ಹಾಗೂ ವಿಶ್ವಾಸ ಇರುತ್ತದೆ'' - ಸುದೀಪ್

ಸಂಚಿಕೆ ಪ್ರಸಾರ ಯಾವಾಗ?

ಈ ವಾರಾಂತ್ಯ ಅಂದ್ರೆ, ಏಪ್ರಿಲ್ 23 ಹಾಗೂ 24 ರಂದು ಸುದೀಪ್ ರವರ ವಿಶೇಷ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಪ್ರಸಾರವಾಗಲಿದೆ.

ಯಾರಿಗೂ ಗೊತ್ತಿಲ್ಲದ ಅನೇಕ ವಿಷಯಗಳು ಬಹಿರಂಗವಾಗಲಿದೆ

ಕಿಚ್ಚ ಸುದೀಪ್ ಬಗ್ಗೆ ಅಭಿಮಾನಿಗಳಿಗೆ ಗೊತ್ತಿಲ್ಲದ ಅನೇಕ ಸಂಗತಿಗಳು, ಅದೆಷ್ಟೋ ನೆನಪುಗಳು ಹೃದಯಾಂತರಾಳದಿಂದ ಹೊರಬಂದು 'ವೀಕೆಂಡ್ ವಿತ್ ರಮೇಶ್' ಗ್ರ್ಯಾಂಡ್ ಫಿನಾಲೆಗೆ ಒಂದು ವಿಶೇಷ ಅಂತ್ಯವನ್ನು ತಂದುಕೊಟ್ಟಿದೆ.

English summary
Kannada Actor, Director, Kiccha Sudeep has taken his twitter account to thank Actor Ramesh Aravind and Zee Kannada Channel for his wonderful episode in Weekend With Ramesh season2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada