For Quick Alerts
  ALLOW NOTIFICATIONS  
  For Daily Alerts

  ಓನ್ಲಿ ಉದಯ ಟಿವಿಯಲ್ಲಿ ಸುದೀಪ್ 'ವಿಷ್ಣುವರ್ಧನ'

  |

  ಕಿಚ್ಚ ಸುದೀಪ್ ನಾಯಕತ್ವ ಹಾಗೂ ದ್ವಾರಕೀಶ್ ನಿರ್ಮಾಣದ 'ವಿಷ್ಣುವರ್ಧನ' ಚಿತ್ರವು ಇಂದು (14 ನವೆಂಬರ್ 2012) ಸಾಯಂಕಾಲ 6-00 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಚಿತ್ರವು ಅಪಾರ ಮೆಚ್ಚುಗೆ ಗಳಿಸಿದ್ದಲ್ಲದೇ ಬಾಕ್ಸ್ ಆಫೀಸ್ ನಲ್ಲಿ ಕೂಡ ಸೂಪರ್ ಹಿಟ್ ದಾಖಲಿಸಿತ್ತು. ಸುದೀಪ್ ಹಾಗೂ ಭಾವನಾ ಜೋಡಿಯ ಈ ಚಿತ್ರವು ಸಾಕಷ್ಟು ಪ್ರಶಸ್ತಿಗಳಿಗೂ ಪಾತ್ರವಾಗಿದೆ.

  ದೀಪಾವಳಿ ಹಬ್ಬದ ಪ್ರಯುಕ್ತ ಇಂದು ಈ ಚಿತ್ರವು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಈ ಚಿತ್ರವು ಭಾರಿ ಉತ್ತಮ ಪ್ರತಿಕ್ರಿಯೆ ಪಡೆಯಲಿರುವುದು ಪಕ್ಕಾ ಆಗಿದೆ. ಆದರೆ ಈಗ 'ಟಿಆರ್ ಪಿ' ನೀಡುವ ಪದ್ಧತಿ ಸದ್ಯಕ್ಕೆ ರದ್ದಾಗಿರುವುದರಿಂದ ಎಷ್ಟು ಟಿಆರ್ ಪಿ ಬಂದಿದೆ ಎನ್ನುವುದನ್ನು ಮಾತ್ರ ತಿಳಿಯಲು ಸಾಧ್ಯವಿಲ್ಲ. ಆದರೂ ಪ್ರಸಾರ ಅವಧಿ ಎಷ್ಟಾಗಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

  ತೆಲುಗು ಚಿತ್ರ 'ಈಗ'ದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಸುದೀಪ್ ಅದಕ್ಕೂ ಮೊದಲು ನಟಿಸಿ ಬಿಡುಗಡೆಯಾಗಿರುವ ಚಿತ್ರ ಈ ವಿಷ್ಣುವರ್ಧನ. ಆಗ ಸೂಪರ್ ಹಿಟ್ ಆಗಿದ್ದ ಸುದೀಪ್ ಚಿತ್ರಕ್ಕೆ ಈಗ ಮದಲಿಗಿಂತಲೂ ಸಹಜವಾಗಿಯೇ ವೀಕ್ಷಕರು ಹೆಚ್ಚು ಸಿಗುವುದು ಖಾತ್ರಿ. ಜೊತೆಗೆ, ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಕಾಣಲಿರುವುದರಿಂದ ಹಾಗೂ ಜನರು ದೀಪಾವಳಿ ರಜೆಯಲ್ಲಿ ಮನೆಯಲ್ಲೇ ಇರುವುದರಿಂದ ಬಹಳಷ್ಟು ಜನರು ನೋಡುವುದು ಖಂಡಿತ.

  ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ 'ವಿಷ್ಣುವರ್ಧನ' ಚಿತ್ರವನ್ನು ನೋಡಲು ಈಗಾಗಲೇ ಸಾಕಷ್ಟು ಜನರು ಕಾತರರಾಗಿದ್ದಾರೆ. ಸಾಮಾಜಿಕ ತಾಣಗಳಾದ 'ಫೇಸ್ ಬುಕ್' ಹಾಗೂ 'ಟ್ವಿಟ್ಟರ್'ನಲ್ಲಿಯೂ ಇದರ ಬಗ್ಗೆ ಮಾಹಿತಿಗಳು ಓಡಾಡುತ್ತಿವೆ. ಅಷ್ಟೇ ಅಲ್ಲ, ಜನರ ಬಾಯಲ್ಲೂ ಕೂಡ ಚರ್ಚೆಗಳು ನಡೆಯುತ್ತಿವೆ. ನಟ ದಿವಂಗತ ವಿಷ್ಣುವರ್ಧನ್ ಅವರ ಹೆಸರಿನ, ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಲಿರುವ ಈ ಚಿತ್ರವು ಕಿರುತೆರೆಯಲ್ಲಿ ಹೊಸ ದಾಖಲೆ ಬರೆದರೆ ಆಶ್ಚರ್ಯವಿಲ್ಲ.

  ಅಂದಹಾಗೆ, ಚಿತ್ರದ 'ವಿಷ್ಣುವರ್ಧನ' ಶೀರ್ಷಿಕೆ ಬಗ್ಗೆ ವಿವಾದವಾದ ನಂತರ ಚಿತ್ರಕ್ಕೆ 'ಓನ್ಲಿ' ವಿಷ್ಣುವರ್ಧನ' ಎಂದು ಮರುನಾಮಕರಣ ಮಾಡಲಾಗಿದೆ ಎಂಬುದು ಗಮನದಲ್ಲಿರಲಿ. ಇನ್ನೇನು ಈ ತಿಂಗಳ ಕೊನೆಗೆ (30 ನವೆಂಬರ್ 2012) ಸುದೀಪ್ ಅಭಿನಯದ 'ವರದನಾಯಕ' ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮೊದಲು ಟಿವಿಯಲ್ಲಿ ಇಂದು 'ವಿಷ್ಣುವರ್ಧನ' ವೀಕ್ಷಿಸಬಹುದು... (ಒನ್ ಇಂಡಿಯಾ ಕನ್ನಡ)

  English summary
  Kannada Actor Kichcha Sudeep acted and BS Dwarakish produced movie 'Vishnuvardhana' to Telecasts in Udaya TV Today, on 14th November 2012 at 6-00 PM. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X