»   » ಇಂದಿನಿಂದ 'ಬಿಗ್ ಬಾಸ್' ನಲ್ಲಿ ಸ್ಪೆಷಲ್ ಗೆಸ್ಟ್ ಗಳ ಎಂಟ್ರಿ.!

ಇಂದಿನಿಂದ 'ಬಿಗ್ ಬಾಸ್' ನಲ್ಲಿ ಸ್ಪೆಷಲ್ ಗೆಸ್ಟ್ ಗಳ ಎಂಟ್ರಿ.!

Posted By:
Subscribe to Filmibeat Kannada
Bigg Boss Kannada Season 5 : ವಿಶೇಷ ಅತಿಥಿಗಳನ್ನ ಸ್ವಾಗತಿಸಲು ಬಿಗ್ ಮನೆ ರೆಡಿ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ನಿನ್ನೆಯಷ್ಟೆ ಸೆಲೆಬ್ರಿಟಿ ಲಿಸ್ಟ್ ನಲ್ಲಿದ್ದ ಕೃಷಿ ತಾಪಂಡ ಎಲಿಮಿನೇಟ್ ಆಗಿದ್ದಾರೆ. ಕೃಷಿ ಹೊರ ಬರ್ತಿದ್ದಂತೆ ಈಗ 'ಬಿಗ್ ಬಾಸ್' ಗೆ ಹೊಸ ಸ್ಪರ್ಧಿಗಳ ಎಂಟ್ರಿ ಆಗಲಿದ್ಯಂತೆ.

ಈ ತರಹದ ಸುದ್ದಿಯೊಂದು ಸದ್ಯ ಹರಿದಾಡುತ್ತಿದ್ದು, ಈ ವಾರದಲ್ಲಿ ಮೂರು ಸ್ಪರ್ಧಿಗಳನ್ನ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸಲಾಗುತ್ತಂತೆ. ಈ ಹಿಂದೆ 'ಬಿಗ್ ಬಾಸ್' ಮನೆಯಲ್ಲಿದ್ದು, ಪ್ರೇಕ್ಷಕರಿಗೆ ಸಖತ್ ಮನೋರಂಜನೆ ನೀಡಿದ್ದ ಸ್ಪರ್ಧಿಗಳನ್ನ ಒಳಗೆ ಕಳುಹಿಸಲು ತಯಾರಿ ನಡೆದಿದೆ.

ಅತಿಥಿಯಾಗಿ ಹೋಗಲಿರುವ 'ಕಿರಿಕ್ ಕೀರ್ತಿ'

'ಬಿಗ್ ಬಾಸ್' ರಿಯಾಲಿಟಿ ಶೋ ನಲ್ಲಿ ಐದು ವಾರಗಳು ಕಳೆದ ನಂತರ ಸೀಕ್ರೆಟ್ ರೂಂನಲ್ಲಿ ಸ್ಪರ್ಧಿಗಳನ್ನ ಕಳುಹಿಸುವುದು ಹಿಂದಿನ ಸೀಸನ್ ನಿಂದ ನಡೆದುಕೊಂಡು ಬಂದಿದೆ. ಈ ಬಾರಿ ವಿಶೇಷವಾಗಿ ಗೆಸ್ಟ್ ಗಳಾಗಿ ಹಳೆಯ ಸ್ಪರ್ಧಿಗಳನ್ನ ಕಳುಹಿಸಲಾಗುತ್ತಿದೆ. ಮೊದಲ ಗೆಸ್ಟ್ ಆಗಿ ಕಳೆದ ಬಾರಿಯ ಶೋ ರನ್ನರ್ ಅಪ್ ಕಿರಿಕ್ ಕೀರ್ತಿಯನ್ನ ಕಳುಹಿಸಲಿದ್ದಾರಂತೆ.

ಸ್ಪೆಷಲ್ ಗೆಸ್ಟ್ ಗಳ ವಾರ

ಕಿರಿಕ್ ಕೀರ್ತಿ ನಂತರ ಶಾಲಿನಿ ಕೂಡ 'ಬಿಗ್ ಬಾಸ್' ಮನೆಗೆ ಹೋಗುತ್ತಾರಂತೆ. ಕೀರ್ತಿ ಜೊತೆಯಲ್ಲಿ ಶಾಲಿನಿ ಕೂಡ ಪ್ರೇಕ್ಷಕರಿಗೆ ಸಾಕಷ್ಟು ಮನೋರಂಜನೆ ನೀಡಿದ್ರು. ಇದೇ ಉದ್ದೇಶದಿಂದ ಶಾಲಿನಿಯವರನ್ನ ಆಯ್ಕೆ ಮಾಡಲಾಗಿದ್ಯಂತೆ.

ಲಿಸ್ಟ್ ನಲ್ಲಿದ್ದಾರೆ ಶೀತಲ್

ಈ ಇಬ್ಬರು ಹಳೆ ಸ್ಪರ್ಧಿಗಳ ಜೊತೆಯಲ್ಲಿ ನಟಿ ಹಾಗೂ ನಿರೂಪಕಿ ಶೀತಲ್ ಶೆಟ್ಟಿ ಕೂಡ ಮನೆಗೆ ಪ್ರವೇಶ ಮಾಡಲಿದ್ದಾರೆ. ಪ್ರತಿ ಸ್ಪರ್ಧಿಗಳು ಪ್ರತಿ ನಿತ್ಯ ಎಂಟ್ರಿ ಪಡೆದುಕೊಳ್ಳಲಿದ್ದಾರೆ.

ಬಿಗ್ ಬಾಸ್ ನಲ್ಲಿ 'ಟ್ವಿಸ್ಟ್'

ಈ ಮೂರು ಸ್ಪರ್ಧಿಗಳ ಜೊತೆಯಲ್ಲಿ 'ನಿರಂಜನ್ ದೇಶಪಾಂಡೆ' ಹೆಸರು ಕೂಡ ಕೇಳಿ ಬರ್ತಿದೆ. ಕಳೆದ ವಾರವಷ್ಟೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ 'ಕೃಷಿ ತಾಪಂಡ' ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಳ್ಳುವ ಸಾಧ್ಯತೆ ಇದ್ಯಂತೆ.

English summary
Kirik Keerthi, Shalini and Sheethal Shetty to enter Bigg Boss Kannada 5 house as special guests.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada