»   » ಮುತ್ತಿಕ್ಕಿದರೆ ಮಗು ಹುಟ್ಟಲ್ಲ :ಬಿಗ್ ಬಾಸ್ 8ರ ಮಾಡೆಲ್

ಮುತ್ತಿಕ್ಕಿದರೆ ಮಗು ಹುಟ್ಟಲ್ಲ :ಬಿಗ್ ಬಾಸ್ 8ರ ಮಾಡೆಲ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರೂಪದರ್ಶಿ ಡಿಯಾಂಡ್ರ ಸೊರೆಸ್ ಈಗ ವಿವಾದ, ಚರ್ಚೆ, ಗಾಸಿಪ್, ಕುತೂಹಲದ ಕೇಂದ್ರ ಬಿಂದುವಾಗಿದ್ದಾಳೆ. ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 8 ರಲ್ಲಿ ನಿರೂಪಕ ಸಲ್ಮಾನ್ ಖಾನ್ ಅವರಿಗೆ ಶಾಕ್ ನೀಡುವಂತೆ ನಡೆದುಕೊಂಡಿದ್ದ ಡಿಯಾಂಡ್ರಾ ಈಗ ಮನೆಯಿಂದ ಹೊರ ಬಂದಿದ್ದಾಳೆ.

ಮನೆಯಲ್ಲಿದ್ದ ಕಾಲದಲ್ಲಿ ಡಿಯಾಂಡ್ರಾ ತನ್ನ ಸಹ ಸ್ಪರ್ಧಿ ಕಿರುತೆರೆ ನಟ ಗೌತಮ್ ಗುಲಾಟಿ ಜೊತೆ ದೈಹಿಕ ಸಂಪರ್ಕ ಹೊಂದಿದ್ದಾಳೆ, ಡಿಯಾಂಡ್ರಾ ಗರ್ಭಿಣಿಯಾಗಿದ್ದಾಳೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿ ಸಲ್ಮಾನ್ ಕಿವಿಗೂ ಬಿದ್ದು ಹುಬ್ಬುಗಳು ಹಾರಿತ್ತು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಅದರೆ, ಮನೆಯಿಂದ ಹೊರ ಬಂದ ನಂತರ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಬೊಕ್ಕ ತಲೆ ಸುಂದರಿ ಡಿಯಾಂಡ್ರಾ, ಮುತ್ತಿಕ್ಕಿದರೆ ಮಗು ಹುಟ್ಟಲ್ಲ, ಕಿಸ್ ಮಾಡಿದರೆ ಯಾರೂ ಗರ್ಭಿಣಿಯಾಗಲ್ಲ, ನಾನು ಗರ್ಭಿಣಿಯಾಗಿಲ್ಲ ಎಂದು ಹೇಳಿದ್ದಾಳೆ.['ಟಿವಿ' ದುರ್ಯೋಧನ 'ಬಿಗ್'ವಿಮಾನಕ್ಕೆ ರೀ ಎಂಟ್ರಿ!]

35ವರ್ಷದ ರೂಪದರ್ಶಿ ವರಸೆ ಕಂಡು ಸ್ವತಃ ಸಲ್ಮಾನ್ ಕೂಡಾ ಅವಕ್ಕಾಗಿದ್ದಾನೆ. ಬಿಗ್ ಬಾಸ್ ನಲ್ಲಿ ಅಸ್ವಸ್ಥಳಾಗಿ ಆಸ್ಪತ್ರೆ ಸೇರಿದ್ದ ಡಿಯಾಂಡ್ರಾ ಮಾತಿನ ಲಹರಿಯ ಮುಂದಿನ ಚಿತ್ರ ಸರಣಿಯಲ್ಲಿ ಕಾಣಿರಿ

12 ವಾರಗಳ ತನಕ ವಿಮಾನ ಮಾದರಿ ಮನೆಯಲ್ಲಿ
  

12 ವಾರಗಳ ತನಕ ವಿಮಾನ ಮಾದರಿ ಮನೆಯಲ್ಲಿ

12 ವಾರಗಳ ತನಕ ವಿಮಾನ ಮಾದರಿ ಮನೆಯಲ್ಲಿದ್ದ ರೂಪದರ್ಶಿ ಡಿಯಾಂಡ್ರಾ ಬಿಗ್ ಬಾಸ್ ಸ್ಪರ್ಧೆಯ ಪ್ರಬಲ ಆಟಗಾರ್ತಿ ಎನಿಸಿಕೊಂಡಿದ್ದಳು. ಉಳಿದ 9 ಆಟಗಾರರಿಗಿಂತಮನೆಗೆ ಮತ್ತೆ ಮರಳಿರುವ ಪುನೀತ್ ಇಸ್ಸಾರ್ ಮಾಸ್ಟರ್ ಮೈಂಡ್ ಎಂದು ಡಿಯಾಂಡ್ರಾ ಸಲ್ಮಾನ್ ಬಳಿ ಹೇಳಿದ್ದಾಳೆ

ಡಿಯಾಂಡ್ರಾ -ಗೌತಮ್ ಜೋಡಿ
  

ಡಿಯಾಂಡ್ರಾ -ಗೌತಮ್ ಜೋಡಿ

ಡಿಯಾಂಡ್ರಾ -ಗೌತಮ್ ಜೋಡಿ ಬಹು ಚರ್ಚಿತವಾಗಿತ್ತು. ಇಬ್ಬರ ನಡುವೆ ಅಗತ್ಯಕ್ಕಿಂತ ಹೆಚ್ಚಿನ ಬಾಂಧವ್ಯ, ಬೆಸುಗೆ ಬೆಳೆದಿತ್ತು. ಗೌತಮ್ ಕ್ರೇಜಿತನ, ಡಿಯಾಂಡ್ರಾ ತಿಕ್ಕಲುತನ ಸೇರಿಸಿಕೊಂಡು ಪ್ರೇಕ್ಷಕರಿಗೆ ಹುಚ್ಚು ಹಿಡಿಸತೊಡಗಿದ್ದರು.

ಯಾರಿಂದಲೂ ಬೇರ್ಪಡಿಸಲಾಗದ ಜೋಡಿ
  

ಯಾರಿಂದಲೂ ಬೇರ್ಪಡಿಸಲಾಗದ ಜೋಡಿ

ಯಾರಿಂದಲೂ ಬೇರ್ಪಡಿಸಲಾಗದ ಜೋಡಿಯಾಗಿ ಇಬ್ಬರು ನಂಬಿಕೆ ಉಳಿಸಿಕೊಂಡಿದ್ದು ಬೇರೆ ಆಟಗಾರರಿಗೆ ತಲೆ ಬಿಸಿ ತಂದಿತ್ತು. ಇವರಿಬ್ಬರೂ ಹೀಗೆ ಮುಂದುವರೆದು ಫಿನಾಲೆ ತಲುಪಿದರೆ ನಮ್ಮ ಗತಿ ಏನು ಎಂದು ಎಲ್ಲರೂ ಸೇರಿ ಷಡ್ಯಂತ್ರ ರಚಿಸಿದರು.

ಲೇಟ್ ನೈಟ್ ಟಾಕ್ ಗಳು ಫೇಮಸ್
  

ಲೇಟ್ ನೈಟ್ ಟಾಕ್ ಗಳು ಫೇಮಸ್

ಬಿಗ್ ಬಾಸ್ ಶೋ ಇಷ್ಟಪಡುವವರಿಗೆ ಡಿಯಾಂಡ್ರಾ ದಬ್ಬಾಳಿಕೆ ನಡುವೆ ಗೌತಮ್ ಜೊತೆಗಿನ ತಡರಾತ್ರಿ ಬೆಡ್ ಮೇಲೆ ನಡೆಸುವ ಸಂಭಾಷಣೆ ಭಾರಿ ಮಜಾ ಕೊಡುತ್ತಿತ್ತು.

ಬಾತ್ ರೂಮ್ ಲಾಕ್ ಆಗಿರುತ್ತಿತ್ತು
  

ಬಾತ್ ರೂಮ್ ಲಾಕ್ ಆಗಿರುತ್ತಿತ್ತು

ಇಬ್ಬರು ಜೊತೆಗೆ ಬಾತ್ ರೂಮಿಗೆ ತೆರಳಿದ ಮೇಲೆ ಒಳಬರುವ ಬಾಗಿಲು ಲಾಕ್ ಆಗಿರುತ್ತಿತ್ತು. ಇಬ್ಬರ ನಡುವೆ ಕಿಸ್ಸಿಂಗ್, ಆಲಿಂಗನ ಮಾಮೂಲಿಯಾಗಿತ್ತು. ಅದರೆ, ಎಲ್ಲವೂ ಬದಲಾಗಿ ಬಿಟ್ಟಿತು.

ಗರ್ಭಿಣಿ ಗಾಳಿಸುದ್ದಿ ಹಬ್ಬಿಸಲಾಗಿತ್ತು
  

ಗರ್ಭಿಣಿ ಗಾಳಿಸುದ್ದಿ ಹಬ್ಬಿಸಲಾಗಿತ್ತು

ಡಿಯಾಂಡ್ರಾ ಬಲವಂತವಾಗಿ ಬಾತ್ ರೂಮಿಗೆ ನನ್ನನ್ನು ಕರೆದೊಯ್ಯುತ್ತಿದ್ದಳು ನಾನೇನು ಮಾಡಿಲ್ಲ ಎಂದು ಗೌತಮ್ ತಪ್ಪೊಪ್ಪಿಗೆ ನೀಡಿದ. ಬಿಗ್ ಬಾಸ್ ಕೂಡಾ ಗೌತಮ್ ಗೆ ಎಚ್ಚರಿಕೆ ನೀಡಿ ನಿನ್ನ ತಾಯಿ ಹಾಗೂ ಗೆಳಯರು ನಿನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದುತ್ತಿದ್ದಾರೆ ಎಂದ ಮೇಲೆ ಗೌತಮ್ ಬದಲಾಗಿಬಿಟ್ಟ. ಈ ಬಗ್ಗೆ ಡಿಯಾಂಡ್ರಾ ಪ್ರಶ್ನಿಸುವ ಮೊದಲೇ ಮನೆಯಿಂದ ಹೊರಬರಬೇಕಾಯಿತು.

English summary
Model Diandra Soares, the latest contestant to be evicted from Bigg Boss 8, has rubbished pregnancy rumours saying "Kissing doesn't lead to pregnancy". It was reported that she was pregnant. When asked about the rumour, she categorically said: "I am not pregnant."
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada