»   » ಬಾಲ್ಯವಿವಾಹಿತರಿಗೂ ಸ್ಫೂರ್ತಿಯಾದ 'ಕೋಟ್ಯಾಧಿಪತಿ' ರೇಣುಕಾ

ಬಾಲ್ಯವಿವಾಹಿತರಿಗೂ ಸ್ಫೂರ್ತಿಯಾದ 'ಕೋಟ್ಯಾಧಿಪತಿ' ರೇಣುಕಾ

Posted By:
Subscribe to Filmibeat Kannada

ಮದುವೆ ಪ್ರತಿಯೊಬ್ಬರ ಜೀವನದಲ್ಲಿ ತಿರುವು ಪಡೆಯುವ ಘಟ್ಟ. ಅದಕ್ಕೆ ತಿಳವಳಿಕೆ, ಹೊಂದಾಣಿಕೆ, ವಿಚಾರಿಸುವ ಸಾಮರ್ಥ್ಯ, ಪ್ರಪಂಚ ಜ್ಞಾನ ಮುಖ್ಯ. ಆದರೆ ಏನು ಅರಿಯದ ಬಾಲೆ, ಮುಗ್ಧೆ ಹಸೆಮಣೆ ಮೇಲೆ ಕೂತಾಗ ಅವಳ ಬದುಕೆಂಬ ಬಂಡಿಯೇ ಹಳಿ ತಪ್ಪಿ ಹೋಗುವ ಪರಿಸ್ಥಿತಿಗಳೇ ಹೆಚ್ಚು.

ಆದರೆ ಇವೆಲ್ಲವುಗಳ ಮಧ್ಯೆ ಇಲ್ಲೊಂದು ಮಾದರಿ ಆಗಿ ಕಂಡದ್ದು 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಸ್ಪರ್ಧಿಯಾಗಿ ಬಂದಿದ್ದ ರೇಣುಕಾ ಅವರದ್ದು. ರೇಣುಕಾ ಗುಲ್ಬರ್ಗಾ ಜಿಲ್ಲೆಯ ಶಹಪೂರ ತಾಲ್ಲೂಕಿನ ಕಾಡಮಗೇರ ಗ್ರಾಮದ ಹುಡುಗಿ.

ಬಾಲ್ಯದಲ್ಲಿಯೇ ಹೆತ್ತಪ್ಪನನ್ನು ಕಳೆದುಕೊಂಡು ತಾಯಿ ಮತ್ತು ಚಿಕ್ಕಪ್ಪಂದಿರ ಆಶ್ರಯದಲ್ಲಿ ಬೆಳೆದ ಮುಗ್ಧೆ. ಪರಿಸ್ಥಿತಿಗೆ ಸಿಲುಕಿ ನಾಲ್ಕನೇ ತರಗತಿಯಲ್ಲಿರುವಾಗಲೇ ಮದುವೆ ಮಾಡಿಕೊಳ್ಳಬೇಕಾಯಿತು. ಬಾಲ್ಯದಲ್ಲಿ ಮದುವೆಯಾದರೆ ಶಿಕ್ಷಣ ಮುಂದುವರೆಸುವುದು ಗ್ರಾಮೀಣ ಹೆಣ್ಣು ಮಕ್ಕಳಿಗಂತೂ ಕನಸೇ ಸರಿ.

ರೇಣುಕಾ ಗೆದ್ದದ್ದು ರು. 6,40,000

ಆದರೆ ರೇಣುಕಾಳ ಜೀವನದಲ್ಲಿ ಮದುವೆ ಬಾಲ್ಯದಲ್ಲಾದರೂ ಮನೆಯವರೆಲ್ಲರ ಪ್ರೋತ್ಸಾಹ , ಗಂಡನ ಸಂಪೂರ್ಣ ಬೆಂಬಲ ಅವಳ ಶಿಕ್ಷಣವನ್ನು ಮುಂದುವರೆಸಲು ಅನೂಕೂಲವಾಯಿತು. ಇದೇ ಸೋಮವಾರ (ದಿನಾಂಕ 29.04.13) ರಂದು ಕೋಟ್ಯಾಧಿಪತಿ ಹಾಟ್ ಸೀಟ್ ಗೆ ಬಂದು ರೂ.6,40,000 ಗೆದ್ದ ಹುಡುಗಿ ಮುಂದೆ ಐ.ಎ.ಎಸ್ ಅಧಿಕಾರಿ ಆಗಬೇಕು ಎನ್ನುವ ಮಹಾತ್ವಾಕಾಂಕ್ಷೆ ಹೊಂದಿದ್ದಾರೆ.

ಬಾಲ್ಯವಿವಾಹವಾದರೂ ದೃತಿಗೆಡಲಿಲ್ಲ ರೇಣುಕಾ

ಸ್ಲಂ ನಲ್ಲಿಯೇ ಕೊಳೆಯುತ್ತಿರುವ ಮಕ್ಕಳ ಬಾಳನ್ನು ಬೆಳಗಿಸಲು ಪ್ರಯತ್ನಿಸಬೇಕು ಎನ್ನುವ ಸದುದ್ದೇಶ ರೇಣುಕಾರದ್ದು. ಬಾಲ್ಯದಲ್ಲಿಯೇ ಆದ ಮದುವೆ ಮುಂದಿನ ಜೀವನ ರೂಪಿಸಿಕೊಳ್ಳಲು ಮುಳುವಾಗದೇ ಹೀಗೂ ಇರಬಹುದು ಎಂದು ಸ್ಫೂರ್ತಿ ತುಂಬುವಂತಾಗಬೇಕು ತನ್ನ ಬದುಕು ಎನ್ನುವ ಅಭಿಪ್ರಾಯ ಅವರದು.

ಬಿ.ಎ.ಅಂತಿಮ ವರ್ಷದ ವಿದ್ಯಾರ್ಥಿನಿ

ನೋಡಲು ಪುಟ್ಟದಾಗಿ ಕಾಣುವ ರೇಣುಕಾ ಈಗ ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ಸದಾ ಪರಿಶ್ರಮ ಪಟ್ಟರೆ ಕನಸನ್ನು ನನಸಾಗಿಸಿಕೊಳ್ಳಬಹುದು ಎಂಬುಕ್ಕೆ ಸಾಕ್ಷಿಯಾಗಿ ನಿಲ್ಲುವಂತೆ ಪರಿಕ್ಷೆಯಲ್ಲೂ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ.

ಮಾತಿನಲ್ಲೂ ಮನೆಗೆಲಸದಲ್ಲೂ ಚೂಟಿ ರೇಣುಕಾ

ಶೇ.90 ರಷ್ಟು ಅಂಕಗಳನ್ನು ಗಳಿಸಿದ ಎ ಜಾಣೆ ಇಡೀ ತಾಲೂಕಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಮನೆಗೆಲಸದಲ್ಲೂ, ಮಾತಿನಲ್ಲೂ ಅಷ್ಟೇ ಚೂಟಿ ಹುಡುಗಿ. ಕಳೆದು ಹೋದ ಕ್ಷಣಗಳನ್ನು ನೆನೆಸಿಕೊಂಡು ಕೊರಗುವುದಕ್ಕಿಂತ ಮುಂದೆ ಬರುವ ದಿನಗಳನ್ನು ಸುಂದರವಾಗಿ ಹೆಣೆಯಲು ಪ್ರಯತ್ನಿಸಬೇಕು ಎನ್ನುತ್ತಾರೆ ರೇಣುಕಾ.

ರೇಣುಕಾರ ಐಎಎಸ್ ಕನಸು ನನಸಾಗಲಿ

ಒಟ್ಟಿನಲ್ಲಿ ಬಾಲ್ಯವಿವಾಹವಾದರೂ ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಲು ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಬಂದೆ. ನನ್ನ ಶಿಕ್ಷಣ ಮುಂದುವರೆಸಲು ಇಲ್ಲಿ ಗೆದ್ದ ಮೊತ್ತ ಅನುಕೂಲವಾಯಿತು ಎಂದು ಅಭಿಪ್ರಾಯ ಪಡುತ್ತಾರೆ. ಅವರ ಐ.ಎ.ಎಸ್ ಅಧಿಕಾರಿ ಆಗಬೇಕೆನ್ನುವ ಕನಸು ನನಸಾಗಲಿ ಎಂಬುದು ನಮ್ಮೆಲ್ಲರ ಆಶಯ.

English summary
Renuka, a girl from Shahapur taluk's Kadamagera village, has won Rs. 6,40,000 in Kannadada Kotyadhipati reality show hosted by Kannada actor Puneeth Rajkumar by Suvarna Channel. She dreams to become IAS and wants to serve the poor in her native place.
Please Wait while comments are loading...