Don't Miss!
- News
Shimoga airport; ಸಿವಿಲ್ ಏವಿಯೇಷನ್ ಕಾರ್ಯದರ್ಶಿಗಳ ಭೇಟಿ
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅನುಪಮಾ ಬಳಿಯಿದ್ದ 'ಸೂಪರ್ ಅಧಿಕಾರ'ದಿಂದ ಕೃಷಿಗೆ ಅದೃಷ್ಟ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ 8ನೇ ವಾರ ಯಶಸ್ವಿಯಾಗಿ ಮುಗಿದು, 9ನೇ ವಾರಕ್ಕೆ ಪ್ರವೇಶ ಮಾಡಿದೆ. ಕಳೆದ ಜಗನ್ ಬಿಗ್ ಮನೆಯ ಕ್ಯಾಪ್ಟನ್ ಆಗಿದ್ದರು. ಈ ವಾರ ಜಗನ್ ಕ್ಯಾಪ್ಟನ್ ಕೋಣೆಯನ್ನ ಸ್ನೇಹಿತೆಗಾಗಿ ಬಿಟ್ಟುಕೊಟ್ಟಿದ್ದಾರೆ.
ಹೌದು, ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಆಟವಾಡಿದ್ದು ಕೇವಲ ಮೂವರು ಮಾತ್ರ. ಉಳಿದವರು ಯಾರು ಕ್ಯಾಪ್ಟನ್ ರೇಸ್ ನಲ್ಲಿ ಪಾಲ್ಗೊಳ್ಳಲಿಲ್ಲ. ಅದಕ್ಕೆ ಕಾರಣ ಅನುಪಮ ಗೌಡ.
'ಬಿಗ್
ಬಾಸ್'
ಮನೆಗೆ
ಎಂಟ್ರಿ
ಕೊಟ್ಟ
ಮತ್ತಿಬ್ಬರು
ಅನುಪಮಾ ಅವರ ಕೃಪಾ ಕಟಾಕ್ಷದಿಂದ ಜಯ ಶ್ರೀನಿವಾಸನ್, ಕೃಷಿ ತಾಪಂಡ ಹಾಗೂ ದಿವಾಕರ್ ಮಾತ್ರ ಕ್ಯಾಪ್ಟನ್ ಆಟವಾಡಿದರು. ಕೊನೆಗೆ ಈ ಆಟದಲ್ಲಿ ಗೆದ್ದು ಈ ವಾರದ ನಾಯಕತ್ವ ವಹಿಸಿದ್ದು ಕೃಷಿ ತಾಪಂಡ. ಹಾಗಿದ್ರೆ, ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಹೇಗಿತ್ತು? ಮುಂದೆ ಓದಿ.....

ಕ್ಯಾಪ್ಟನ್ ಆಯ್ಕೆಗಾಗಿ ಬಿಗ್ ಬಾಸ್ ಕೊಟ್ಟ ಟಾಸ್ಕ್
ತಮ್ಮ ಸೊಂಟಕ್ಕೆ ಪಟ್ಟಿಕೊಂಡು, ದೇಹವನ್ನ ಚಾಚಿ ಎದುರಗಡೆ ನೀಡಲಾಗಿದ್ದು 'ಬಸರ್' (buzzer) ಅನ್ನ ಒತ್ತಿ ಹಿಡಿಬೇಕು. ಮೂವರಲ್ಲಿ ಯಾರೂ ಹೆಚ್ಚು ಕಾಲ ಒತ್ತಿ ಹಿಡಿಯುತ್ತಾರೋ ಅವರು ನಾಯಕರಾಗಿ ಆಯ್ಕೆ ಆಗುತ್ತಾರೆ.
'ಬಿಗ್
ಬಾಸ್'
ಮನೆಯ
ಗಾಸಿಪ್
ಕ್ವೀನ್
ಯಾರು
ಅಂತ
ನಿಮ್ಗೊತ್ತಾ.?

ಅನುಪಮ ಗೌಡ ಸೂಪರ್ ಅಧಿಕಾರ
ಕಳೆದ ವಾರ ಸಿಹಿ ಕಹಿ ಚಂದ್ರು ಅವರು ನೀಡಿದ್ದ ಸೂಪರ್ ಅಧಿಕಾರದ ಅನ್ವಯ ಮೂರು ಜನ ಮಾತ್ರ ಕ್ಯಾಪ್ಟನ್ ಆಯ್ಕೆಯಾಗಿ ಆಟವಾಡಬಹುದು ಎಂದು ಬಿಗ್ ಬಾಸ್ ಸೂಚಿಸಿದರು. ಇದರ ಅನುಸಾರ ಅನುಪಮಾ, ಜಯ ಶ್ರೀನಿವಾಸನ್, ಕೃಷಿ ತಾಪಂಡ ಹಾಗೂ ದಿವಾಕರ್ ಅವರ ಹೆಸರು ಸೂಚಿಸಿದರು.
'ಬಿಗ್
ಬಾಸ್'
ಮನೆಯಲ್ಲಿ
ಇರಲು
ಯೋಗ್ಯತೆ
ಇಲ್ಲದವರು
ಯಾರು.?

ಕೃಷಿ ಜಯಶಾಲಿ
ಬಿಗ್ ಬಾಸ್ ನೀಡಿದ್ದ ಚಟುವಟಿಕೆಯಲ್ಲಿ ಮೊದಲು ಜಯಶ್ರೀನಿವಾಸನ್ ಸೋತರು. ನಂತರ ದಿವಾಕರ್ ಕೂಡ ಸೋತರು. ಹೆಚ್ಚು ಕಾಲ (buzzer) ಒತ್ತಿ ಹಿಡಿದಿದ್ದ ಕೃಷಿ ಕ್ಯಾಪ್ಟನ್ ಆಗಿ ಆಯ್ಕೆ ಆದರು.

ಕೃಷಿ ತಾಪಂಡಗೆ ಒಲಿದ ಅದೃಷ್ಟ
ಈಗಾಗಲೇ ಮನೆಯಿಂದ ಎಲಿಮಿನೇಟ್ ಆಗಿದ್ದ ಕೃಷಿ ತಾಪಂಡ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆ ಪ್ರವೇಶ ಮಾಡಿದ್ದರು. ಈಗ ಕ್ಯಾಪ್ಟನ್ ಆಗುವ ಮೂಲಕ ಈ ವಾರದ ನಾಮಿನೇಷನ್ ನಿಂದ ಹೊರಗುಳಿಯಲಿದ್ದಾರೆ.