»   » ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದಲ್ಲಿ 'ಕೃಷ್ಣಲೀಲಾ'

ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದಲ್ಲಿ 'ಕೃಷ್ಣಲೀಲಾ'

Posted By:
Subscribe to Filmibeat Kannada

ಸ್ಟಾರ್ ನೆಟ್ ವರ್ಕ್ ಕನ್ನಡ ಮನೋರಂಜನಾ ವಾಹಿನಿ ಸುವರ್ಣದಲ್ಲಿ ಮೂಡಿಬರುತ್ತಿರುವ ವಾರಾಂತ್ಯದ ಹಾಸ್ಯಾಧಾರಿತ ಕಾರ್ಯಕ್ರಮ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ'. ಇದು ಸೆಲೆಬ್ರಿಟಿ ಗೇಮ್ ಶೋ ಆಗಿದ್ದು ಈಗಾಗಲೇ ಸಾಕಷ್ಟು ಸಿನಿಮಾ ತಾರೆಯರು ಭಾಗವಹಿಸಿ ಮಜಾ ತೆಗೆದುಕೊಂಡು ವೀಕ್ಷಕರಿಗೆ ಮಜಾ ಕೊಟ್ಟು ಹೋಗಿದ್ದಾರೆ.

ಹಾಗೆಯೇ ಈ ಭಾನುವಾರದ (ಮಾ.15) ಸಂಚಿಕೆಯಲ್ಲಿ ಭಾಗವಹಿಸುತ್ತಿರುವವರು 'ಕೃಷ್ಣಲೀಲಾ' ತಂಡದವರು. 'ಕೃಷ್ಣ ಲೀಲೆ' ಚಲನಚಿತ್ರದ ನಾಯಕ ನಟ ಅಜಯ್ ರಾವ್, ನಿರ್ದೇಶಕ ಶಶಾಂಕ್, ನಾಯಕ ನಟಿ ಮಯೂರಿ ಹಾಗೂ ಸಂಗೀತ ನಿರ್ದೇಶಕ ವಿ.ಶ್ರೀಧರ್ ಭಾಗವಹಿಸಲಿದ್ದಾರೆ.

Krishna Leela movie team in Swalpa Adjust Madkolli

'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ಸೆಟ್ ನಲ್ಲಿ ಅನುಶ್ರೀ ಮತ್ತು ಶೈನ್ ಸೆಟ್ಟಿ ಇವರಿಬ್ಬರ ಕಿರಿಕ್ ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡೇ ತಾವು ನಕ್ಕು ನಮ್ಮನ್ನು ನಗಿಸಲು ಮುಂದಾಗಿದೆ ತಂಡ. ಕೃಷ್ಣಲೀಲೆ ಚಲನಚಿತ್ರವು ನಾಯಕ ನಟ ಅಜೇಯ್ ರಾವ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮೊಟ್ಟ ಮೊದಲ ಸಿನಿಮಾ. ಹಾಗಾಗಿ ತುಂಬಾ ಉತ್ಸುಕತೆಯಿಂದ ಚಿತ್ರದ ಬಗ್ಗೆ ಮಾತನಾಡಿದ್ದಾರೆ ಅಜಯ್.

Krishna Leela movie team in Swalpa Adjust Madkolli

ಕೃಷ್ಣ ಲೀಲೆಯ ತಂಡವು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದ "ಗೂಳಿ ಇದು ಸುಂಟರಗಾಳಿ" ಎಂಬ ಸುತ್ತನ್ನು ಎಂಜಾಯ್ ಮಾಡಿದ ರೀತಿ ಸೂಪರ್ಬ್ ಆಗಿತ್ತು. ಅಲ್ಲದೇ ಈ ವಾರದ ಸಂಚಿಕೆಯಲ್ಲಿ ಗಿಳಿಶಾಸ್ತ್ರ ಹೇಳುವವರನ್ನು ಕರೆಸಲಾಗಿದ್ದು ಅವರು ಗಿಳಿಶಾಸ್ತ್ರ ಹೇಳುವ ರೀತಿ ನೋಡಿ ಯಾರು ನಿಜವಾದ ಶಾಸ್ತ್ರ ತಿಳಿದವರು ಮತ್ಯಾರು ಅಲ್ಲ ಎಂಬುದನ್ನು ಕಂಡುಹಿಡಿಯುವ ಒಂದು ಪುಟ್ಟ ಟಾಸ್ಕ್‍ನ್ನು ಕೂಡಾ ನೀಡಲಾಗಿತ್ತು.

Krishna Leela movie team in Swalpa Adjust Madkolli

ಸ್ವಲ್ಪ ಅಡ್ಜಸ್ಟ್ ಮಾಡ್ಕೋಳ್ಳಿ ಕಾರ್ಯಕ್ರಮದಲ್ಲಿ ಕೃಷ್ಣಲೀಲೆ ಚಲನಚಿತ್ರದವರು ತಮ್ಮ ಸಿನಿಮಾ ಬಗೆಗಿನ ಸಾಕಷ್ಟು ವಿಷಯ ವಿಸ್ತಾರಗಳನ್ನು ತಿಳಿಸಿದ್ದಾರೆ. ಒಟ್ಟಿನಲ್ಲಿ ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡು ಸೂಪರ್ ಎಂಟರಟೇನ್ ಮಾಡಿರುವ ಈ ಸಂಚಿಕೆಯನ್ನು ನೀವು ನೋಡಲೇಬೇಕು ಎಂಜಾಯ್ ಮಾಡಬೇಕು. ಮಿಸ್ ಮಾಡದೇ ಸುವರ್ಣ ವಾಹಿನಿಗೆ ಟ್ಯೂನ್ ಮಾಡಿ, ವಾಚ್ ಮಾಡಿ ಹಾಗೇಯೇ ಎಂಜಾಯ್ ಮಾಡಿ. (ಫಿಲ್ಮಿಬೀಟ್ ಕನ್ನಡ)

English summary
This time Suvarna channel's game show 'Swalpa Adjust Madkolli' with Shashank's 'Krishna Leela' team. The episode will telecast on March 15th 2015 Sunday 9pm. Which is about getting adjust in life and to various circumstances, will be telecast on every Sunday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada