Just In
Don't Miss!
- Sports
ಅಚಾನಕ್ ಆಗಿ ಕ್ರಿಕೆಟರ್ ಆದೆ, ಕನಸಿನಲ್ಲಿ ಬದುಕುತ್ತಿದ್ದೇನೆ: ಆರ್ ಅಶ್ವಿನ್
- News
ವಣ್ಣಿಯಾರ್ ಸಮುದಾಯಕ್ಕೆ ಶೇ 10.5ರಷ್ಟು ಮೀಸಲಾತಿ: ಮಸೂದೆ ಅಂಗೀಕಾರ
- Automobiles
ಸಿಟ್ರನ್ 2ನೇ ಕಾರು ಮಾದರಿಯಾಗಿ ಬಿಡುಗಡೆಯಾಗಲಿದೆ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್ಯುವಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 26ರ ಮಾರುಕಟ್ಟೆ ದರ ಇಲ್ಲಿದೆ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಮಕ್ಕಳಿಗೆ ಪಿಸ್ತಾ ನೀಡಿದರೆ ಬುದ್ಧಿ ಶಕ್ತಿ ಹೆಚ್ಚುವುದರ ಜೊತೆಗೆ ಈ ಪ್ರಯೋಜನಗಳಿವೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್ ಬಾಸ್ ಬಳಿಕ ಕುರಿ ಪ್ರತಾಪ್ ಬೇಸರವಾದ್ರಾ! ಸೋಲಿನ ಬಗ್ಗೆ ಪ್ರತಾಪ್ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಫಿನಾಲೆ ಹಂತದವರೆಗೂ ಹೋಗಿದ್ದ ಹಾಸ್ಯನಟ ಕುರಿ ಪ್ರತಾಪ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದ್ದರು. ಶೈನ್ ಶೆಟ್ಟಿ ಬಿಗ್ ಬಾಸ್ ಗೆದ್ದರೆ ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದರು.
ಫೈನಲ್ ಮುಗಿಯುತ್ತಿದ್ದಂತೆ ನಟ ಕುರಿ ಪ್ರತಾಪ್ ಯಾರ ಕೈಗೂ ಸಿಗಲಿಲ್ಲ. ಯಾವ ಮಾಧ್ಯಮಕ್ಕೂ ಸಂದರ್ಶನ ನೀಡಲಿಲ್ಲ. ಎಲ್ಲೂ ಹೋದ್ರು, ಏನ್ ಆಯ್ತು, ಕುರಿ ಪ್ರತಾಪ್ ಬಿಗ್ ಬಾಸ್ ಸೋತಿದ್ದಕ್ಕೆ ಬೇಜಾರು ಮಾಡ್ಕೊಂಡ್ರಾ ಎಂದೆಲ್ಲ ಸುದ್ದಿಗಳು ಹುಟ್ಟಿಕೊಂಡಿತ್ತು.
ಅರೆಸ್ಟ್ ಆಗಿದ್ದು ಡಿಕೆಶಿ, ಆದ್ರೆ ಪರದಾಡಿದ್ದು ಮಾತ್ರ ಕುರಿ ಪ್ರತಾಪ್
ಅಂತಿಮವಾಗಿ ಈ ಎಲ್ಲ ಪ್ರಶ್ನೆಗಳಿಗೂ ಸ್ವತಃ ಕುರಿ ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ಫೈನಲ್ ಬಳಿಕ ಕುರಿ ಪ್ರತಾಪ್ ಮೊದಲ ಸಲ ಮಾತನಾಡಿದ್ದಾರೆ. ಮುಂದೆ ಓದಿ....

ಫಲಿತಾಂಶದ ಬಗ್ಗೆ ಯಾವ ಬೇಸರವೂ ಇಲ್ಲ
''ಬಿಗ್ ಬಾಸ್ ನಲ್ಲಿ ನಾನು ಗೆದ್ದಿಲ್ಲ ಎಂದು ಬೇಜಾರು ಮಾಡಿಕೊಂಡಿಲ್ಲ. ಫೈನಲ್ ಆದ್ಮೇಲೆ ಪ್ರತಾಪ್ ಎಲ್ಲೋ ಹೋಗ್ಬಿಟ್ಟಿದ್ದಾರೆ, ಯಾರ ಕೈಗೂ ಸಿಗ್ತಿಲ್ಲ ಎಂದು ಸುಮ್ಮನೆ ಹೇಳ್ತಿದ್ದಾರೆ. ನಾನು ಶೂಟಿಂಗ್ ನಲ್ಲಿ ಇದ್ದೀನಿ. ಯಾರೂ ಏನೇನೋ ಅಂದುಕೊಳ್ಳಬೇಡಿ'' ಎಂದು ಮೊದಲ ಸಲ ಬಿಗ್ ಬಾಸ್ ಫಲಿತಾಂಶದ ಕುರಿತು ಮಾತನಾಡಿದ್ದಾರೆ.
ಹೊಸ ಹೇರ್ ಸ್ಟೈಲ್ ಜೊತೆಗೆ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟ ಕುರಿ ಪ್ರತಾಪ್

ನಾನು ಗೆಲ್ಲಲೇಬೇಕೆಂದು ಹೋಗಿರಲಿಲ್ಲ
''ಬಿಗ್ ಬಾಸ್ ಗೆ ನಾನು ಗೆಲ್ಲಲೇಬೇಕು ಎಂದು ಹೋಗಿರಲಿಲ್ಲ. ಅಷ್ಟು ದಿನ ನಾನು ಅಲ್ಲಿ ಇದ್ದಿದ್ದೆ ಹೆಚ್ಚು. ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡವನಲ್ಲ. ಗೆಲುವು ಸೋಲು ಸಹಜ. ಬಿಗ್ ಬಾಸ್ ಮುಗಿದ ಮೇಲೆ ಬಾಕಿಯಿದ್ದ ಚಿತ್ರಗಳ ಶೂಟಿಂಗ್ ನಲ್ಲಿ ಭಾಗಿಯಾಗಿದ್ದೇನೆ'' ಎಂದು ಕುರಿ ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ.

ನನಗಾಗಿ ಪೊಗರು ತಂಡ ಕಾದಿಲ್ಲ
ಇನ್ನು ಕುರಿ ಪ್ರತಾಪ್ ಅವರ ಬಿಗ್ ಬಾಸ್ ಮನೆಯಲ್ಲಿದ್ದ ಕಾರಣ ಪೊಗರು ಚಿತ್ರತಂಡ, ಪ್ರತಾಪ್ ಬರುವಿಕೆಗಾಗಿ ಕಾದು ಈಗ ಶೂಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಇತ್ತು. ಈ ಬಗ್ಗೆ ಮಾತನಾಡಿದ ಪ್ರತಾಪ್ ''ಆ ರೀತಿ ಏನು ಇಲ್ಲ, ಪೊಗರು ಸಿನಿಮಾ ಶೂಟಿಂಗ್ ನಡೆಯಬೇಕಾದರೆ ನಾನು ಬಿಗ್ ಬಾಸ್ ಗೆ ಹೋಗಿದ್ದೆ. ಅವರು ಆಗಲೇ ಹೇಳಿದ್ದರು ನೀವು ಆರಾಮಗಿ ಹೋಗಿ, ಬಹುಶಃ ನೀವು ವಾಪಸ್ ಬರುವವರೆಗೂ ನಮ್ಮ ಚಿತ್ರದ ಶೂಟಿಂಗ್ ಇನ್ನು ನಡೆಯುತ್ತಲೇ ಇರುತ್ತೆ ಅಂತ ಹೇಳಿದ್ದರು. ನನಗಾಗಿ ಕಾಯುತ್ತಿದ್ದರು ಎನ್ನುವುದು ಸತ್ಯವಲ್ಲ'' ಎಂದು ತಿಳಿಸಿದ್ದಾರೆ.

ಮೊದಲ ಚಿತ್ರ ಪೊಗರು
ಕುರಿ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದ ಕಾರಣ ಕೆಲವು ಚಿತ್ರಗಳ ಬಾಕಿ ಉಳಿದುಕೊಂಡಿದ್ದವು. ಆ ಸಿನಿಮಾದ ಚಿತ್ರೀಕರಣವನ್ನು ಮೊದಲು ಪೂರ್ತಿ ಮಾಡಲು ನಿರ್ಧರಿಸಿದ್ದಾರೆ. ''ಪೊಗರು, ಯುವರತ್ನ ಹಾಗೂ ಶಿವಣ್ಣನ ಭಜರಂಗಿ 2 ಚಿತ್ರಗಳಲ್ಲಿ ಚಿತ್ರೀಕರಣ ಬಾಕಿ ಇದೆ, ಅದನ್ನು ನಾನು ಮೊದಲು ಮುಗಿಸುತ್ತಿದ್ದೇನೆ. ಹೆಚ್ಚು ಅವಕಾಶಗಳು ಬರ್ತಿದೆ. ಆಮೇಲೆ ಅದನ್ನ ನಿರ್ಧರಿಸುತ್ತೇನೆ'' ಎಂದಿದ್ದಾರೆ.
ಕುರಿ ಪ್ರತಾಪ್ 'ಇನ್ನೊಂದು ಮುಖ'ವನ್ನ ಪರಿಚಯಿಸಿದ ಪ್ರಥಮ್.!

15 ಕೆಜಿ ತೂಕ ಕಡಿಮೆ ಆಗಿದ್ದೀನಿ
ಬಿಗ್ ಬಾಸ್ ಮನೆಗೆ ಹೋದಾಗ ಕುರಿ ಪ್ರತಾಪ್ ಸ್ವಲ್ಪ ದಪ್ಪವಾಗಿದ್ದರು. ಆದರೆ, ಫೈನಲ್ ಹಂತಕ್ಕೆ ಬರುವಷ್ಟರಲ್ಲಿ ತೂಕ ಕಡಿಮೆಯಾಗಿದ್ದರು. ಸ್ವತಃ ಕುರಿ ಪ್ರತಾಪ್ ಅವರೇ ಹೇಳಿರುವ ಪ್ರಕಾರ 15 ಕೆಜಿ ಕಡಿಮೆಯಾಗಿದ್ದಾರಂತೆ. ಇದು ಪೊಗರು ಚಿತ್ರಕ್ಕೂ ಅನುಕೂಲವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.