For Quick Alerts
  ALLOW NOTIFICATIONS  
  For Daily Alerts

  ಬಾಡಿದ ಹೂವು ಹೇಮಶ್ರೀಯ ಕಟ್ಟಕಡೆಯ ಮಾತುಗಳು

  By Prasad
  |

  ಕಿರುತೆರೆ ತಾರೆಯಾಗಿ, ಟಿವಿ ಕಾರ್ಯಕ್ರಮಗಳ ನಿರೂಪಕಿಯಾಗಿ, ರೂಪದರ್ಶಿಯಾಗಿ ಸಾಕಷ್ಟು ಹೆಸರು, ಹಣ ಗಳಿಸಿದ್ದ ಸುಂದರ ಕನ್ನಡ ನಟಿ ಹೇಮಶ್ರೀ (28) ಈ ರೀತಿ ಸಾಯಬೇಕಿತ್ತಾ? ಎಲ್ಲಕ್ಕಿಂತ ಹೆಚ್ಚಾಗಿ ಮದುವೆಯಾಗಿ ಯಾರೂ ನಿರೀಕ್ಷಿಸದಂಥ ಇಷ್ಟೊಂದು ಕಷ್ಟಗಳನ್ನು ಎದುರಿಸಬೇಕಿತ್ತಾ? ಅದಕ್ಕಿಂತಲೂ ಹೆಚ್ಚಾಗಿ ತನ್ನ ತಾಯಿಯಿಂದಲೇ ಅಷ್ಟೊಂದು ಅವಮಾನ ಅನುಭವಿಸಬೇಕಿತ್ತಾ? ಆ ಸುಂದರ ಮೊಗದ ಹಿಂದೆಯೂ ಇಷ್ಟೊಂದು ನೋವು ಮಡುಗಟ್ಟಿತ್ತಾ?

  ಶತ್ರು ಕೂಡ ಯಾರಿಗೂ ಇಂತಹ ಬದುಕು ಬಾರದಿರಲಿ ಎನ್ನುವಂತಹ ಬದುಕನ್ನು ತನ್ನ ಕಡೆಯ ದಿನಗಳಲ್ಲಿ ಬದುಕಿದವಳು ನಟಿ ಹೇಮಶ್ರೀ. ಟಿವಿ9 ಸುದ್ದಿ ವಾಹಿನಿಗೆ ಲಭ್ಯವಾಗಿರುವ ಹೇಮಶ್ರೀಯ ಧ್ವನಿಮುದ್ರಣದಲ್ಲಿ ತನ್ನ ದಾರುಣ ಕಥೆಯನ್ನೆಲ್ಲಾ ಆಕೆ ಹೇಳಿಕೊಂಡಿದ್ದಾಳೆ. ತಾನು ಅನುಭವಿಸುತ್ತಿದ್ದ ನೋವು, ಕಣ್ಮುಂದೆ ಕಾಣುತ್ತಿರುವ ಸಾವನ್ನು ಬಿಡಿಬಿಡಿಯಾಗಿ ಹಂಚಿಕೊಂಡಿದ್ದಾಳೆ. ತನ್ನ ನೋವು ಸ್ನೇಹಿತರಿಗೆ ಗೊತ್ತಾಗಲಿ ಎಂದು ಎಲ್ಲವನ್ನೂ ಹೇಳಿಕೊಂಡು ಬರಿದಾಗಿದ್ದಾಳೆ. ಅದರ ಸಂಕ್ಷಿಪ್ತ ವಿವರಗಳು ಇಲ್ಲಿವೆ. ಅದನ್ನು ಆಕೆಯ ಮಾತಲ್ಲೇ ಕೇಳಿರಿ. [ಹೇಮಶ್ರೀ ಚಿತ್ರಸಂಪುಟ]

  ನಾಲ್ವರನ್ನು ಇಟ್ಕೊಂಡಿದ್ದಾನೋ ಮದುವೆಯಾಗಿದ್ದಾನೋ

  ನಾಲ್ವರನ್ನು ಇಟ್ಕೊಂಡಿದ್ದಾನೋ ಮದುವೆಯಾಗಿದ್ದಾನೋ

  "ನನ್ನ ಗಂಡನಿಗೆ ನಾನೊಬ್ಬಳೇ ಹೆಂಡತಿಯಾಗಿರಲಿಲ್ಲ. ಆತನಿಗೆ ಇನ್ನೂ ನಾಲ್ಕು ಜನ ಹೆಂಡತಿಯರಿದ್ದಾರೆ. ಅವರಿಗೆ 9 ಮಕ್ಕಳಿದ್ದಾರೆ. ಅವರಲ್ಲಿ ಎಷ್ಟು ಜನ ಆತನ ಹೆಂಡತಿಯರಾಗಿದ್ದಾರೋ, ಅಥವಾ ಅವನೇ ಇಟ್ಟುಕೊಂಡಿದ್ದಾನೋ ಗೊತ್ತಿಲ್ಲ. ಕೆಲವರನ್ನು ಆತನೇ ಓಡಿಸಿಬಿಟ್ಟಿದ್ದಾನೆ. ಎರಡನೇ ಹೆಂಡತಿ ಆತನ ಫ್ರೆಂಡ್ ಮಾತ್ರ ಅಂತ ಕೇಳಿದೆ, ಮದುವೆಯಾಗಿದ್ದಾನೋ ಗೊತ್ತಿಲ್ಲ. ನಾಲ್ಕನೆಯವಳು ಕೋಣನಕುಂಟೆಯಲ್ಲಿದ್ದಾಳೆ. ಅವಳಿಗೆ ಇಬ್ಬರು ಮಕ್ಕಳು. ಆಕೆ ಮಹಾ ಚಾಲಾಕಿ. ಉಳಿದವರು ಕೂಲಿ ಕೆಲಸ ಮಾಡಿಕೊಂಡು ಅಬ್ಬೇಬಾರಿಯಂತೆ ಬದುಕುತ್ತಿದ್ದಾರೆ."

  ಆತ ನನ್ನ ಭವಿಷ್ಯವನ್ನೇ ತೆಗೆದುಬಿಟ್ಟ

  ಆತ ನನ್ನ ಭವಿಷ್ಯವನ್ನೇ ತೆಗೆದುಬಿಟ್ಟ

  "ಇಂಥವನ ಜೊತೆ ಬಾಳುವವರಿಗೆ ಮರ್ಯಾದೆ ಇರುವುದಿಲ್ಲ. ಆತ ಮಹಾ ಮೋಸಗಾರ, ಮಹಾ ಕಾಮಿ. ಹೆಂಗಸರೇ ಆತನ ದೌರ್ಬಲ್ಯ. ಅಲ್ಲದೆ ಆತನಿಗೆ ನರದೌರ್ಬಲ್ಯವೂ ಇದೆ. ಆತನ ಶಕ್ತಿಯೂ ಕಡಿಮೆಯಾಗಿಬಿಟ್ಟಿದೆ. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನೊಂದಿಗೆ ಕಳೆದ ಒಂದೊಂದು ಕ್ಷಣವೂ ನರಕದಲ್ಲಿ ಕಳೆದಂತೆ ನಾನು ಕಳೆದಿದ್ದೇನೆ. ಕ್ಷಣಕ್ಷಣವೂ ಸಾಯುತ್ತಿದ್ದೇನೆ. ಯಾವಾಗ ಸಾಯುತ್ತೇನೋ ಎಂಬುದೇ ಗೊತ್ತಾಗುತ್ತಿಲ್ಲ. ಆತ ನನ್ನ ಭವಿಷ್ಯವನ್ನೇ ತೆಗೆದುಬಿಟ್ಟ. ನಾನು ವಿಲಿವಿಲಿ ಒದ್ದಾಡಿ ಸಾಯಬೇಕೆಂಬುದೇ ಆತನ ಇಚ್ಛೆ."

  ಮೂವರೊಂದಿಗೆ ನಾನು ಮಲಗುತ್ತಿದ್ದೇನಂತೆ!

  ಮೂವರೊಂದಿಗೆ ನಾನು ಮಲಗುತ್ತಿದ್ದೇನಂತೆ!

  "ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಸ್ನೇಹಿತೆಯಂತೆ ಇದ್ದ ನನ್ನ ತಾಯಿಯನ್ನು ಆತ ಸಂಪೂರ್ಣ ಬದಲಾಯಿಸಿಬಿಟ್ಟಿದ್ದಾನೆ. ಅಮ್ಮನನ್ನು ಮಾಟಮಂತ್ರ ಮಾಡಿಸಿ, ವಶೀಕರಣ ಮಾಡಿಸಿ ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡುಬಿಟ್ಟಿದ್ದಾನೆ. ಊಟದಲ್ಲಿ ಕುಡಿಯೋದರಲ್ಲಿ ಏನೇನೋ ಬೆರೆಸಿಕೊಟ್ಟಿದ್ದಾನೆ. ಆಕೆ ಆತ ಹೇಳಿದಂತೆಯೇ ಗೊಂಬೆಯಂತೆ ಆಡಿಕೊಂಡಿದ್ದಾಳೆ. ಸ್ವಂತ ನನ್ನ ಅಮ್ಮನೇ, ನಾನು ಮೂರು ಜನರೊಂದಿಗೆ ಓಡಾಡುತ್ತಿದ್ದೇನೆ. ಆ ಮೂವರೊಂದಿಗೆ ಮಲಗುತ್ತಿದ್ದೇನಂತೆಲ್ಲ ಎಲ್ಲರ ಎದುರಿಗೆ ಹೇಳಿಕೊಂಡು ಓಡಾಡುತ್ತಿದ್ದಾಳೆ. ಯಾರಿಗೆ ಬೇಕಾಗಿದೆ ಈ ಜನ್ಮ ಎಂಬಂತಾಗಿದೆ ನನ್ನ ಸ್ಥಿತಿ."

  ಅಮ್ಮನೇ ಆತನ ವೈಫ್‌ನಂತೆ ಬಿಹೇವ್ ಮಾಡ್ತಿದ್ದಾಳೆ!

  ಅಮ್ಮನೇ ಆತನ ವೈಫ್‌ನಂತೆ ಬಿಹೇವ್ ಮಾಡ್ತಿದ್ದಾಳೆ!

  "ಇನ್ನೂ ಆಘಾತಕಾರಿ ಸಂಗತಿಯೆಂದರೆ, ನನ್ನ ಅಮ್ಮನೇ ಆತನ ವೈಫ್‌ನಂತೆ ಬಿಹೇವ್ ಮಾಡುತ್ತಿದ್ದಾಳೆ. ನಾನು ಆ ಮನೆ ಬಿಟ್ಟು ದೊಡ್ಡಮ್ಮನ ಮನೆಗೆ ಹೋದರೂ ನನ್ನ ವಿರುದ್ಧ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾಳೆ. ನಾನು ಅಲ್ಲಿಯೂ ವೇಶ್ಯಾವಾಟಿಕೆ ಮಾಡುತ್ತೇನೆಂದು ಆಕೆಯ ಕಿವಿ ತುಂಬುತ್ತಿದ್ದಾಳೆ. ಅಕ್ಕಪಕ್ಕದವರು, ರಿಲೆಟೀವ್ಸ್ ಮುಂದೆಯೆಲ್ಲಾ ಫೋನ್ ಮಾಡಿ ನಾನು ಮೂರು ಜನರನ್ನು ಇಟ್ಟುಕೊಂಡಿದ್ದೇನೆ ಎಂದೆಲ್ಲಾ ಅಮ್ಮನೇ ಹೇಳುತ್ತಿದ್ದಾಳೆ. ನನಗಂತೂ ಮನೆಯಿಂದ ಹೊರಗೆ ಕಾಲಿಡಲೇ ಆಗುತ್ತಿಲ್ಲ."

  ಕಂಡ ಕೂಡಲೆ ಅನುಭವಿಸಬೇಕು, ಇಲ್ಲ ಸಾಯಿಸಬೇಕು

  ಕಂಡ ಕೂಡಲೆ ಅನುಭವಿಸಬೇಕು, ಇಲ್ಲ ಸಾಯಿಸಬೇಕು

  "ಸತತವಾಗಿ ದೇವರ ಪೂಜೆ ಮಾಡಿ, ಸುದರ್ಶನ ಹೋಮ ಮಾಡಿದ್ದಕ್ಕೆ ನಾನು ಇನ್ನೂ ಜೀವಂತವಿದ್ದೇನೆ. ಇಲ್ಲದಿದ್ದರೆ ನನ್ನನ್ನು ಇಷ್ಟೊತ್ತಿಗೆ ಮುಗಿಸಿಬಿಟ್ಟಿರುತ್ತಿದ್ದ. ನನ್ನನ್ನು ಕಂಡಕೂಡಲೆ ಅನುಭವಿಸಬೇಕು, ನನ್ನ ಸಾಯಿಸಬೇಕು ಎಂಬುದೇ ಆತನ ಆಶಯ. ನನ್ನನ್ನು ಹೊಡೆಸಲು ರೌಡಿಗಳನ್ನು ಕೂಡ ಬಿಟ್ಟಿದ್ದ. ನನಗೆ ಗೊತ್ತಿರುವ ಸಂಗತಿಯನ್ನೆಲ್ಲಾ ಪಬ್ಲಿಕ್ ಮಾಡಿದರೆ ಸಾಯಿಸಿಯೇಬಿಡುತ್ತಾನಂತೆ."

  ನೋವು ಯಾರ ಮುಂದೆ ಹೇಳಿಕೊಳ್ಳಲಿ?

  ನೋವು ಯಾರ ಮುಂದೆ ಹೇಳಿಕೊಳ್ಳಲಿ?

  "ಒಟ್ಟಿನಲ್ಲಿ ನನ್ನ ಜೀವನವೆಂಬುದು ನರಕದಂತಾಗಿದೆ. ನನ್ನ ನೋವನ್ನು ಯಾರ ಬಳಿಗೆ ಹೇಳಿಕೊಳ್ಳುವುದೋ ಗೊತ್ತಾಗುತ್ತಿಲ್ಲ. ತುಂಬಾ ನೋವು ಅನುಭವಿಸಿಬಿಟ್ಟಿದ್ದೇನೆ. ಅಪ್ಪನನ್ನು ಕೇಳಿದರೆ, ನೀವೇ ಕೋರ್ಟಿನಲ್ಲಿ ಮಾತಾಡಿಕೊಳ್ಳಿರಿ ಎಂದು ಹೇಳುತ್ತಾರೆ. ಅಪ್ಪನೂ ಹೀಗೆ ಮಾತಾಡಿದ್ದರಿಂದ ತುಂಬಾ ನೋವಾಗಿದೆ. ಅಮ್ಮನಿಗೆ ಕೂಡ ನನ್ನ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತಾಡಬೇಡ ಎಂದು ಹೇಳಿದ್ದರೂ ಕೇಳಿಲ್ಲ. ಅನೇಕ ಬಾರಿ ಸಾಯಬೇಕಂತ ಕೂಡ ಪ್ರಯತ್ನ ಮಾಡಿದ್ದೆ. ಯಾವಾಗ ಸತ್ತುಹೋಗಿಬಿಡುತ್ತೇನೋ ಗೊತ್ತಾಗುತ್ತಿಲ್ಲ."

  ಸಾವನ್ನು ಆಕೆ ಮೊದಲೇ ಕಂಡಿದ್ದಳಾ?

  ಸಾವನ್ನು ಆಕೆ ಮೊದಲೇ ಕಂಡಿದ್ದಳಾ?

  ಇಷ್ಟು ಹೇಳಿ ಹೇಮಶ್ರೀ ತನ್ನ ಮಾತನ್ನು ಮುಗಿಸಿಬಿಟ್ಟಿದ್ದಾಳೆ. ಆಕೆ ಸಾವು ಎಂಬುದು ಅಡಿಗಡಿಗೂ ಬರುತ್ತಿತ್ತು. ಅದು ಆಕೆಗೂ ಗೊತ್ತಾಗುತ್ತಿತ್ತು. ಮಾನಸಿಕ ಕಿರುಕುಳ, ಹೊಡೆತ, ಅವಮಾನಗಳನ್ನು ನುಂಗುತ್ತಲೇ ಹೇಮಶ್ರೀ ತನ್ನ ಸಾವನ್ನು ತಾನೇ ಎದುರುನೋಡುತ್ತಿದ್ದಳು. ಸಾವು ಹತ್ತಿರ ಬರುತ್ತಿರುವುದು ಆಕೆಗೂ ಗೊತ್ತಾಗುತ್ತಿತ್ತು ಎಂಬುದು ಆಕೆಯ ಮಾತುಗಳಿಂದಲೇ ವೇದ್ಯವಾಗಿದೆ. ಕೊನೆಗೂ ಆಕೆ ಭಯಾನಕ ಸಾವನ್ನು ಕಂಡುಬಿಟ್ಟಿದ್ದಾಳೆ. ಕುಸುಮವೊಂದನ್ನು ಅರಳುವ ಮೊದಲೇ ಹೊಸಕಿಹಾಕಲಾಗಿದೆ.

  English summary
  Deceased small screen Kannada actress Hemashree has recorded her pain, agony, insult she faced from her husband Surendra Babu. The recorded file is available to TV9. In it Hemashree has blamed her mother for forced marriage and for the fate she would be going to meet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X