For Quick Alerts
  ALLOW NOTIFICATIONS  
  For Daily Alerts

  'ಲೈಫ್ ಈಸ್ ಟೂ ಶಾರ್ಟ್...' ಸಿದ್ಧಾರ್ಥ್ ಶುಕ್ಲಾ ಹಳೆಯ ಟ್ವೀಟ್ ವೈರಲ್

  By ಫಿಲ್ಮಿಬೀಟ್ ಡೆಸ್ಕ್
  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ಹಠಾತ್ ನಿಧನ ಇಡೀ ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ. ಬಿಗ್ ಬಾಸ್ 13 ವಿನ್ನರ್ ಸಿದ್ಧಾರ್ಥ್ ಶುಕ್ಲಾ ಗುರುವಾರ ಬೆಳಗ್ಗೆ (ಸೆಪ್ಟಂಬರ್ 02) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದ ನಟ ಸಿದ್ಧಾರ್ಥ್‌ಗೆ 40 ವರ್ಷವಯಸ್ಸಾಗಿತ್ತು.

  ರಾತ್ರಿ ಊಟ ಮಾಡಿ ಮಲಗಿದ್ದ ಸಿದ್ಧಾರ್ಥ ಬೆಳಗ್ಗೆಯಷ್ಟರಲ್ಲಿ ಶವವಾಗಿದ್ದರು. ಆದರೆ ತಕ್ಷಣ ಅವರನ್ನು ಮುಂಬೈನ ಕೂಪರ್ ಆಸ್ಪತ್ರೆ ಕರೆದುಕೊಂಡು ಹೋಗಲಾಗಿದೆ. ಆದರೆ ಆಗಲೇ ಸಿದ್ಧಾರ್ಥ್ ಪ್ರಾಣಪಕ್ಷಿ ಹಾರಿಹೋಗಿತ್ತು. ಸಿದ್ಧಾರ್ಥ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ವೈದ್ಯರು ಅನೌನ್ಸ್ ಮಾಡಿದರು.

  Breaking: ಬಾಲಿವುಡ್ ಯುವ ನಟ ಸಿದ್ಧಾರ್ಥ್ ಶುಕ್ಲಾ ನಿಧನBreaking: ಬಾಲಿವುಡ್ ಯುವ ನಟ ಸಿದ್ಧಾರ್ಥ್ ಶುಕ್ಲಾ ನಿಧನ

  ಫಿಟ್ ನೆಸ್ ಫ್ರೀಕ್ ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಕಿರುತೆರೆ ಲೋಕದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದ ನಟ ಸಿದ್ಧಾರ್ಥ್‌ಗೆ ಬಿಗ್ ಬಾಸ್ 13 ವಿನ್ನರ್ ಪಟ್ಟ ಮತ್ತಷ್ಟು ಉತ್ತುಂಗಕ್ಕೆ ಏರಿಸಿತ್ತು. ಬಿಗ್ ಬಾಸ್ ಬಳಿಕ ಸಿದ್ಧಾರ್ಥ್ ಮತ್ತಷ್ಟು ಬ್ಯುಸಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದ ಸಿದ್ಧಾರ್ಥ್ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದರು.

  ನಟ ಸಿದ್ಧಾರ್ಥ್ ನಿಧನದ ಬಳಿಕ ಹಳೆಯ ಟ್ವೀಟ್ ವೈರಲ್ ಆಗಿದೆ. ಲೈಫ್ ತುಂಬಾ ಚಿಕ್ಕದು ಎಂದು ಹೇಳಿ ಸಿದ್ಧಾರ್ಥ್ ಫೆಬ್ರವರಿಯಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಈಗ ವೈರಲ್ ಆಗುತ್ತಿದೆ. ಸಿದ್ಧಾರ್ಥ್ ಹಳೆಯ ಟ್ವೀಟ್ ಅನ್ನು ಶೇರ್ ಮಾಡಿ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಅಂದಹಾಗೆ ಸಿದ್ಧಾರ್ಥ್ ಟ್ವೀಟ್‌ನಲ್ಲಿ "ಇತರರು ನಿಮ್ಮ ಬಗ್ಗೆ ಏನು ಹೇಳುತ್ತಾರೆ ಅಥವಾ ಏನು ಯೋಚಿಸುತ್ತಾರೆ ಎಂದು ಚಿಂತಿಸಲು ಜೀವನವು ತುಂಬಾ ಚಿಕ್ಕದಾಗಿದೆ. ಜೀವನವನ್ನು ಎಂಜಾಯ್ ಮಾಡಿ. ಮಾತನಾಡುವವರಿಗೆ ಏನಾದರು ಕೊಡಿ" ಎಂದು ಹೇಳಿದ್ದರು. ಈ ಟ್ವೀಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಮಾಡೆಲಿಂಗ್ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಸಿದ್ಧಾರ್ಥ್ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟರು. ಹಲವು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಇತ್ತೀಚಿಗಷ್ಟೆ ಪ್ರಸಾರವಾದ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಉದ್ಘಾಟನೆ ವೇಳೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು. 'ಡ್ಯಾನ್ಸ್ ದಿವಾನೆ-3' ಕಾರ್ಯಕ್ರಮದಲ್ಲಿ ಶೆಹನಾಜ್ ಗಿಲ್ ಜೊತೆ ಭಾಗವಹಿಸಿದ್ದರು. ಅಂದ್ಹಾಗೆ, ಶೆಹನಾಜ್ ಗಿಲ್ ಜೊತೆ ಸಿದ್ಧಾರ್ಥ್ ಶುಕ್ಲಾ ಪ್ರೀತಿಯಲ್ಲಿದ್ದರು ಎಂಬ ಸುದ್ದಿಯೂ ಇದೆ. ಇವರಿಬ್ಬರು ಹಲವು ವೇದಿಕೆಗಳಲ್ಲಿ ಒಟ್ಟಿಗೆ ಡ್ಯಾನ್ಸ್ ಸಹ ಮಾಡಿದ್ದರು. ಇಬ್ಬರ ನಡುವೆ ಪ್ರೀತಿ-ಪ್ರೇಮದ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಇಬ್ಬರೂ ಬಹಿರಂಗ ಪಡಿಸಿಲ್ಲ. ಇಬ್ಬರ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ 'ಸಿದ್ನಾಜ್' ಎಂದು ಕರೆಯುತ್ತಿದ್ದರು.

  ಸಿದ್ಧಾರ್ಥ್ 2019ರಲ್ಲಿ ಪ್ರಸಾರವಾದ ಬಿಗ್ ಬಾಸ್ 13 ರಲ್ಲಿ ಭಾಗಿಯಾಗಿದ್ದರು. ಅದ್ಭುತವಾಗಿ ಆಟವಾಡುವ ಮೂಲಕ ಸಿದ್ಧಾರ್ಥ್ ಪ್ರೇಕ್ಷಕರ ಮನಗೆದ್ದಿದ್ದರು. ಬಿಗ್ ಬಾಸ್ 13 ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದರು. ಇನ್ನು ಬಿಗ್ ಬಾಸ್ 14ನಲ್ಲೂ ಸಿದ್ಧಾರ್ಥ್ ಗೆಸ್ಟ್ ಆಗಿ ಭಾಗಿಯಾಗಿದ್ದರು.

  ಇನ್ನು ಸಿದ್ಧಾರ್ಥ 'ಬಾಲಿಕಾ ವಧು', 'ದಿಲ್ ಸೆ ದಿಲ್ ತಕ್' ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ನಟಿಸುತ್ತಿದ್ದು, ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. 'ಜಲಕಾ ದಿಕ್ ಲಾಜಾ 6', 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ' ಮತ್ತು 'ಬಿಗ್ ಬಾಸ್ 13' ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

  English summary
  'Life is too Short...' Sidharth Shukla's old tweet viral after his death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X