»   » ಮೊದಲ ಟಾಸ್ಕ್ ಗೆದ್ದ ಲೈಫ್ ಸೂಪರ್ ಗುರು ಸೀನಿಯರ್ಸ್

ಮೊದಲ ಟಾಸ್ಕ್ ಗೆದ್ದ ಲೈಫ್ ಸೂಪರ್ ಗುರು ಸೀನಿಯರ್ಸ್

Posted By: ಉದಯರವಿ
Subscribe to Filmibeat Kannada

ಜೀ ಕನ್ನಡ ವಾಹಿನಿಯ ಲೈಫ್ ಸೂಪರ್ ಗುರು ರಿಯಾಲಿಟಿ ಶೋನ ಅಸಲಿ ಆಟ ಈಗ ಶುರುವಾಗಿದೆ. ಹತ್ತು ಜನ ಸೀನಿಯರ್ಸ್ ಹಾಗೂ ಹತ್ತು ಜನ ಜಾಲಿ ಜೂನಿಯರ್ಸ್ ನಡುವಿನ ಆಟಕ್ಕೆ ವೇದಿಕೆಯಾಗಿದ್ದು ಇನ್ನೋವೇಟಿವ್ ಫಿಲಂ ಸಿಟಿ.

ಬಸ್ ಹತ್ತಿ ಹೊರಟ ಸೂಪರ್ ಸೀನಿಯರ್ಸ್ ಹಾಗೂ ಜಾಲಿ ಜೂನಿಯರ್ಸ್ ಗೆ ಕೊಟ್ಟ ಮೊದಲ ಟಸ್ಕ್ ಜೂಸ್ ಮಾರುವುದು. ಎರಡೂ ತಂಡಗಳಿಗೆ ಎರಡು ಜೂಸ್ ಅಂಗಡಿಗಳನ್ನು ಹಾಕಿಕೊಡಲಾಯಿತು.

Life Super Guru day 6 highlights1

ಜಾಲಿ ಜೂನಿಯರ್ಸ್ ತಂಡದ ನಾಯಕನಾಗಿ ಅರ್ಜುನ್ ಆಯ್ಕೆಯಾದರೆ, ಸೂಪರ್ ಸೀನಿಯರ್ಸ್ ತಂಡದ ನಾಯಕನಾಗಿ ರಾಮಪ್ಪ ಆಯ್ಕೆಯಾದರು. ಎರಡು ಜನರೇಶನ್ ಗಳ ಡಿಚ್ಚಿ ಇಂದಿನಿಂದ ಆರಂಭವಾಗಿದೆ. ಪ್ರತಿವಾರ ಎಲಿಮೇಷನ್ ಇರುತ್ತದೆ.

ಜೂಸ್ ಅಂಗಡಿ, ಜೂಸ್ ಸೆಂಟರ್ ಟಾಸ್ಕ್ ಸಂಜೆಯವರೆಗೂ ನಡೆಯಿತು. ಇನ್ನೋವೇಟಿವ್ ಫಿಲಂ ಸಿಟಿಗೆ ಬರುವವರಿಗೆ ಎರಡೂ ತಂಡಗಳು ಜೂಸ್ ಮಾರಬೇಕು. ಯಾವ ಟೀಂನಿಂದ ಹೆಚ್ಚಿನ ವ್ಯಾಪಾರ ಆಗಿರುತ್ತದೋ ಅವರೇ ಗೆದ್ದಂತೆ ಎಂದರು.

Life Super Guru day 6 highlights2

ಟಾಸ್ಕ್ ಏನು ಎಂದು ಗೊತ್ತಾದ ಬಳಿಕ ಎಲ್ಲರೂ ಅವರವರಲ್ಲೇ ಚರ್ಚಿಸಿದರು. ಕಬ್ಬಿನ ರಸ ತೆಗೆದರು, ಎಳನೀರು ಕೊಚ್ಚಿದರು, ಜೂಸ್ ಹಿಂಡಿದರು. ಯಾವುದೇ ಗ್ರಾಹಕರಿಗೆ ಬಲವಂತಪಡಿಸುವಂತಿಲ್ಲ ಎಂಬ ನಿಯಮ ಇದ್ದರೂ ಎಲ್ಲರೂ ಆ ನಿಯಮಗಳನ್ನು ಅಷ್ಟಾಗಿ ಪಾಲಿಸಲಿಲ್ಲ.

ಮೊದಲ ಟಾಸ್ಕ್ ನಲ್ಲಿ ಅದ್ಭುತವಾಗಿ ಪ್ರದರ್ಶಿಸಿದ್ದೀರಾ ಎಂದು ಹಾಡಿ ಹೊಗಳಿದರು ಗುರುಪ್ರಸಾದ್ ಹಾಗೂ ಯೋಗಿ. ಪ್ರತಿ ಶುಕ್ರವಾರ ಎಲಿಮಿನೇಷನ್ ಇರುತ್ತದೆ. ಒಂದು ವಾರದಲ್ಲಿ ಯಾರಿಗೆ ಹೆಚ್ಚು ಓಟುಗಳು ಬಿದ್ದುರುತ್ತವೋ ಅವರು ಎಲಿಮಿನೇಟ್ ಆಗಿದ್ದರು.

Life Super Guru day 6 highlights3

ಒಂದಷ್ಟು ವಾದ ವಿವಾದಗಳು, ನಿಂದನೆ, ಆಪಾದನೆಗಳೂ ಒಬ್ಬರ ಮೇಲೆ ಒಬ್ಬರು ಮಾಡಿಕೊಂಡರು ಕೊನೆಗೆ ಗೆದ್ದಿದ್ದು ಮಾತ್ರ ಸೂಪರ್ ಸೀನಿಯರ್ಸ್. ಜೂಸ್ ಮಾರಿ ಸೀರಿಯರ್ಸ್ ರು. 4135. ಸೋತ ಟೀಮಿಗೆ ನಾಮಿನೇಷನ್ ಎಂಬ ಶಿಕ್ಷೆಯಾಯಿತು. ಮೊದಲ ದಿನವೇ ಸುಷ್ಮಾಗೆ ಅತ್ಯಧಿಕ ಓಟುಗಳು ಬಿದ್ದು ವೀಕ್ ಪರ್ಮಾರ್ಮರ್ ಎನ್ನಿಸಿಕೊಂಡರು.

English summary
Life Super Guru day 6 highlights. Super seniors won the first task in the show. Jolly juniors Sushma voted for nomination for first time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada