For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್‌ ಶೋಗೆ ಹೋಗಿ ಬಂದ ಈ ಸ್ಪರ್ಧಿಗಳನ್ನು ಮರೆತುಬಿಟ್ಟಿರಾ?

  |

  ಬಿಗ್ ಬಾಸ್ ಗೆದ್ರೆ ಅರ್ಧಕೋಟಿ, ಬಿಗ್ ಬಾಸ್‌ಗೆ ಬಂದು ಹೋದ್ರೆ ಪಬ್ಲಿಸಿಟಿ. ಬಿಗ್ ಬಾಸ್‌ ಅಂದ್ರೆನೇ ಪ್ರಚಾರ ಎಂದು ನಂಬಿರುವ ಸ್ಪರ್ಧಿಗಳು ಇದ್ದಾರೆ. ಪ್ರಚಾರದ ಅವಶ್ಯಕತೆಯೂ ಇಲ್ಲದ ಅನೇಕ ಮಂದಿ ಈ ಆಟದಲ್ಲಿ ಭಾಗವಹಿಸಿರುವ ಉದಾಹರಣೆಯೂ ಇದೆ. ಬಿಗ್ ಬಾಸ್‌ ಕಾರ್ಯಕ್ರಮಕ್ಕೆ ಒಂದು ಸಲ ಹೋಗಿ ಬಂದ್ರೆ ಸಾಕು ಎಂಬ ಭಾವನೆ ಹೊಂದಿರುವ ಅನೇಕರು ಈಗಲೂ ಪ್ರಯತ್ನ ಪಡ್ತಿದ್ದಾರೆ.

  ಬಿಗ್ ಬಾಸ್‌ಗೆ ಹೋಗಿ ಬಂದವರಿಗೆಲ್ಲ ಅದೃಷ್ಟ ಕೈ ಹಿಡಿದಿಲ್ಲ. ಬಿಗ್ ಬಾಸ್‌ನಿಂದ ಹೊರಬಂದು ಮೂಲೆಗುಂಪಾಗಿರುವವರು ಇದ್ದಾರೆ, ಬಿಗ್‌ಬಾಸ್ ಮುಗಿದ ಮೇಲೆ ಸ್ಟಾರ್‌ ಆಗಿರುವವರು ಇದ್ದಾರೆ. ಕಳೆದ ಏಳು ಆವೃತ್ತಿಗಳಲ್ಲಿ 126 ಸ್ಪರ್ಧಿಗಳು ಭಾಗವಹಿಸಿದ್ದಾರೆ. ವಿಜಯ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ, ಸಂಜನಾ ಗಲ್ರಾನಿ, ಪೂಜಾ ಗಾಂಧಿ, ಅರುಣ್ ಸಾಗರ್, ಮಾಸ್ಟರ್ ಆನಂದ್, ನಿಖಿತಾ, ಅನುಶ್ರೀ, ಶಕೀಲಾ, ಹುಚ್ಚ ವೆಂಕಟ್, ಮಾಳವಿಕಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಹ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಾಗಿ ಪಾಲ್ಗೊಂಡಿದ್ದರು.

  ಸಾಮಾನ್ಯ ವ್ಯಕ್ತಿಗಳು ಸೇರಿದಂತೆ ಕಿರುತೆರೆ ಕಲಾವಿದರು, ರಿಯಾಲಿಟಿ ಶೋ ಸ್ಪರ್ಧಿಗಳು, ಯಾರಿಗೂ ಪರಿಚಯವಿಲ್ಲದ ಕೆಲವರು ಸಹ ಈ ಶೋನಲ್ಲಿ ಅವಕಾಶ ಪಡೆದುಕೊಂಡಿದ್ದರು. ಆದ್ರೆ, ಬಿಗ್ ಬಾಸ್‌ಗೆ ಬಂದು ಹೋದ್ಮೇಲೆ ಎಲ್ಲರೂ ಗುರುತಿಸಿಕೊಂಡಿದ್ದರು. ಬಹುಶಃ ಬಿಗ್‌ಬಾಸ್‌ ಸ್ಪರ್ಧಿಗಳು ಅಂದ್ರೆ ಬಹುತೇಕರು ನೆನಪಿನಲ್ಲಿಯೇ ಇದ್ದಾರೆ. ಕೆಲವು ಸ್ಪರ್ಧಿಗಳನ್ನು ನಾವು ಪಟ್ಟಿ ಮಾಡಿದ್ದೇವೆ, ಇವರು ದೊಡ್ಮನೆ ಆಟದಲ್ಲಿದ್ದರು, ಯಾವ ಆವೃತ್ತಿ ಎಂದು ಒಮ್ಮೆ ನೆನಪಿಸಿಕೊಳ್ಳಿ. ಮುಂದೆ ಓದಿ....

  ಗಗನ ಸಖಿ ನೇಹಾ ಗೌಡ

  ಗಗನ ಸಖಿ ನೇಹಾ ಗೌಡ

  ದಿನಾ ಫ್ಲೈಟ್ ನಲ್ಲಿ ಹಾರಾಡುತ್ತಿದ್ದ ಗಗನಸಖಿ ನೇಹಾ ಗೌಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು. 42 ದಿನಗಳ ಕಾಲ ದೊಡ್ಮನೆಯಲ್ಲಿದ್ದ ನೇಹಾ ಗೌಡ ಏಳನೇ ವಾರ ಎಲಿಮಿನೇಟ್ ಆಗಿದ್ದರು. ಬಿಗ್ ಬಾಸ್ ಬಳಿಕ ಕನ್ನಡದ ಕೆಲವು ಚಿತ್ರಗಳಲ್ಲಿಯೂ ನೇಹಾ ಗೌಡ ಕಾಣಿಸಿಕೊಂಡಿದ್ದರು. ಅಂದ್ಹಾಗೆ, ನೇಹಾ ಗೌಡ ಇದ್ದಿದ್ದು ಬಿಗ್ ಬಾಸ್ ಸೀಸನ್ 3ರಲ್ಲಿ. ರೆಹಮಾನ್ ಸಹೋದರಿ ಎಂದೇ ಖ್ಯಾತಿ ಗಳಿಸಿಕೊಂಡಿದ್ದರು.

  ರಕ್ಷಾ ಸೋಮಶೇಖರ್

  ರಕ್ಷಾ ಸೋಮಶೇಖರ್

  ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದ ನಟಿ ರಕ್ಷಾ ಸೋಮಶೇಖರ್ ಹೆಚ್ಚು ಸುದ್ದಿಯಲ್ಲಿದ್ದರು. ಏಳನೇ ಆವೃತ್ತಿಯಲ್ಲಿ 43ನೇ ದಿನ ಬಿಗ್ ಮನೆಗೆ ಪ್ರವೇಶ ಪಡೆದಿದ್ದು ರಕ್ಷಾ 13 ದಿನಗಳ ಕಾಲ ಬಿಗ್ ಮನೆಯಲ್ಲಿದ್ದರು.

  ಮಸ್ತಾನ್ ಚಂದ್ರ

  ಮಸ್ತಾನ್ ಚಂದ್ರ

  ಮಸ್ತಾನ್ ಚಂದ್ರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದರು. ಪ್ರಥಮ್, ಕಿರಿಕ್ ಕೀರ್ತಿ, ಕಾರುಣ್ಯ ರಾಮ್ ಅವರಿದ್ದ ಸೀಸನ್ ಅಂದ್ರೆ ಬಿಗ್ ಬಾಸ್ ನಾಲ್ಕರಲ್ಲಿ ಮಸ್ತಾನ್ ಎಂಟ್ರಿಯಾಗಿದ್ದರು. ಮಸ್ತಾನ್ ಮೂಲತಃ ನಟ ಆಗಿದ್ದರು, ನಿರ್ದೇಶನವನ್ನು ಸಹ ಮಾಡುತ್ತಿದ್ದರು.

  ವೈಲ್ಡ್ ಕಾರ್ಡ್ ಎಂಟ್ರಿ ಪಡೆದ 'ಮಸ್ತಾನ್' ಕಾರ್ ಡೀಲರ್ ಅಲ್ಲ, ಮತ್ಯಾರು?

  ಸುಮಾ ರಾಜ್‌ಕುಮಾರ್

  ಸುಮಾ ರಾಜ್‌ಕುಮಾರ್

  ಸುಮ ರಾಜ್ ಕುಮಾರ್ ಎಂಬ ಮಹಿಳೆ ಬಿಗ್ ಬಾಸ್‌ಗೆ ಬಂದಿದ್ದರು ಎನ್ನುವುದು ಬಹುತೇಕರಿಗೆ ತಿಳಿದಿರಲಿಲ್ಲ. ಏಕಂದ್ರೆ, ಸುಮಾ ಬಿಗ್ ಮನೆ ಪ್ರವೇಶ ಮಾಡಿದ ಮೊದಲ ವಾರವೇ ಎಲಿಮಿನೇಟ್ ಆಗಿದ್ದರು. ಅಂದ್ಹಾಗೆ, ಸುಮಾ ರಾಜ್ ಕುಮಾರ್ ಕಾಣಿಸಿಕೊಂಡಿದ್ದು ಬಿಗ್ ಬಾಸ್ ಕನ್ನಡ ಐದನೇ ಆವೃತ್ತಿಯಲ್ಲಿ. ಈ ಆವೃತ್ತಿಯಲ್ಲಿ ಕಾಮನ್ ಮ್ಯಾನ್ ವಿಭಾಗದಲ್ಲಿ ಹೆಚ್ಚು ಜನರಿಗೆ ಅವಕಾಶ ಕೊಡಲಾಗಿತ್ತು.

  'ಬಿಗ್ ಬಾಸ್' ಮನೆಯ ಹೊಸ 'ಅಮ್ಮ' ಸುಮಾ ರಾಜ್ ಕುಮಾರ್ ಜೀವನ ಹಿನ್ನೋಟ.!

  ರೀಮಾ ದಾಸ್

  ರೀಮಾ ದಾಸ್

  ಬೆಂಗಳೂರಿನ ಐ.ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಂದರ ಯುವತಿ ರೀಮಾ ಬಿಗ್ ಬಾಸ್ ಮನೆಯಲ್ಲಿ ನೋಡಿರುವ ನೆನಪು ಇದೆಯೇ? ಪುತ್ತೂರು ಮೂಲದ ರೀಮಾ 'ಬಿಗ್ ಬಾಸ್ ಕನ್ನಡ-6' ಸ್ಪರ್ಧಿಯಾಗಿದ್ದರು. ಸಾಫ್ಟ್‌ವೇರ್ ಆಗಿದ್ದರು ಡ್ಯಾನ್ಸ್ ಚೆನ್ನಾಗಿ ಆಡ್ತಿದ್ರು. ಆದರೆ, ಎರಡನೇ ವಾರದಲ್ಲಿಯೇ ಎಲಿಮಿನೇಟ್ ಆಗಿದ್ದರು.

  'ಸಾಫ್ಟ್ ವೇರ್ ಸುಂದರಿ' ರೀಮಾ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

  ಆನಂದ್ ಮಾಲಗತ್ತಿ

  ಆನಂದ್ ಮಾಲಗತ್ತಿ

  ಮೊದಲ ಸಲ ಬಿಗ್ ಬಾಸ್ ಮನೆಗೆ ಬಸ್ ಕಂಡಕ್ಟರ್ (ಬಿಎಂಟಿಸಿ ಬಸ್ ಕಂಡಕ್ಟರ್) ಒಬ್ಬರು ಬಂದಿದ್ದರು. ಕಾಮನ್ ಮ್ಯಾನ್ ವಿಭಾಗದಲ್ಲಿ ಯಾದಗಿರಿ ಜಿಲ್ಲೆಯ ಆನಂದ್ ಮಾಲಗತ್ತಿ ದೊಡ್ಮನೆಗೆ ಟಿಕೆಟ್ ಪಡೆದುಕೊಂಡಿದ್ದರು. ಏಳು ವಾರ ಬಿಗ್ ಬಾಸ್ ಮನೆಯಲ್ಲಿದ್ದು ಬಳಿಕ ಎಲಿಮಿನೇಟ್ ಆಗಿದ್ದರು.

  'ಬಿಗ್ ಬಾಸ್' ಮನೆಗೆ ಟಿಕೆಟ್ ಪಡೆದುಕೊಂಡ ಆನಂದ ಮಾಲಗತ್ತಿ ಯಾರು.?

  ಸ್ನೇಹಾ ಆಚಾರ್ಯ

  ಸ್ನೇಹಾ ಆಚಾರ್ಯ

  ಕನ್ನಡ ನಟಿ, ಡ್ಯಾನ್ಸರ್, ಕೊರಿಯೋಗ್ರಾಫರ್ ಆಗಿರುವ ಸ್ನೇಹಾ ಆಚಾರ್ಯ ಸಹ 'ಬಿಗ್ ಬಾಸ್ ಕನ್ನಡ-6ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು. ಸ್ನೇಹಾ ಮೂರನೇ ವಾರದಲ್ಲಿಯೇ ಎಲಿಮಿನೇಟ್ ಆಗಿದ್ದರು. ವಿದೇಶಿ ಯುವಕನ ಜೊತೆ ಪ್ರೀತಿಸಿ ಮದುವೆಯಾದರು. ಮದುವೆ ನಿಶ್ಚಯವಾದ ಮೇಲೆಯೇ ಕಾರ್ಯಕ್ರಮಕ್ಕೆ ಬಂದಿದ್ದರು.

  ಶ್ವೇತಾ ಪಂಡಿತ್

  ಶ್ವೇತಾ ಪಂಡಿತ್

  ಕನ್ನಡ ನಟಿ ಶ್ವೇತಾ ಪಂಡಿತ್ ಮೊದಲನೇ ಆವೃತ್ತಿಯ ಬಿಗ್ ಬಾಸ್ ಮನೆಯಲ್ಲಿ ಭಾಗವಹಿಸಿದ್ದರು. ಬರಿ ಸೆಲೆಬ್ರಿಟಿಗಳೇ ತುಂಬಿದ್ದ ಮೊದಲ ಸೀಸನ್‌ನಲ್ಲಿ 20 ದಿನಗಳ ಕಾಲ ಶ್ವೇತಾ ಇದ್ದರು. ಉರ್ವಿ, ಲೂಟಿ, ಎರಡಡೊಂದ್ಲಾ ಎರಡು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಬಳಿಕ ಶ್ವೇತಾ ಪಂಡಿತ್ ಕಾಣಿಸಿಕೊಂಡಿದ್ದು ಬಹಳ ಕಡಿಮೆ.

  English summary
  Here is the list of former bigg boss kannada contestants that nobody remembers now are Shweta Pandit, Reema das, Anand Malagitti, Neha Gowda and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X