»   » 'ಡ್ರಾಮಾ' ಸಿನಿಮಾದಲ್ಲಿ ಯೋಗಿ ಅಭಿನಯಿಸಬೇಕಿತ್ತು! ಆದ್ರೆ, ಅದಾಗಲಿಲ್ಲ!

'ಡ್ರಾಮಾ' ಸಿನಿಮಾದಲ್ಲಿ ಯೋಗಿ ಅಭಿನಯಿಸಬೇಕಿತ್ತು! ಆದ್ರೆ, ಅದಾಗಲಿಲ್ಲ!

Posted By:
Subscribe to Filmibeat Kannada

'ಡ್ರಾಮಾ'... 2012 ರಲ್ಲಿ ಬಿಡುಗಡೆ ಆದ ಸಿನಿಮಾ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಯಶ್, ರಾಧಿಕಾ ಪಂಡಿತ್, ಸತೀಶ್ ನೀನಾಸಂ, ಸಿಂಧು ಲೋಕನಾಥ್ ಮತ್ತು ಅಂಬರೀಶ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ 'ಡ್ರಾಮಾ' ಬಾಕ್ಸ್ ಆಫೀಸ್ ನಲ್ಲೂ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡ್ತು. ರಾಕಿಂಗ್ ಸ್ಟಾರ್ ಯಶ್ ವೃತ್ತಿ ಜೀವನದಲ್ಲಿ 'ಡ್ರಾಮಾ' ಮತ್ತೊಂದು ಯಶಸ್ಸಿನ ಮೆಟ್ಟಿಲಾಯ್ತು.

ಇಂತಿಪ್ಪ 'ಡ್ರಾಮಾ' ಸಿನಿಮಾದ ಸ್ಕ್ರಿಪ್ಟ್ ಮೊದಲು ಹೋಗಿದ್ದು ಲೂಸ್ ಮಾದ ಯೋಗಿ ಬಳಿ ಅನ್ನೋದು ನಿಮಗೆ ಗೊತ್ತಾ.?

ಮೌನವಾಗಿದ್ದ ಯಶ್-ಯೋಗಿಯ ಸ್ನೇಹ ಮತ್ತೆ ಮಾತಾಡಿದೆ.!

Lose Mada Yogesh was supposed to act in Kannada Movie Drama

ಹೌದು, 'ಡ್ರಾಮಾ' ಸ್ಕ್ರಿಪ್ಟ್ ರೆಡಿ ಆದ್ಮೇಲೆ, ಯೋಗರಾಜ್ ಭಟ್ ತಲೆಗೆ ಮೊದಲು ಹೊಳೆದ ಹೆಸರು 'ಲೂಸ್ ಮಾದ ಯೋಗಿ'. 'ಡ್ರಾಮಾ' ಸಿನಿಮಾದಲ್ಲಿ ನಟಿಸಲು ಯೋಗೀಶ್ ಬಳಿ ಭಟ್ರು ಕೇಳಿಕೊಂಡಿದ್ದರಂತೆ. ಆದ್ರೆ, ''ಡೇಟ್ಸ್ ಹೊಂದಾಣಿಕೆ ಆಗದ ಕಾರಣ 'ಡ್ರಾಮಾ' ತಂಡ ಸೇರಿಕೊಳ್ಳಲಿಲ್ಲ'' ಅಂತ ಯೋಗೀಶ್ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹೇಳಿದರು.

ಲೂಸ್ ಮಾದ ಯೋಗಿ ಅದಷ್ಟು ಬೇಗ ಅಪ್ಪ ಆಗಬೇಕಂತೆ

''ಡ್ರಾಮಾ' ಸಿನಿಮಾದ ಆಫರ್ ಬಂದಿತ್ತು. ನನ್ನ ಬಳಿ ಡೇಟ್ಸ್ ಇರಲಿಲ್ಲ. ಡೇಟ್ಸ್ ಅಡ್ಜಸ್ಟ್ ಮಾಡಬಹುದಾ, ಸ್ವಲ್ಪ ಮುಂದಕ್ಕೆ ಹೋಗಬಹುದಾ ಅಂತ ಯೋಗರಾಜ್ ಭಟ್ ಬಳಿ ಕೇಳಿದೆ. ಆದ್ರೆ ಅವರು ಆಗಲ್ಲ ಅಂದರು. ಅದರ ಬಗ್ಗೆ ಬೇಜಾರಿಲ್ಲ'' ಎಂದು ಲೂಸ್ ಮಾದ ಯೋಗೀಶ್ ಹೇಳಿದ್ದಾರೆ.

English summary
Lose Mada Yogesh was supposed to act in Kannada Movie Drama, directed by Yogaraj Bhat. But it din't happen because of date issues.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X