For Quick Alerts
  ALLOW NOTIFICATIONS  
  For Daily Alerts

  ಮನ, ಮನೆ ಎಲ್ಲ ಕಡೆ 'ಮಗಳು ಜಾನಕಿ' ಹಾಡಿನ ಇಂಪು

  By Naveen
  |

  ಸಿನಿಮಾ ಹಾಡುಗಳ ಮಧ್ಯೆ ಧಾರಾವಾಹಿ ಹಾಡುಗಳು ಕಳೆದು ಹೋಗುತ್ತವೆ. ಅದೇ ಕಾರಣಕ್ಕೊ ಏನೋ ಕೆಲವು ಧಾರಾವಾಹಿಗಳಲ್ಲಿ ಹಾಡುಗಳಿಗೆ ಅಷ್ಟೊಂದು ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಆದರೆ, ಈಗೀಗ ಧಾರಾವಾಹಿಗಳಲ್ಲಿಯೂ ತುಂಬ ಒಳ್ಳೆಯ ಶೀರ್ಷಿಕೆ ಗೀತೆಗಳು ಬರುತ್ತಿದೆ.

  ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಮೆಚ್ಚುಗೆ ಗಳಿಸಿರುವ ಹಾಡು 'ಮಗಳು ಜಾನಕಿ' ಹಾಡು. ಈ ಹಾಡಿನ ಇಂಪು ಮನೆ ಮನಕ್ಕೆ ತಂಪು ನೀಡಿದೆ. 'ಮಗಳು ಜಾನಕಿ' ಕಲರ್ಸ್ ಸೂಪರ್ ವಾಹಿನಿಯ ಹೊಸ ಧಾರಾವಾಹಿ ಆಗಿದ್ದು, ಅದರ ಹಾಡು ಈಗ ಸೂಪರ್ ಹಿಟ್ ಆಗಿದೆ.

  ನಿರ್ದೇಶಕ ಟಿ.ಎಸ್. ಸೀತಾರಾಮ್ ಈ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ತಮ್ಮ ಹಿಂದಿನ ಧಾರಾವಾಹಿಗಳಲ್ಲಿಯೂ ಒಳ್ಳೆಯ ಹಾಡುಗಳನ್ನೆ ಆಯ್ಕೆ ಮಾಡಿದ್ದ ಸೀತಾರಾಮ್ ಮತ್ತೊಮ್ಮೆ ಹಾಡಿನ ಮೂಲಕ ಭರವಸೆ ಮೂಡಿಸಿದ್ದಾರೆ. ಇಲ್ಲಿಯೂ 'ಮುಕ್ತ' ಕಾಂಬಿನೇಶನ್ ಮುಂದುವರೆದಿದ್ದು, ವಿಜಯ ಪ್ರಕಾಶ್ ಹಾಡಿಗೆ ಧ್ವನಿಯಾಗಿದ್ದಾರೆ.

  ಹಾಡಿಗೆ ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದಾರೆ. ಎಚ್.ಎಸ್.ವೆಂಕಟೇಶ್ ಮೂರ್ತಿ ಮತ್ತೊಂದು ಅದ್ಬುತ ಸಾಹಿತ್ಯ ಬರೆದಿದ್ದಾರೆ. ಈ ಸುಂದರ ಹಾಡು ಅದೆಷ್ಟೋ ಮನಸುಗಳಿಗೆ ಹತ್ತಿರ ಆಗಿದೆ. ಅಂದಹಾಗೆ, 'ಮಗಳು ಜಾನಕಿ' ಧಾರಾವಾಹಿ ಜುಲೈ 2 ರಿಂದ ಶುರು ಆಗಲಿದ್ದು, ಸೋಮವಾರ ದಿಂದ ಶುಕ್ರವಾರದ ವರೆಗೆ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ.

  English summary
  Colors Super channel new serial 'Magalu Jaanaki' song getting positive response. The serial is directing by T N Seetharam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X