For Quick Alerts
  ALLOW NOTIFICATIONS  
  For Daily Alerts

  ಕಡೆಗೂ ಚುನಾವಣೆಗೆ ಚಂದು ಬಾರ್ಗಿ ನಾಮಿನೇಷನ್ ಫೈಲ್ ಮಾಡಲೇ ಇಲ್ಲ.!

  By Harshitha
  |

  ಜಂಗಮದುರ್ಗದ ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ಮುಖ್ಯಮಂತ್ರಿಗಳು ಚಂದು ಬಾರ್ಗಿಗೆ ಟಿಕೆಟ್ ಕೊಟ್ಟಿದ್ದರು. ಗುರುವಾರ ಒಳ್ಳೆಯ ದಿನವಾದ್ದರಿಂದ, ಅಂದೇ ನಾಮಿನೇಷನ್ ಫೈಲ್ ಮಾಡಬೇಕು ಅಂತ ಚಂದು ಬಾರ್ಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು.

  ನಾಮಿನೇಷನ್ ಸಲ್ಲಿಸುವುದಕ್ಕೆ ಇನ್ನೊಂದು ದಿನ ಬಾಕಿ ಇತ್ತು. ಅಷ್ಟರಲ್ಲಿ ಜಂಗಮದುರ್ಗದಲ್ಲಿರುವ ತಮ್ಮ ಫ್ಯಾಕ್ಟರಿಯಲ್ಲಿ ಸತ್ತು ಬಿದ್ದಿದ್ದ ಧರಣೀಶ್ ಕೇಸ್ ಚಂದು ಬಾರ್ಗಿಗೆ ಉರುಳಾಗಿ ಪರಿಣಮಿಸಿತು.

  ಧರಣೀಶ್ ರದ್ದು ಸಹಜ ಸಾವಲ್ಲ, ಕೊಲೆ ಎಂಬ ಶಂಕೆ ಪೊಲೀಸರಿಗೆ. ಹೀಗಾಗಿ ಚಂದು ಬಾರ್ಗಿ ಅರೆಸ್ಟ್ ಆದರು. ಬಳಿಕ ಅವರಿಗೆ ಜಾಮೀನು ಕೂಡ ಮಂಜೂರಾಯ್ತು. ಆದ್ರೆ, ನಾಮಿನೇಷನ್ ಸಲ್ಲಿಸಲು ಸಾಧ್ಯವೇ ಆಗಲಿಲ್ಲ. ಮುಂದೆ ಓದಿರಿ...

  ಎಲ್ಲಾ ಗೃಹ ಮಂತ್ರಿಗಳ ಕಿತಾಪತಿ

  ಎಲ್ಲಾ ಗೃಹ ಮಂತ್ರಿಗಳ ಕಿತಾಪತಿ

  ಚಂದು ಬಾರ್ಗಿ ಕಂಡ್ರೆ ಗೃಹ ಮಂತ್ರಿಗಳಿಗೆ ಅಷ್ಟಕಷ್ಟೆ. ಆದ್ದರಿಂದ, ಜಂಗಮದುರ್ಗದ ಬೈ ಎಲೆಕ್ಷನ್ ನಲ್ಲಿ ಚಂದು ಬಾರ್ಗಿ ಸ್ಪರ್ಧಿಸಬಾರದು ಅಂತ ಧರಣೀಶ್ ಕೇಸ್ ನ ಚಂದು ಬಾರ್ಗಿ ಮೇಲೆ ಬರುವಂತೆ ಗೃಹ ಮಂತ್ರಿಗಳು ಪ್ಲಾನ್ ಮಾಡಿದರು.

  'ಮಗಳು ಜಾನಕಿ': ಮೊದಲ ಸಂಚಿಕೆಯಲ್ಲೇ ವೀಕ್ಷಕರನ್ನು ಕಟ್ಟಿಹಾಕಿ ಕೂರಿಸಿದ ಟಿ.ಎನ್.ಎಸ್'ಮಗಳು ಜಾನಕಿ': ಮೊದಲ ಸಂಚಿಕೆಯಲ್ಲೇ ವೀಕ್ಷಕರನ್ನು ಕಟ್ಟಿಹಾಕಿ ಕೂರಿಸಿದ ಟಿ.ಎನ್.ಎಸ್

  'ದಾಳ'ವಾದ ಸಿ.ಎಸ್.ಪಿ

  'ದಾಳ'ವಾದ ಸಿ.ಎಸ್.ಪಿ

  ಸಿ.ಎಸ್.ಪಿ ಗೆ ವಿಚ್ಛೇದನ ಕೊಟ್ಮೇಲೆ ರಶ್ಮಿ ಮದುವೆ ಆಗಿದ್ದು ಚಂದು ಬಾರ್ಗಿಯನ್ನ. ಇಪ್ಪತ್ತು ವರ್ಷಗಳ ಹಿಂದೆ, ಚಂದು ಬಾರ್ಗಿ ಒಮ್ಮೆ ಜೈಲಿಗೆ ಹೋಗಲು ಇದೇ ಸಿ.ಎಸ್.ಪಿ ಕಾರಣರಾಗಿದ್ದರಂತೆ. ಹೀಗಾಗಿ, ಧರಣೀಶ್ ಕೇಸ್ ನ ಮಧ್ಯಕ್ಕೆ ತಂದು ತಾವು ಬಚಾವ್ ಆಗಲು ಗೃಹ ಮಂತ್ರಿಗಳು ಸಿ.ಎಸ್.ಪಿ ರನ್ನ ದಾಳವಾಗಿ ಬಳಸಿಕೊಂಡಿದ್ದಾರೆ.

  ಸೂಪರ್ ಸ್ಪೀಡ್ ಆಗಿ ಸಾಗುತ್ತಿದೆ 'ಮಗಳು ಜಾನಕಿ' ಸೀರಿಯಲ್ ಕಥೆಸೂಪರ್ ಸ್ಪೀಡ್ ಆಗಿ ಸಾಗುತ್ತಿದೆ 'ಮಗಳು ಜಾನಕಿ' ಸೀರಿಯಲ್ ಕಥೆ

  ಇಪ್ಪತ್ತು ವರ್ಷಗಳ ದ್ವೇಷ ಹೊಗೆಯಾಡುತ್ತಿದೆ

  ಇಪ್ಪತ್ತು ವರ್ಷಗಳ ದ್ವೇಷ ಹೊಗೆಯಾಡುತ್ತಿದೆ

  ನಾಮಿನೇಷನ್ ಸಲ್ಲಿಸುವ ಹೊತ್ತಿನಲ್ಲಿ, ತಮಗೆ ಸಂಬಂಧ ಇಲ್ಲದ ಕೇಸ್ ನ ತಲೆಗೆ ಕಟ್ಟಿ ಒಂದು ದಿನ ಪೊಲೀಸರ ವಶದಲ್ಲಿ ಇರುವಂತೆ ಮಾಡಿದ ಸಿ.ಎಸ್.ಪಿ ಮೇಲೆ ಚಂದು ಬಾರ್ಗಿಗೆ ದ್ವೇಷದ ಬೆಂಕಿ ಹೊಗೆಯಾಡುತ್ತಿದೆ.

  ಅದು ಕೊಲೆ ಅಲ್ಲ.!

  ಅದು ಕೊಲೆ ಅಲ್ಲ.!

  ಧರಣೀಶ್ ರದ್ದು ಕೊಲೆ ಅಲ್ಲ ಅಂತ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದ ಕಾರಣ, ಚಂದು ಬಾರ್ಗಿಗೆ ಜಾಮೀನು ಸಿಕ್ಕಿದೆ. ಇನ್ನಾದರೂ ತಲೆ ಬಿಸಿ ಇಲ್ಲದೆ ನಾಮಿನೇಷನ್ ಸಲ್ಲಿಸಬಹುದು ಅಂತಿದ್ದ ಚಂದು ಬಾರ್ಗಿಗೆ ಸಿಎಂ ಸಾಹೇಬ್ರು ದೊಡ್ಡ ಶಾಕ್ ಕೊಟ್ಟಿದ್ದಾರೆ.

  ಹೈಕಮಾಂಡ್ ಪ್ರೆಶರ್

  ಹೈಕಮಾಂಡ್ ಪ್ರೆಶರ್

  ಧರಣೀಶ್ ಸಾವಿನ ಕೇಸ್ ನಲ್ಲಿ ಚಂದು ಬಾರ್ಗಿ ಹೆಸರು ಕೇಳಿ ಬಂದ ಕಾರಣ, ಕಳಂಕಿತರಿಗೆ ಟಿಕೆಟ್ ಕೊಡುವುದು ಬೇಡ ಅಂತ ಸಿಎಂ ಮೇಲೆ ಹೈಕಮಾಂಡ್ ಪ್ರೆಶರ್ ಹಾಕಿದೆ. ಹೀಗಾಗಿ, ''ಈ ಬಾರಿ ನೀವು ನಾಮಿನೇಷನ್ ಸಲ್ಲಿಸುವುದು ಬೇಡ. ಮುಂದಿನ ಬಾರಿ ನೋಡೋಣ'' ಅಂತ ಚಂದು ಬಾರ್ಗಿಗೆ ಮುಖ್ಯಮಂತ್ರಿಗಳು ಶಾಕ್ ಕೊಟ್ಟರು.

  ದೊಡ್ಡ ಆಘಾತ

  ದೊಡ್ಡ ಆಘಾತ

  ಚುನಾವಣೆಯಲ್ಲಿ ಗೆದ್ದು ಮಂತ್ರಿ ಆಗಬೇಕು ಎಂಬ ಕನಸು ಕಂಡಿದ್ದ ಚಂದು ಬಾರ್ಗಿಗೆ ದೊಡ್ಡ ಆಘಾತ ಎದುರಾಗಿದೆ. ಇದರ ಪರಿಣಾಮ ಏನೇನು ಆಗುತ್ತೋ, ನೋಡೋಣ...

  English summary
  TN Seetharam's 'Magalu Janaki' written update: Chandu Bargi din't file nomination.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X