twitter
    For Quick Alerts
    ALLOW NOTIFICATIONS  
    For Daily Alerts

    ಸೆ.10ರಿಂದ ಉದಯ ಟಿವಿಯಲ್ಲಿ ಮಹಾಭಾರತ

    By Rajendra
    |

    Mahabharata on Udaya TV
    ಕನ್ನಡದಲ್ಲಿ ರಾಮಾಯಣ, ಮಹಾಭಾರತದಂತಹ ಪೌರಾಣಿಕ ಧಾರಾವಾಹಿಗಳನ್ನು ನಿರ್ಮಿಸುವ ಸಾಹಸಕ್ಕೆ ಯಾರು ಕೈಹಾಕಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಮುಂಬೈ ಮೂಲದ ಸಿನಿವಿಸ್ತಾಸ್ ಕಂಪನಿ ಅಂತಹ ಒಂದು ಭಾರಿ ಸಾಹಸವನ್ನು ಮಾಡಿದೆ. ಇದೇ ಸಂಸ್ಥೆ ನಿರ್ಮಿಸಿರುವ 'ಸೀತಾ' ಧಾರಾವಾಹಿ ಈಗಾಗಲೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದು ಉದಯ ಟಿವಿಯಲ್ಲಿ 570 ಕಂತುಗಳನ್ನು ಪೂರೈಸಿ ಮುನ್ನಡೆದಿದೆ.

    ಈಗ ಈ ಸಂಸ್ಥೆ ನಿರ್ಮಿಸಿರುವ 'ಮಹಾಭಾರತ' ಧಾರಾವಾಹಿ ಇದೇ ಸೆಪ್ಟೆಂಬರ್ 10ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6ರಿಂದ 6.30ರವರೆಗೂ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಜನಪ್ರಿಯ ಗಾಯಕ ಶಂಕರ್ ಮಹದೇವನ್ ಅವರು ಹಾಡಿದ್ದು ವೀರ್ ಸಮರ್ಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

    ಸಿನಿವಿಸ್ತಾಸ್ ಸಂಸ್ಥೆಯ ಸುನಿಲ್ ಮೆಹ್ತಾ ಹಾಗೂ ಪ್ರೇಮ್ ಕಿಶನ್ ಈ ಧಾರಾವಾಹಿ ನಿರ್ಮಾಪಕರು. ನಿರ್ದೇಶನ ಕಿಶನ್ ಸೇಥಿ. ಸಾವಂತ್ ಹಾಗೂ ಶರವಣ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಜೆ.ಎಂ. ಪ್ರಹ್ಲಾದ್ ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದು, ರುದ್ರಮೂರ್ತಿ ಶಾಸ್ತ್ರಿ ಅವರು ಸಂಭಾಷಣೆಗಳನ್ನು ರಚಿಸಿದ್ದಾರೆ.

    ಅದ್ಭುತವಾದ ಅರಮನೆ, ಕೋಟೆ, ಯುದ್ಧ ಪ್ರಾಂಗಣ ಸೆಟ್ ಗಳನ್ನು ವಸಂತಕುಲಕರ್ಣಿ ಮಾಡಿಕೊಟ್ಟಿದ್ದಾರೆ. ಸಿನಿವಿಸ್ತಾಸ್ ಸಂಸ್ಥೆ ಹಲವಾರು ಮೆಗಾ ಧಾರಾವಾಹಿಗಳನ್ನು ನಿರ್ಮಿಸಿದ್ದು ಕಿರುತೆರೆ ಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದೆ. ಈಗ ಕನ್ನಡದಲ್ಲಿ ಇಂಥಹದ್ದೊಂದು ಪ್ರಯೋಗವನ್ನು ಮಾಡಿರುವುದು ನಿಜಕ್ಕೂ ಅಭಿನಂದನೀಯ.

    ಕೃಷ್ಣನಾಗಿ ವಲ್ಲಭ ವೈಎಸ್, ಭೀಷ್ಮ ಅನಂತವೇಲು, ಧೃತರಾಷ್ಟ್ರ ಜಯಕುಮಾರ್, ವಿಧುರ ಎಚ್ಎಂಟಿ ನಂದ, ದ್ರೋಣ ಚೇತನ್ ರಾಜ್, ಕೃಪಾಚಾರ್ಯ ಎಂ ಗುರುರಾಜ್, ಅಶ್ವತ್ಥಾಮ ಇಪಿ ಅಕ್ಷಯ್, ಕುಂತಿ ಅರ್ಚನಾ ಅನಂತವೇಲು...

    ಗಾಂಧಾರಿ ಸುಜಾತಾ ಕುರಹಟ್ಟಿ, ಯುಧಿಷ್ಟಿರ ರವಿ ಭಟ್, ಭೀಮ ಪ್ರವೀಣ್ ಕುಮಾರ್ ಡಿ, ಅರ್ಜುನ ಅಂಬರೀಶ್ ಸಾರಂಗ್, ನಕುಲ ಚಿರಾಗ್, ಸಹದೇವ ನಂದೀಶ್, ದುರ್ಯೋಧನ ಚೆಲುವರಾಜ್, ಕರ್ಣ ಪ್ರಕಾಶ್ ಕುಮಾರ್ ಸಿಎನ್, ದುಶ್ಯಾಸನ ರಾಜೇಶ್, ಶಕುನಿ ರಮೇಶ್ ಪಂಡಿತ್...

    ದುಪ್ರದ ಗಣೇಶ್ ರಾವ್, ಶಂತನು ಅಮಿತ್ ಭಾರ್ಗವ್, ಯುವ ಭೀಷ್ಮ ಲೋಕೇಶ್, ಗಂಗಾ ರಶ್ಮಿ, ಸತ್ಯವತಿ ಮಾನ್ಸಿ, ಅಂಬೆ ನಿಶಿತಾ ಗೌಡ, ಅಂಬಿಕೆ ಅರ್ಚನಾ ಗಾಯಕ್ವಾಡ್, ಅಂಬಾಲಿಕೆ ಮಾಧವಿ. (ಒನ್ ಇಂಡಿಯಾ ಕನ್ನಡ)

    English summary
    The biggest follow up of Sri Ramayana by the Mahabharata in Indian television history, in Kannada the ‘Mahabharata’ is hitting the audiences of Udaya TV from 10th of September 2012. The title song was sung by Mahendra Kapoor and now Shanker Mahadevan has lent the title track for Veera Samarth music direction. Cinevistaas's Sunil Mehta and Prem Kishen are the producers.
    Friday, September 7, 2012, 18:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X