»   » ಉತ್ತರ ಕರ್ನಾಟಕದ ಸೊಗಡಿನ ಹೊಸ ಧಾರಾವಾಹಿ ನಿಮ್ಮ 'ಉದಯ'ದಲ್ಲಿ

ಉತ್ತರ ಕರ್ನಾಟಕದ ಸೊಗಡಿನ ಹೊಸ ಧಾರಾವಾಹಿ ನಿಮ್ಮ 'ಉದಯ'ದಲ್ಲಿ

Posted By:
Subscribe to Filmibeat Kannada

ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿರುವ ಜನಪ್ರಿಯ ಕನ್ನಡ ವಾಹಿನಿ ಉದಯ ಟಿವಿ ವಿಭಿನ್ನ ಶೈಲಿಯ ಧಾರಾವಾಹಿಗಳು ಹಾಗೂ ಕಾರ್ಯಕ್ರಮಗಳಿಂದ ಕರ್ನಾಟಕದ ಜನರಲ್ಲಿ ಮನೆ ಮಾತಾಗಿದೆ.

'ಮೀನಾಕ್ಷಿ ಮದುವೆ', 'ಅರಮನೆ' ಹಾಗೂ 'ಸುಂದರಿ'ಯಿಂದ ಹಿಡಿದು ಎಲ್ಲಾ ಅಪ್ಪಟ ಸ್ವಮೇಕ್ ಧಾರಾವಾಹಿಗಳನ್ನು ವೀಕ್ಷಕರಿಗೆ ನೀಡಿರುವ ಉದಯ ಟಿವಿ ವಾಹಿನಿ ಇದೀಗ 'ಮಹಾಸತಿ' ಎಂಬ ಮತ್ತೊಂದು ಕೌಟುಂಬಿಕ ಪ್ರೇಮ ಕಥನವನ್ನು ವೀಕ್ಷಕರಿಗೆ ಉಣಬಡಿಸಲು ಸಜ್ಜಾಗಿದೆ.[ನಿಮ್ಮ 'ಉದಯ ಟಿವಿ'ಯಲ್ಲಿ ಎರಡು ಹೊಚ್ಚ ಹೊಸ ಧಾರಾವಾಹಿಗಳು!]

'Mahasati' new kannada serial in Uday TV

ಜೂನ್ 27 ರಿಂದ, ಸೋಮವಾರದಿಂದ, ಶುಕ್ರವಾರದವರೆಗೆ ಪ್ರತೀ ದಿನ ಸಂಜೆ 6 ಘಂಟೆಯಿಂದ ಟಿವಿ ವೀಕ್ಷಕರನ್ನು 'ಮಹಾಸತಿ' ರಂಜಿಸಲಿದ್ದಾಳೆ. ಬಿಗ್ ಬಾಸ್ ಖ್ಯಾತಿಯ ನಟಿ ಶ್ರುತಿ ಅವರು ಧಾರಾವಾಹಿ ನಿರೂಪಣೆ ಮಾಡಲಿದ್ದಾರೆ.[ಕಿರುತೆರೆಯಲ್ಲಿ ವೀಕ್ಷಕರಿಗೆ ಮೋಡಿ ಮಾಡಲು ತಯಾರಾದ ನಟಿ ಶ್ರುತಿ]

ವಿಭಿನ್ನ ಸಂಪ್ರದಾಯಗಳನ್ನು ಹೊಂದಿದ ಉತ್ತರ ಕರ್ನಾಟಕದ 2 ಕುಟುಂಬಗಳ ಮಧ್ಯೆ ನಡೆಯುವ ಕಥಾನಕವನ್ನು 'ಮಹಾಸತಿ' ಸೀರಿಯಲ್ ಹೊಂದಿದೆ. ಅಂದಹಾಗೆ ಈ ಧಾರಾವಾಹಿಯ ವಿಶೇಷ ಏನಪ್ಪಾ ಅಂದ್ರೆ ಇದರಲ್ಲಿ ನಟಿಸಿರುವವರೆಲ್ಲಾ ಉತ್ತರ ಕರ್ನಾಟಕದವರೇ ಆಗಿದ್ದಾರೆ. ಮಾತ್ರವಲ್ಲದೇ ಇಡೀ ದಾರಾವಾಹಿಯನ್ನು ಉತ್ತರ ಕರ್ನಾಟಕದಲ್ಲೇ ಚಿತ್ರೀಕರಿಸಲಾಗುತ್ತಿದೆ.

ಸುನಿಲ್ ಪುರಾಣಿಕ್ ಹಾಗೂ ಎಸ್.ಎಂ.ಪಾಟೀಲ್ ಚಿತ್ರಕಥೆ ರಚಿಸಿದ್ದು ಅಭಿರುಚಿ ಚಂದ್ರು ಸಂಭಾಷಣೆ ಹೆಣೆದಿದ್ದಾರೆ. ಶೀರ್ಷಿಕೆ ಗೀತೆಗೆ ಯೋಗರಾಜ ಭಟ್ಟರು ಸಾಹಿತ್ಯ ರಚಿಸಿದ್ದು ಸಂಗೀತ ನಿರ್ದೇಶಕ ರಘುದೀಕ್ಷಿತ್ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ.[ಉದಯ ಟಿವಿಯಲ್ಲಿ ಹೊಸ ಸ್ವಮೇಕ್ ಧಾರಾವಾಹಿ 'ಮೀನಾಕ್ಷಿ ಮದುವೆ']

'Mahasati' new kannada serial in Uday TV

ಕಲಾವಿದರಾದ ಯಶವಂತ ಸರದೇಶ ಪಾಂಡೆ ಹಾಗೂ ಮಾಲತಿ ಸರದೇಶ ಪಾಂಡೆ ಕೂಡ ಇದರಲ್ಲಿ ನಟಿಸಿದ್ದಾರೆ. ಹುಬ್ಬಳ್ಳಿ ಹುಡುಗ ವಿನಯ ಹಾಗೂ ಗುಲ್ಬರ್ಗ ಮೂಲದ ಐಶ್ವರ್ಯ ನಾಯಕ-ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!]

ಮಾಲತಿ ಸರದೇಶಪಾಂಡೆ ಉತ್ತರ ಕರ್ನಾಟಕದವರೇ ಆಗಿದ್ದರೂ ಇಂತಹ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿರಲಿಲ್ಲ. 'ಈ ಬಾರಿ ನನ್ನ ಸ್ವಂತಭಾಷೆ ಮಾತಾಡುವ ಅವಕಾಶ ಸಿಕ್ಕಿದೆ. ವಾಡೆಯ ಸಂಪ್ರದಾಯಸ್ಥ ಹೆಣ್ಣು ಮಗಳಾಗಿ ನಾನು ಅಭಿನಯಿಸಿದ್ದೇನೆ ಎಂದು ಹೇಳಿದ್ದಾರೆ.

ರಘು ದೀಕ್ಷಿತ್ ಅವರು ಧಾರಾವಾಹಿಗೆ ಹಾಡಿರುವ ಹಾಡಿನ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ...

    English summary
    Family Entertainment Channel Udaya TV has come up with a New serial called 'Mahasati', which will telecast from June 27th, Monday to Friday 6 pm.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada