For Quick Alerts
  ALLOW NOTIFICATIONS  
  For Daily Alerts

  'ಮಜಾ ಟಾಕೀಸ್' ಬಿಡಲು ಮುಂದಾಗಿದ್ದ ಅಪರ್ಣಾ ಕಾಮಿಡಿ ಚಿತ್ರಗಳಿಂದಲೂ ದೂರ ದೂರ.!

  |

  ಸಾಹಸ ಸಿಂಹ ಡಾ.ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಆರತಿ, ಜೈಜಗದೀಶ್, ವಜ್ರಮುನಿ, ಪದ್ಮಾವಾಸಂತಿ ಸೇರಿದಂತೆ ಹಲವು ನಟ-ನಟಿಯರಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿಕೊಟ್ಟವರು ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್. ಇದೇ ಪುಟ್ಟಣ್ಣ ಕಣಗಾಲ್ ರವರ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ಪ್ರತಿಭಾವಂತೆ ಅಪರ್ಣಾ.

  1984 ರಲ್ಲಿ ತೆರೆಕಂಡ 'ಮಸಣದ ಹೂ' ಚಿತ್ರದಲ್ಲಿ ಅಭಿನಯಿಸಿದ ಅಪರ್ಣಾ, ಬಳಿಕ ಚಲನಚಿತ್ರಗಳಿಗಾಗಿ ಬಣ್ಣ ಹಚ್ಚಿದ್ದು ಅಪರೂಪ. ಆಲ್ ಇಂಡಿಯಾ ರೇಡಿಯೋ ಮತ್ತು ಎಫ್.ಎಂ.ರೇನ್ ಬೋದಲ್ಲಿ ರೇಡಿಯೋ ಜಾಕಿ ಆಗಿ ಕಾರ್ಯ ನಿರ್ವಹಿಸಿದ ಅಪರ್ಣಾ, ಡಿಡಿ ಚಂದನ ವಾಹಿನಿಯ ಹಲವು ಕಾರ್ಯಕ್ರಮಗಳಿಗೂ ನಿರೂಪಣೆ ಮಾಡಿದ್ದಾರೆ.

  'ಮೂಡಲ ಮನೆ', 'ಮುಕ್ತ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದರೂ, ಅಪರ್ಣಾಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು 'ಮಜಾ ಟಾಕೀಸ್' ಕಾರ್ಯಕ್ರಮ.! 'ಮಜಾ ಟಾಕೀಸ್'ನಲ್ಲಿ ಒನ್ ಅಂಡ್ ಒನ್ಲಿ ವರಲಕ್ಷ್ಮಿ ಆಗಿ ಎಲ್ಲರನ್ನೂ ನಕ್ಕು-ನಲಿಸುತ್ತಿದ್ದ ಅಪರ್ಣಾಗೆ ಕಾಮಿಡಿ ಚಿತ್ರಗಳಿಂದಲೂ ಅವಕಾಶಗಳು ಹುಡುಕಿಕೊಂಡು ಬಂದಿವೆ. ಆದ್ರೆ, ಅದೆಲ್ಲವನ್ನೂ ಅವರು ರಿಜೆಕ್ಟ್ ಮಾಡಿದ್ದಾರೆ. ಮುಂದೆ ಓದಿರಿ...

  ಬಿಲ್ಡಪ್ ರಾಣಿ ಒನ್ ಅಂಡ್ ಒನ್ಲಿ ವರಲಕ್ಷ್ಮಿ

  ಬಿಲ್ಡಪ್ ರಾಣಿ ಒನ್ ಅಂಡ್ ಒನ್ಲಿ ವರಲಕ್ಷ್ಮಿ

  ಬಾಯಿ ಬಿಟ್ಟರೆ ಸಾಕು.. ಬರಾಕ್ ಒಬಾಮಾ, ಸಲ್ಮಾನ್ ಖಾನ್, ಶಾರುಖ್ ಖಾನ್ ಅಂತ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಪುಂಗಿ ಊದುವ ಸ್ವೀಟ್ 16 ಕ್ಯಾರೆಕ್ಟರ್ ಹೆಸರು 'ಒನ್ ಅಂಡ್ ಒನ್ಲಿ ವರಲಕ್ಷ್ಮಿ'. ಈ ಪಾತ್ರಕ್ಕೆ ಜೀವ ತುಂಬಿ ವೀಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವವರು ನಟಿ ಅಪರ್ಣಾ.

  'ಮಜಾ ಟಾಕೀಸ್'ನಲ್ಲಿ ಎಲ್ಲರಿಗೂ 100 ವರ್ಷ: ವರಲಕ್ಷ್ಮಿ ಇನ್ನೂ ಹದಿಹರೆಯ.!'ಮಜಾ ಟಾಕೀಸ್'ನಲ್ಲಿ ಎಲ್ಲರಿಗೂ 100 ವರ್ಷ: ವರಲಕ್ಷ್ಮಿ ಇನ್ನೂ ಹದಿಹರೆಯ.!

  'ಮಜಾ ಟಾಕೀಸ್' ಬಿಡಲು ಮುಂದಾಗಿದ್ದ ಅಪರ್ಣಾ

  'ಮಜಾ ಟಾಕೀಸ್' ಬಿಡಲು ಮುಂದಾಗಿದ್ದ ಅಪರ್ಣಾ

  'ಮಜಾ ಟಾಕೀಸ್'ನಲ್ಲಿ ವರಲಕ್ಷ್ಮಿ ಆಗಿ ಕಾಣಿಸಿಕೊಂಡ ಮೇಲೆ ಅಪರ್ಣಾ ಟ್ರೋಲ್ ಆಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅಪರ್ಣಾ ಬಗ್ಗೆ ಕೆಲವರು ನೆಗೆಟಿವ್ ಕಾಮೆಂಟ್ ಹಾಕಿದ್ದರು. ಆಗ ಬೇಸರಗೊಂಡಿದ್ದ ಅಪರ್ಣಾ 'ಮಜಾ ಟಾಕೀಸ್' ಕಾರ್ಯಕ್ರಮವನ್ನು ಬಿಡಲು ಮುಂದಾಗಿದ್ದರು. ಬಳಿಕ ನೆಗೆಟಿವ್ ಗಿಂತ ಪಾಸಿಟಿವ್ ಟಾಕ್ ಹೆಚ್ಚಿದೆ ಅಂತ ಸೃಜನ್ ಲೋಕೇಶ್ ಮನವೊಲಿಸಿದ ಮೇಲೆ ಕಾರ್ಯಕ್ರಮದಲ್ಲಿ ಅಪರ್ಣಾ ಮುಂದುವರೆದರು.

  ನೆಗೆಟಿವ್ ಕಾಮೆಂಟ್ಸ್ ನೋಡಿ 'ಮಜಾ ಟಾಕೀಸ್' ಬಿಡಲು ಮುಂದಾಗಿದ್ದ ವರಲಕ್ಷ್ಮಿ!ನೆಗೆಟಿವ್ ಕಾಮೆಂಟ್ಸ್ ನೋಡಿ 'ಮಜಾ ಟಾಕೀಸ್' ಬಿಡಲು ಮುಂದಾಗಿದ್ದ ವರಲಕ್ಷ್ಮಿ!

  ಕಾಮಿಡಿ ಸಿನಿಮಾಗಳಿಂದಲೂ ದೂರ ದೂರ.!

  ಕಾಮಿಡಿ ಸಿನಿಮಾಗಳಿಂದಲೂ ದೂರ ದೂರ.!

  'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಕಾಮಿಡಿ ಕಿಕ್ ಕೊಡುವ ಅಪರ್ಣಾಗೆ ಚಿತ್ರರಂಗದಿಂದ ಅವಕಾಶಗಳು ಹುಡುಕಿಕೊಂಡು ಬಂದಿವೆ. ಕಾಮಿಡಿ ಸಿನಿಮಾಗಳಲ್ಲಿ ಅಭಿನಯಿಸುವ ಚಾನ್ಸ್ ಅಪರ್ಣಾಗೆ ಸಿಕ್ಕಿದೆ. ಆದ್ರೆ, ಅದನ್ನು ಅಪರ್ಣಾ ಒಪ್ಪಿಕೊಂಡಿಲ್ಲ. ಕಾಮಿಡಿ ಸಿನಿಮಾಗಳನ್ನು ಅಪರ್ಣಾ ರಿಜೆಕ್ಟ್ ಮಾಡಿದ್ದಾರೆ.

  ಕಾರಣ ಏನು.?

  ಕಾರಣ ಏನು.?

  ''ಜನರನ್ನು ನಗಿಸುವುದು ಸುಲಭ ಅಲ್ಲ. ಅದು ತುಂಬಾ ಕಷ್ಟದ ಕೆಲಸ. ನಾನು ಕಾಮಿಡಿಯನ್ ಅಲ್ಲ. ಆದ್ದರಿಂದ ನಾನು ಕಾಮಿಡಿ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ'' ಎನ್ನುತ್ತಾರೆ ಅಪರ್ಣಾ.

  ಸೀರಿಯಲ್ ನಲ್ಲಿ ಅಪರ್ಣಾ ಬಿಜಿ.!

  ಸೀರಿಯಲ್ ನಲ್ಲಿ ಅಪರ್ಣಾ ಬಿಜಿ.!

  ಸ್ಪಷ್ಟವಾಗಿ ಕನ್ನಡ ಮಾತನಾಡುವ ಅಪರ್ಣಾ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಇವಳು ಸುಜಾತ' ಸೀರಿಯಲ್ ನ ಮುಖ್ಯ ಭೂಮಿಯಲ್ಲಿದ್ದಾರೆ.

  English summary
  Maja Talkies fame Aparna has rejected Comedy Movie offers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X