For Quick Alerts
  ALLOW NOTIFICATIONS  
  For Daily Alerts

  ''ಮತ್ತೆ ನಿಮ್ಮ ಮುಂದೆ ಬಂದೇ ಬರುತ್ತೇವೆ'' ಎಂದ ನಟ ಸೃಜನ್ ಲೋಕೇಶ್

  By Naveen
  |

  'ಮಜಾ ಟಾಕೀಸ್' ಕಾರ್ಯಕ್ರಮ ಮುಗಿದಿದೆ. ಆದರೆ ಮುಂದೆ ಮತ್ತೆ ಆ ಕಾರ್ಯಕ್ರಮ ಬರುತ್ತದೆಯಾ.. ಇಲ್ವಾ..? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಜೊತೆಗೆ ಎಲ್ಲ ಕಾರ್ಯಕ್ರಮಗಳ ರೀತಿ 'ಮಜಾ ಟಾಕೀಸ್' ಮುಂದಿನ ಸೀಸಸ್ ಶುರು ಆಗುತ್ತದೆಯಾ ಎನ್ನುವ ಗೊಂದಲವೂ ಇದೆ.

  ಇಂತಹ ಗೊಂದಲಗಳಿಗೆ ಈಗ ಸೃಜನ್ ಲೋಕೇಶ್ ಉತ್ತರ ಕೊಟ್ಟಿದ್ದಾರೆ. 'ಮಜಾ ಟಾಕೀಸ್' ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಸೃಜನ್ ''ಮತ್ತೆ ನಿಮ್ಮ ಮುಂದೆ ಬಂದೇ ಬರುತ್ತೇವೆ'' ಎಂದು ಹೇಳಿದ್ದಾರೆ. ಸೃಜನ್ ಅವರ ಈ ಮಾತು ಮತ್ತೆ 'ಮಜಾ ಟಾಕೀಸ್' ಶುರುವಾಗುತ್ತದೆ ಎನ್ನುವ ಭರವಸೆಯನ್ನು ಹೆಚ್ಚಿಸಿದೆ. ಮುಂದೆ ಓದಿ...

  ಪ್ರೋಮೋ ಬಂದಿದೆ

  ಪ್ರೋಮೋ ಬಂದಿದೆ

  'ಮಜಾ ಟಾಕೀಸ್' ಗ್ರಾಂಡ್ ಫಿನಾಲೆ ಕಾರ್ಯಕ್ರಮದ ಪ್ರೋಮೋ ಇದೀಗ ಬಿಡುಗಡೆಯಾಗಿದೆ. ಪ್ರೋಮೋದಲ್ಲಿ ಸೃಜನ್ ಆಡಿರುವ ಮಾತುಗಳು 'ಮಜಾ ಟಾಕೀಸ್' ಮುಂದಿನ ಸೀಸನ್ ಬಗ್ಗೆ ಒಂದು ಸಣ್ಣ ಸುಳಿವು ನೀಡಿವಂತಿದೆ.

  'ಮತ್ತೆ ಬರುತ್ತೇವೆ'

  'ಮತ್ತೆ ಬರುತ್ತೇವೆ'

  ಕಾರ್ಯಕ್ರಮದಲ್ಲಿ ಸೃಜನ್ ''ಚಿಟ್ಟೆಯಾಗಿ ಮತ್ತೆ ನಿಮ್ಮ ಮುಂದೆ ಬೇರೆ ರೂಪದಲ್ಲಿ ಬಂದೇ ಬರುತ್ತೇವೆ. ತಲೆ ಬಾಗಿ ನಿಮಗೆ ವಂದನೆಗಳನ್ನು ಹೇಳುತ್ತಿದ್ದೇನೆ. ನಿಮ್ಮ ಆಶಿರ್ವಾದ, ನಿಮ್ಮ ಪ್ರೇಮ ಪ್ರೀತಿ, ನಿಮ್ಮ ಪ್ರೋತ್ಸಾಹ ಇದೇ ರೀತಿ ಇರಲಿ'' ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

  ಸೃಜನ್ ಮಾತಿನ ಅರ್ಧ ಏನು..?

  ಸೃಜನ್ ಮಾತಿನ ಅರ್ಧ ಏನು..?

  ''ಬೇರೆ ರೂಪದಲ್ಲಿ ಬಂದೇ ಬರುತ್ತೇವೆ'' ಎಂದಿರುವ ಸೃಜನ್ ಮತ್ತೆ 'ಮಜಾ ಟಾಕೀಸ್ ಸೀಸನ್ 2' ಅಥವಾ ಹೊಸ ಕಾರ್ಯಕ್ರಮ ಮೂಲಕ ಮತ್ತೆ ಹೊಸ ಜರ್ನಿ ಶುರು ಮಾಡಬಹುದು.

  ಪ್ರಸಾರವಾಗುವ ದಿನಾಂಕ

  ಪ್ರಸಾರವಾಗುವ ದಿನಾಂಕ

  'ಮಜಾ ಟಾಕೀಸ್' ಗ್ರಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಅಕ್ಟೋಬರ್ 21 ಮತ್ತು 22ಕ್ಕೆ ದಿನಾಂಕ ನಿಗದಿ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 8 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

  ಅದ್ದೂರಿ ಕಾರ್ಯಕ್ರಮ

  ಅದ್ದೂರಿ ಕಾರ್ಯಕ್ರಮ

  ಗ್ರಾಂಡ್ ಫಿನಾಲೆ ಕಾರ್ಯಕ್ರಮ ಸಖತ್ ಅದ್ದೂರಿಯಾಗಿ ಇದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆದಿದೆ.

  English summary
  Colours Kannada Channel's popular show 'Maja Talkies' grand finale episode will telecast on October 21th and 22nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X