»   » ನಗುವಿನ ಟಾಕೀಸ್ ಆಗಿದ್ದ 'ಮಜಾ ಟಾಕೀಸ್' ಮುಚ್ಚಿದ ಸೃಜನ್ ಲೋಕೇಶ್!

ನಗುವಿನ ಟಾಕೀಸ್ ಆಗಿದ್ದ 'ಮಜಾ ಟಾಕೀಸ್' ಮುಚ್ಚಿದ ಸೃಜನ್ ಲೋಕೇಶ್!

Posted By:
Subscribe to Filmibeat Kannada
ಮಜಾ ಟಾಕೀಸ್ ಅಭಿಮಾನಿಗಳಿಗೆ ಕಹಿ ಸುದ್ದಿ ! ಮಜಾ ಟಾಕೀಸ್ ಬರಿ ನೆನಪು ಮಾತ್ರ ಈ ವಿಡಿಯೋ ನೋಡಿ

'ಮಜಾ ಟಾಕೀಸ್' ಹೆಸರು ಕೇಳಿದ ಹಾಗೆ ಒಂದು ನಗು ಮೂಡುತ್ತದೆ. ಸತತ ಎರಡುವರೆ ವರ್ಷ ಕಿರುತೆರೆಯ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದ್ದ ಈ ಕಾರ್ಯಕ್ರಮ ಈಗ ಕೊನೆಯ ಹಂತಕ್ಕೆ ಬಂದಿದೆ.

'ಕಲರ್ಸ್ ಕನ್ನಡ' ವಾಹಿನಿಯ ಯಶಸ್ವಿ ಕಾರ್ಯಕ್ರಮವಾಗಿದ್ದ 'ಮಜಾ ಟಾಕೀಸ್' ಈಗ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದೆ. ಕನ್ನಡದ ಸ್ಟಾರ್ ನಟರಾದ ಶಿವಣ್ಣ, ಉಪೇಂದ್ರ, ದರ್ಶನ್, ಸುದೀಪ್, ಪುನೀತ್ ಸೇರಿದಂತೆ ಅನೇಕ ನಟರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಿನಿಮಾ ತಂಡದ ಪ್ರಮೋಷನ್ ಗಳಿಗೂ ಕೂಡ 'ಮಜಾ ಟಾಕೀಸ್' ಒಳ್ಳೆಯ ವೇದಿಕೆ ಆಗಿತ್ತು. ದೊಡ್ಡ ಜನಮನ್ನಣೆ ಪಡೆದಿದ್ದ ಈ ಕಾರ್ಯಕ್ರಮಕ್ಕೆ ಈಗ ತೆರೆ ಎಳೆಯುವ ಸಮಯ ಬಂದಿದೆ. ಮುಂದೆ ಓದಿ....

ಮುಗಿಯಿತು 'ಮಜಾ ಟಾಕೀಸ್'

ಕನ್ನಡ ಕಿರುತೆರೆಯ ಹೆಸರಾಂತ ಕಾರ್ಯಕ್ರಮ 'ಮಜಾ ಟಾಕೀಸ್'ಗೆ ಶುಭಂ ಬೋರ್ಡ್ ಸದ್ಯದಲ್ಲಿಯೇ ಬೀಳಲಿದೆ. ಇತ್ತೀಚಿಗೆ ಕಾರ್ಯಕ್ರಮದ ಕೊನೆಯ ಸಂಚಿಕೆಯ ಚಿತ್ರೀಕರಣ ನಡೆದಿದೆ.

ಧನ್ಯವಾದ ತಿಳಿಸಿದ ಸೃಜನ್

ನಟ ಸೃಜನ್ ಲೋಕೇಶ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ''ಮಜಾ ಟಾಕೀಸ್' ಕಾರ್ಯಕ್ರಮದ ದೊಡ್ಡ ಪ್ರಯಾಣ ಕೊನೆಯ ಹಂತಕ್ಕೆ ಬಂದಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ''ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಗ್ರ್ಯಾಂಡ್ ಫಿನಾಲೆ

'ಮಜಾ ಟಾಕೀಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಚಿತ್ರೀಕರಣ ಕಳೆದ ಶನಿವಾರ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದಿದೆ. ಆ ಸಂಚಿಕೆ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಸಾರವಾಗುವ ಸಾಧ್ಯತೆ ಇದೆ.

ಹುಟ್ಟುಹಬ್ಬದ ದಿನ ದೇಶವೇ ಮೆಚ್ಚುವ ಕೆಲಸ ಮಾಡಿದ್ರು ಸೃಜನ್ ಲೋಕೇಶ್!

ಸ್ಟಾರ್ ಹಂಗಮಾ

ಕನ್ನಡದ ದೊಡ್ಡ ದೊಡ್ಡ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್, ದರ್ಶನ್, ಸುದೀಪ್, ಜಗ್ಗೇಶ್, ಸೇರಿದಂತೆ ಅನೇಕ ನಟರು 'ಮಜಾ ಟಾಕೀಸ್'ಗೆ ಅತಿಥಿ ಆಗಿದ್ದರು.

ಯಾರಿದು? 'ಮಜಾ ಟಾಕೀಸ್'ನಲ್ಲಿ ಪ್ರತ್ಯಕ್ಷವಾದ ಜೂನಿಯರ್ ಟಾಕಿಂಗ್ ಸ್ಟಾರ್!

ಮಜಾ ಕುಟುಂಬ

ನಟ ಸೃಜನ್ ಲೋಕೇಶ್, ಇಂದ್ರಜಿತ್ ಲಂಕೇಶ್, ಮಂಡ್ಯ ರಮೇಶ್, ಅಪರ್ಣ, ಶ್ವೇತ ಚೆಂಗಪ್ಪ, ಕುರಿ ಪ್ರತಾಪ್, ಮಿಮಿಕ್ರಿ ದಯಾನಂದ್, ರೆಮೋ, ಪವನ್ ಸೇರಿದಂತೆ ಅನೇಕರು 'ಮಜಾ ಟಾಕೀಸ್' ಕುಟುಂಬದ ಸದಸ್ಯರಾಗಿದ್ದರು.

ಸತತ ಎರಡುವರೆ ವರ್ಷ

2015ರ ಫೆಬ್ರವರಿ 7 ರಂದು ಶುರು ಆಗಿದ್ದ 'ಮಜಾ ಟಾಕೀಸ್' ಸತತ ಎರಡುವರೆ ವರ್ಷ ವೀಕ್ಷಕರನ್ನು ನಗಿಸುವ ಕಾಯಕವನ್ನು ಮಾಡಿತ್ತು.

ನಟ ದರ್ಶನ್ ಬಗ್ಗೆ ಸೃಜನ್ ಲೋಕೇಶ್ 'ಸತ್ಯ'ವಾಗ್ಲೂ ಹೇಳಿದ ದೊಡ್ಡ ಮಾತಿದು.!

ಕಾರ್ಯಕ್ರಮದ ಬಗ್ಗೆ

'ಮಜಾ ಟಾಕೀಸ್' ಕಾರ್ಯಕ್ರಮ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತಿತ್ತು.

English summary
Colours Kannada Channel's popular show 'Maja Talkies grand finale episode will telecast soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada