»   » ಸೃಜಾ ಕೊಟ್ಟ ಮಜಾ ಸುದ್ದಿ; 'ಮಜಾ ಟಾಕೀಸ್'ಗೆ ಮತ್ತೆ ಚಾಲನೆ.!

ಸೃಜಾ ಕೊಟ್ಟ ಮಜಾ ಸುದ್ದಿ; 'ಮಜಾ ಟಾಕೀಸ್'ಗೆ ಮತ್ತೆ ಚಾಲನೆ.!

Posted By:
Subscribe to Filmibeat Kannada

ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಜನಪ್ರಿಯ ಟಾಕಿಂಗ್ ಶೋ 'ಮಜಾ ಟಾಕೀಸ್' ಅಂತ್ಯವಾಗಿತ್ತು. ಇದರ ಬೆನ್ನಲ್ಲೆ 'ಕಾಮಿಡಿ ಟಾಕೀಸ್' ಎಂಬ ಹೊಸ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಆದ್ರೆ, ಸೃಜಾ ಅವರ 'ಮಜಾ ಟಾಕೀಸ್'ನಷ್ಟೂ ಮಜಾ ಇಲ್ಲದ ಈ ಕಾರ್ಯಕ್ರಮಕ್ಕೆ ಹೇಳಿಕೊಳ್ಳುವ ಯಶಸ್ಸು ಸಿಗುತ್ತಿಲ್ಲ.

ಹೀಗಿರುವಾಗ, 'ಮಜಾ ಟಾಕೀಸ್'ನ ಇಷ್ಟ ಪಡುವ ಅಭಿಮಾನಿಗಳಿಗೆ ಖುಷಿ ಸಂಗತಿ ಸಿಕ್ಕಿದೆ. ಹೌದು, ಸೃಜನ್ ಲೋಕೇಶ್ ಅವರ ಮಜಾ ಕಾರ್ಯಕ್ರಮ ಮಿಸ್ ಮಾಡಿಕೊಳ್ಳುತ್ತಿದ್ದ ವಿದೇಶಿ ಕನ್ನಡಿಗರಿಗೆ ಈಗೊಂದು ಸಿಹಿ ಸುದ್ದಿ ಸಿಕ್ಕಿದೆ.

ಅದೇನಪ್ಪಾ ಅಂದ್ರೆ ಸೃಜನ್ ಮತ್ತೆ 'ಮಜಾ ಟಾಕೀಸ್' ನಿರೂಪಣೆ ಮಾಡಿಕೊಡುತ್ತಿದ್ದಾರೆ. ಆದ್ರೆ, ಇದು ಕಲರ್ಸ್ ಕನ್ನಡದಲ್ಲಲ್ಲ. ಹಾಗಿದ್ರೆ, ಮತ್ತೆಲ್ಲಿ? ಮುಂದೆ ಓದಿ......

ನವೆಂಬರ್ 10 ರಂದು 'ಮಜಾ ಶೋ'

ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿಂತಿರುವ 'ಮಜಾ ಟಾಕೀಸ್' ಕಾರ್ಯಕ್ರಮ ಈಗ ಆಸ್ಟ್ರೇಲಿಯಾದಲ್ಲಿ ನೆರವೇರುತ್ತಿದೆ. ನವೆಂಬರ್ 10 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸೃಜನ್ ಲೋಕೇಶ್ 'ಮಜಾ ಟಾಕೀಸ್' ಕಾರ್ಯಕ್ರಮ ನಿರೂಪಣೆ ಮಾಡ್ತಿದ್ದಾರೆ.

ಸೃಜನ್ ಲೋಕೇಶ್ ರನ್ನ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್.!

'ಮಜಾ ಟಾಕೀಸ್' ತಂಡ ಭಾಗಿ

ನವೆಂಬರ್ 10 ರಂದು ಮಾತ್ರವಲ್ಲದೇ ನವೆಂಬರ್ 12 ರಂದು ಕೂಡ ಆಸ್ಟ್ರೇಲಿಯಾದ ಪರ್ತ್ ನಲ್ಲಿ 'ಮಜಾ ಟಾಕೀಸ್' ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮಜಾ ಟಾಕೀಸ್ ನ ಪೂರ್ತಿ ತಂಡ ಭಾಗವಹಿಸುತ್ತಿದೆ. ಈಗಾಗಲೇ ಸೃಜನ್ ಸಾರಥ್ಯದ ತಂಡ ಆಸ್ಟ್ರೇಲಿಯಾಗೆ ತಲುಪಿದೆ.

'ಮಜಾ ಟಾಕೀಸ್' ಮುಚ್ಚಿದ ನಂತರ ಸೃಜನ್ ಮುಂದಿನ ಪ್ಲಾನ್ ಏನು?

ಕಳೆದ ವಾರವೂ ಕಾರ್ಯಕ್ರಮವಿತ್ತು

ಈ ವಾರ ಮಾತ್ರವಲ್ಲದೇ ಕಳೆದ ವಾರವೂ ಆಸ್ಟ್ರೇಲಿಯಾದಲ್ಲಿ 'ಮಜಾ ಟಾಕೀಸ್' ಕಾರ್ಯಕ್ರಮ ನಡೆದಿತ್ತು. ನವೆಂಬರ್ 4 ಮತ್ತು ನವೆಂಬರ್ 5 ರಂದು ಶೋ ಏರ್ಪಡಿಸಲಾಗಿತ್ತು.

ಕನ್ನಡಿಗರಿಗಾಗಿ ಕಾರ್ಯಕ್ರಮ

ಕೇವಲ ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶದಲ್ಲಿರುವ ಕನ್ನಡಿಗರು 'ಮಜಾ ಟಾಕೀಸ್' ಕಾರ್ಯಕ್ರಮದ ಶೋ ಮಾಡುವಂತೆ ಬೇಡಿಕೆ ಇಡುತ್ತಿದ್ದಾರೆ. ಸದ್ಯ, ಆಸ್ಟ್ರೇಲಿಯಾದಲ್ಲಿ ಶೋ ನೀಡುತ್ತಿದ್ದಾರೆ ಸೃಜಾ. ಮುಂದಿನ ದಿನಗಳಲ್ಲಿ ಮತ್ತಷ್ಟು ದೇಶಗಳಲ್ಲಿ ಈ ಕಾರ್ಯಕ್ರಮ ನಡೆಯುವ ನಿರೀಕ್ಷೆ ಇದೆ.

ನಗುವಿನ ಟಾಕೀಸ್ ಆಗಿದ್ದ 'ಮಜಾ ಟಾಕೀಸ್' ಮುಚ್ಚಿದ ಸೃಜನ್ ಲೋಕೇಶ್!

English summary
Kannada Actor Srujan Lokesh Directional Maja talkies Show starts in australia on November 10.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X