'ಮಜಾಭಾರತ'ಕ್ಕೆ ಬಂದ್ರು ಹೊಸ ಆಂಕರ್, ನಿಮಗೆಲ್ಲಾ ಪರಿಚಯದವರೇ.!

ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರ್ತಿದ್ದ ಜನಪ್ರಿಯ ಕಾರ್ಯಕ್ರಮ 'ಮಜಾಭಾರತ' ಶೋ ಮತ್ತೆ ಬರ್ತಿದೆ. ಈಗಾಗಲೇ ಎರಡು ಆವೃತ್ತಿ ಮುಗಿಸಿರುವ ಕಾಮಿಡಿ ಕಾರ್ಯಕ್ರಮ ಈಗ ಮೂರನೇ ಆವೃತ್ತಿ ಆರಂಭಿಸಿದೆ.

ಹೊಸ ಆವೃತ್ತಿಯಲ್ಲಿ ಹೊಸ ಸರ್ಪ್ರೈಸ್ ಗಳನ್ನ ಹೊತ್ತು ತರುತ್ತಿದೆ ಮಜಾಭಾರತ. ಹೌದು, ಮೊದಲನೇ ಸರ್ಪ್ರೈಸ್ ಎಂಬಂತೆ ಕಾರ್ಯಕ್ರಮದ ನಿರೂಪಕರೇ ಬದಲಾಗಿದ್ದಾರೆ.

ಮೊದಲೆರಡು ಆವೃತ್ತಿಯನ್ನ ನಿರೂಪಣೆ ಮಾಡಿದ್ದ ನಿರಂಜನ್ ದೇಶಪಾಂಡೆ ಈ ಶೋನಿಂದ ಹೊರಗುಳಿದಿದ್ದಾರೆ. ಅವರ ಜಾಗಕ್ಕೆ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಎಂಟ್ರಿಯಾಗಿದ್ದಾರೆ. ಕನ್ನಡ ಕೋಗಿಲೆ ಶೋ ಮೂಲಕ ಸ್ಟಾರ್ ಅಂಕರ್ ಆದ ಅನುಪಮಾ ಗೌಡ ಈಗ ಮಜಾಭಾರತದ ಸಾರಥಿಯಾಗಿದ್ದಾರೆ.

Majaa Bharatha anchor change

ಇನ್ನು ಎರಡನೇ ಸೀಸನ್ ನಲ್ಲಿ ತೀರ್ಪುಗಾರರಾಗಿದ್ದ ರಚಿತಾ ರಾಮ್ ಮತ್ತು ಗುರುಕಿರಣ್ ಮೂರನೇ ಆವೃತ್ತಿಯಲ್ಲೂ ಮುಂದುವರಿದಿದ್ದಾರೆ.

ಅದಕ್ಕೂ ಮೊದಲು, ಒಂದನೇ ಆವೃತ್ತಿಲ್ಲಿ ಶೀತಲ್ ಶೆಟ್ಟಿ ಮತ್ತು ನಿರಂಜನ್ ದೇಶಪಾಂಡೆ ಮಜಾಭಾರತ ನಿರೂಪಣೆ ಮಾಡಿದ್ದರು. ಹಿರಿಯ ನಟಿ ಶ್ರುತಿ, ನಿರ್ದೇಶಕ ಎಸ್ ನಾರಾಯಣ್ ತೀರ್ಪುಗಾರರಾಗಿದ್ದರು.

Majaa Bharatha anchor change

ಇನ್ನುಳಿದಂತೆ ವಾರದಲ್ಲಿ ಐದು ದಿನ ಮಜಾಭಾರತ ಪ್ರಸಾರವಾಗುತ್ತಿದ್ದು, ಹೊಸ ಹೊಸ ಸ್ಪರ್ಧಿಗಳೊಂದಿಗೆ ವಾಪಸ್ ಆಗಿದೆ. ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 8 ಗಂಟೆಗೆ ಮಜಾಭಾರತ ಟೆಲಿಕಾಸ್ಟ್ ಆಗಲಿದೆ.

More from Filmibeat

English summary
Colors super popular show Majaa Bharatha season 3 will starts from january 21st at 8 pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X