»   » ಕಿರುತೆರೆಯಲ್ಲಿ ಡ್ಯುಯೆಟ್ ಹಾಡಿದ 'ರಾಮಾಚಾರಿ' ಜೋಡಿ

ಕಿರುತೆರೆಯಲ್ಲಿ ಡ್ಯುಯೆಟ್ ಹಾಡಿದ 'ರಾಮಾಚಾರಿ' ಜೋಡಿ

Posted By:
Subscribe to Filmibeat Kannada
ಕಿರುತೆರೆಯಲ್ಲಿ ಡ್ಯುಯೆಟ್ ಹಾಡಿದ 'ರಾಮಾಚಾರಿ' ಜೋಡಿ | Filmibeat Kannada

'ರಾಮಾಚಾರಿ'... 1991 ರಲ್ಲಿ ತೆರೆಕಂಡ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾ. ರಾಮಾಚಾರಿ ಆಗಿ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಹಾಗೂ ನಂದಿನಿ ಆಗಿ ಮಾಲಾಶ್ರೀ ಅಭಿನಯದ ಈ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿತ್ತು.

'ಶಾಂತಿ ಕ್ರಾಂತಿ' ಫ್ಲಾಪ್ ಆದ ಬಳಿಕ ಸಂಕಷ್ಟದಲ್ಲಿದ್ದ ವಿ.ರವಿಚಂದ್ರನ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿದ್ದು ಇದೇ 'ರಾಮಾಚಾರಿ' ಸಿನಿಮಾ.

ಇಪ್ಪತ್ತಾರು ವರ್ಷಗಳ ಹಿಂದಿನ 'ರಾಮಾಚಾರಿ' ಚಿತ್ರವನ್ನ ನಾವೀಗ ನೆನಪು ಮಾಡಿಕೊಳ್ಳಲು ಕಾರಣ ಉದಯ ವಾಹಿನಿಯ 'ಉದಯ ಸಿಂಗರ್ ಜ್ಯೂನಿಯರ್ಸ್' ಕಾರ್ಯಕ್ರಮ. ಮುಂದೆ ಓದಿರಿ...

ಕಿರುತೆರೆ ಮೇಲೆ 'ರಾಮಾಚಾರಿ' ಜೋಡಿ

'ರಾಮಾಚಾರಿ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದ ರವಿಚಂದ್ರನ್ ಹಾಗೂ ಮಾಲಾಶ್ರೀ ಇದೀಗ 'ಉದಯ ಸಿಂಗರ್ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ 'ಯಾರಿವಳು ಯಾರಿವಳು...' ಹಾಡಿಗೆ ಹೆಜ್ಜೆ ಹಾಕಿದ್ದಾರೆ.

'ಅಪ್ಪಾ.. ಐ ಲವ್ ಯು ಪಾ' ಹಾಡಿಗೆ ಭಾವುಕರಾದ ಕ್ರೇಜಿ ಸ್ಟಾರ್ ರವಿಚಂದ್ರನ್

ಯಾರಿವಳು... ಯಾರಿವಳು...

ಈ ವಾರದ 'ಉದಯ ಸಿಂಗರ್ ಜ್ಯೂನಿಯರ್ಸ್'ನಲ್ಲಿ ‘ಯಾರಿವಳು ಯಾರಿವಳು..' ಹಾಡಿನಿಂದ ಎಲ್ಲರಿಗೂ 'ರಾಮಾಚಾರಿ' ಚಿತ್ರ ನೆನಪಾಗುತ್ತದೆ. 'ರಾಮಾಚಾರಿ' ಚಿತ್ರದ ಅದೇ ಹಾಡಿಗೆ ರವಿಚಂದ್ರನ್ ಮತ್ತು ಮಾಲಾಶ್ರೀ ಸ್ಟೆಪ್ ಹಾಕಿ ವೀಕ್ಷಕರನ್ನು ರಂಜಿಸಿದ್ದಾರೆ.

ಗಾಯನದ ರಿಯಾಲಿಟಿ ಶೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ತೀರ್ಪುಗಾರರು.!

ರವಿಚಂದ್ರನ್ ಬಗ್ಗೆ ಮಾಲಾಶ್ರೀ ಮಾತು

''ಶೂಟಿಂಗ್ ನಡೆಯುತ್ತಿದ್ದಾಗ ಏನ್ ಆಗ್ತಿದೆ.. ಯಾಕ್ ಇಷ್ಟೆಲ್ಲಾ ಶಾಟ್ ತಗೊಳ್ತಾ ಇದ್ದಾರೆ ಅಂತ ಒಂದೂ ಗೊತ್ತಾಗ್ತಾ ಇರಲಿಲ್ಲ. ಯಾವತ್ತೂ ಹಾಡು ಪೂರ್ತಿಯಾಗಿ ತೆರೆಯ ಮೇಲೆ ಬಂತೋ, ರವಿಚಂದ್ರನ್ ಎನ್ನುವ ಅಗಾಧ ಶಕ್ತಿಯ ಅರಿವು ನನಗಾಯ್ತು'' - ಹೀಗೆಂದವರು ಕನ್ನಡದ ಖ್ಯಾತ ನಟಿ, ಕನಸಿನ ರಾಣಿ ಮಾಲಾಶ್ರೀ.

ಹಳೇ ನೆನಪುಗಳಿಗೆ ಜಾರಿದ ಮಾಲಾಶ್ರೀ

'ಉದಯ ಸಿಂಗರ್ ಜ್ಯೂನಿಯರ್ಸ್' ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಲಾಶ್ರೀ, ರವಿಚಂದ್ರನ್ ಜೊತೆಗಿನ ಆವತ್ತಿನ ದಿನಗಳನ್ನು ನೆನಪಿಸಿಕೊಂಡರು. ''ಒಂದು ಹಾಡಿಗಾಗಿ ರವಿಚಂದ್ರನ್ ಅವರು ಇಷ್ಟು ಶ್ರಮ ಹಾಕುತ್ತಾರೆ. ಅವರ ಯಶಸ್ಸಿನ ಗುಟ್ಟು ಇದೇ ಆಗಿದೆ. ಅವರಿಂದ ನಾನು ಕಲಿತದ್ದು ತುಂಬಾ ಇದೆ'' ಎಂದು ಮಾಲಾಶ್ರೀ ಹೇಳಿದರು. ರವಿಚಂದ್ರನ್ ಕೂಡಾ ಮಾಲಾಶ್ರಿಯವರ ಬಗ್ಗೆ ಮಾತನಾಡಿ ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು.

ಪ್ರಸಾರ ಯಾವಾಗ.?

ಮಾಲಾಶ್ರೀ ಮತ್ತು ರವಿಚಂದ್ರನ್ ವಿಶೇಷ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯ "ಉದಯ ಸಿಂಗರ್ ಜೂನಿಯರ್ಸ್" ನಲ್ಲಿ ಪ್ರಸಾರವಾಗಲಿದೆ.

English summary
Malashree as special guest in Udaya Singer Juniors reality show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada