For Quick Alerts
  ALLOW NOTIFICATIONS  
  For Daily Alerts

  ಕೋಟ್ಯಾಧಿಪತಿ ಹಾಟ್ ಸೀಟಲ್ಲಿ ಕನಸಿನ ರಾಣಿ ಮಾಲಾಶ್ರೀ!

  By Rajendra
  |

  "ಪ್ರಶ್ನೆ ಸುಲಭ ಇರುತ್ತಾ? ನಿಜ್ವಾಗ್ಲೂ ಟಫ್ ಇರಲ್ವಾ? ಎಷ್ಟ್ ಗೆಲ್ತೀನೋ ಏನೋ ಅಂತಾ ಭಯಾ ಆಗ್ತಾ ಇದೆ. ಯಾವ್ದಕ್ಕೂ ಅಪ್ಪೂ ಜೊತೆ ಒಂದ್ ಸಾರಿ ಮಾತಾಡ್ಕೊಂಡ್ಬುಡ್ಳಾ? ಈ ಹಾಟ್ ಸೀಟ್ ಗುರುಗಳು ನಮ್ ಮೇಲೆ ಕರುಣೆ ತೋರಸ್ತಾರಾ? ಯಾಕೋ ತುಂಬಾ ಭಯಾ ಆಗ್ತಿದೇರೀ"...

  ಈ ರೀತಿ ಹಾಟ್ ಸೀಟ್ ಏರುವ ಕೊನೇ ಕ್ಷಣಗಳವರೆಗೂ ಅವರು ಪ್ರಶ್ನೆ ಮಾಡುತ್ತಲೇ ಇದ್ದರು. ಅವರು ಅಂದು ಅಲ್ಲಿಗೆ ನಟಿ ಮಾಲಾಶ್ರೀಯಾಗಿ ಬಂದಿರಲಿಲ್ಲ. ಬದಲಾಗಿ, ಒಬ್ಬ ಸರಳ ಸ್ಪರ್ಧಿಯಾಗಿ ಬಂದಿದ್ದರು. ಪ್ರಶ್ನೆಗೆ ಉತ್ತರಿಸುವ ತವಕದಲ್ಲಿ ಬಂದಿದ್ದರು. ಕೋಟಿ ಗೆಲ್ಲುವ ಕನಸುಹೊತ್ತು ಬಂದಿದ್ದರು ಕನ್ನಡಿಗರ ಕನಸಿನ ರಾಣಿ ಮಾಲಾಶ್ರೀ!

  ಹಾಟ್ ಸೀಟ್ ಎಂದರೇ ಹಾಗೆ. ಅಲ್ಲಿ ಕೂರುವ ಮುನ್ನ ಮುನ್ನೂರು ಬಾರಿ ಯೋಚಿಸಬೇಕೆನಿಸುತ್ತದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುಂಖಾನು ಪುಂಖವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಎಂಥವರಿಗೂ ಕುರ್ಚಿ ನಡುಗಿದಂತೇ ಭಾಸವಾಗುತ್ತದೆ. ಅದೇ ಕನವರಿಕೆ, ಕಾತರಿಕೆ, ಭಯ, ಆತಂಕ ಎಲ್ಲವೂ ಮಾಲಾಶ್ರೀ ಅವರನ್ನೂ ಕಾಡತೊಡಗಿದ್ದು ಸುಳ್ಳಲ್ಲ.

  ಸೀರೆಯಲ್ಲಿ ಮಿಂಚಲಿರುವ ಮಾಲಾಶ್ರೀ

  ಸೀರೆಯಲ್ಲಿ ಮಿಂಚಲಿರುವ ಮಾಲಾಶ್ರೀ

  ಮಾಲಾಶ್ರೀ ಪಕ್ಕಾ ದೇಸೀ ಹೆಣ್ಣುಮಗಳಂತೆ ಹಬ್ಬದ ಉಡುಗೆ ತೊಟ್ಟು ಬಂದಿದ್ದರು. ಸೀರೆಯಲ್ಲಿ ಮಿಂಚುತ್ತಿದ್ದರು. ಪ್ರತಿನಿತ್ಯ ಮನೆಯಲ್ಲಿ ಕೂತು ನೋಡುತ್ತಿದ್ದ 'ಕನ್ನಡದ ಕೋಟ್ಯಾಧಿಪತಿ'ಯಲ್ಲಿ ತಾನೇ ಬಂದು ಕೂತಾಗ ಏನೆಲ್ಲಾ ಕೌತುಕ ಮನೆಮಾಡಬಹುದೋ ಅವೆಲ್ಲವೂ ಮಾಲಾಶ್ರೀ ಅವರಲ್ಲಿ ಮನೆಮಾಡಿತ್ತು.

  ಜಟಕಾ ಕುದುರೇ ಹತ್ತೀ ಪ್ಯಾಟೀಗ್ ಹೋಗಮ್ಮಾ

  ಜಟಕಾ ಕುದುರೇ ಹತ್ತೀ ಪ್ಯಾಟೀಗ್ ಹೋಗಮ್ಮಾ

  ಯುಗಾದಿ ಹಬ್ಬದಂದು (ಏಪ್ರಿಲ್ 11) ಪ್ರಸಾರವಾಗಲಿರುವ 'ಕನ್ನಡದ ಕೋಟ್ಯಾಧಿಪತಿ'ಯಲ್ಲಿ ಕನಸಿನ ರಾಣಿ ಮಾಲಾಶ್ರೀ ಪುನೀತ್ ಮುಂದೆ ಕೂತು ಕೋಟಿ ಆಟ ಆಡಲಿದ್ದಾರೆ. ಜೊತೆಗೆ 'ಗಜಪತಿ ಗರ್ವಭಂಗ' ಚಿತ್ರದಲ್ಲಿನ "ಜಟಕಾ ಕುದುರೇ ಹತ್ತೀ ಪ್ಯಾಟೀಗ್ ಹೋಗಮ್ಮಾ..." ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಅಂತೆಯೇ ತಮ್ಮ ಬಗ್ಗೆ, ತಾವು ಆಡಿಬೆಳೆದ ತಂಗಿಯ ಜೊತೆ, ಗೆಳತಿಯರ ಜೊತೆ ಒಂದಷ್ಟು ಕುತೂಹಲಕಾರೀ, ಸ್ವಾರಸ್ಯಕಾರೀ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

  ರಾತ್ರಿ 12ರ ನಂತರವೇ ಮಾಲಾಶ್ರೀ ಫೋನ್ ಸಂಭಾಷಣೆ

  ರಾತ್ರಿ 12ರ ನಂತರವೇ ಮಾಲಾಶ್ರೀ ಫೋನ್ ಸಂಭಾಷಣೆ

  ಉದಾಹರಣೆಗೆ ಮಾಲಾಶ್ರೀ ಅವರು ತನ್ನ ಸ್ನೇಹಿತರ ಜೊತೆ ಫೋನಿನಲ್ಲಿ ಮಾತನಾಡುವುದು ರಾತ್ರಿ ಹನ್ನೆರಡು ಕಳೆದ ನಂತರವೇ. ಅದನ್ನು ಸ್ವತಃ ಮಾಲಾಶ್ರೀ ಅವರ ಅತೀ ಹತ್ತಿರದ ಒಡನಾಡಿಗಳು ಕೋಟ್ಯಾಧಿಪತಿಯಲ್ಲಿ ಹಂಚಿಕೊಂಡಿದ್ದಾರೆ.

  ಮಾಲಾಶ್ರೀ ಬಗ್ಗೆ ಕಂಡು ಕೇಳರಿಯದ ಸ್ವಾರಸ್ಯಗಳು

  ಮಾಲಾಶ್ರೀ ಬಗ್ಗೆ ಕಂಡು ಕೇಳರಿಯದ ಸ್ವಾರಸ್ಯಗಳು

  ಜೊತೆಗೆ ಮಾಲಾಶ್ರೀ ಅವರ ಸಹೋದರಿ ಶುಭಶ್ರೀ ('ಚಿರಬಾಂಧವ್ಯ' ಚಿತ್ರದ ನಾಯಕಿ) ಮಾಲಾಶ್ರೀ ಅವರ ಬಗ್ಗೆ ಒಂದಷ್ಟು ನಾವು ನೀವು ಯಾರೂ ಕಂಡು ಕೇಳರಿಯದ ಸ್ವಾರಸ್ಯಕರ ಘಟನೆಗಳನ್ನು ಕೋಟ್ಯಾಧಿಪತಿಯಲ್ಲಿ ಹಂಚಿಕೊಂಡಿದ್ದಾರೆ.

  ಕೋಟ್ಯಾಧಿಪತಿಯಲ್ಲಿ ಮಾಲಾಶ್ರೀ ಎಷ್ಟು ಗೆಲ್ತಾರೆ?

  ಕೋಟ್ಯಾಧಿಪತಿಯಲ್ಲಿ ಮಾಲಾಶ್ರೀ ಎಷ್ಟು ಗೆಲ್ತಾರೆ?

  ಒಟ್ಟಾರೆ ಯುಗಾದಿಯಂದು ಅಪ್ಪೂ ಜೊತೆ ಕೋಟ್ಯಾಧಿಪತಿಯ ಹಾಟ್ ಸೀಟ್ ನಲ್ಲಿ ಕೂತು ಮಾಲಾಶ್ರೀ ಹಬ್ಬ ಮಾಡಲಿದ್ದಾರೆ. ರಾಜ್ ಕುಮಾರ್ ಸಂಸ್ಥೆಯ 'ನಂಜುಂಡಿ ಕಲ್ಯಾಣ' ಚಿತ್ರ ಮೂಲಕ ಚಿತ್ರೋದ್ಯಮ ಪ್ರವೇಶಿಸಿ ವರ್ಷಾನುವರ್ಷ ಮಿಂಚಿದ, ಮೆರೆದ, ಈಗಲೂ ದಕ್ಷ ನಾಯಕಿಯಾಗಿ ವೀರ-ವನಿತೆ ಎನಿಸಿಕೊಂಡಿರುವ ಮಾಲಾಶ್ರೀ ಕೋಟ್ಯಾಧಿಪತಿ ಹಾಟ್ ಸೀಟ್ ನಲ್ಲಿ ಕೂತು ಎಷ್ಟು ಗೆಲ್ತಾರೆ? ಉತ್ತರ ಯುಗಾದಿ ಹಬ್ಬದಂದು ರಾತ್ರಿ 8ಕ್ಕೆ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿ ಸಂಚಿಕೆಯಲ್ಲಷ್ಟೇ ಸಿಗಲು ಸಾಧ್ಯ!

  English summary
  Kannada celebrity couple Malashri and Ramu to appear in Power Star Puneet Rajkumar's reality show Kannadada Kotyadhipati season 2 on 11th April, 2013 at 8 pm. This show will be aired on Suvarna Channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X