»   » ಕನ್ನಡದ ಕೋಟ್ಯಾಧಿಪತಿ ಜೊತೆ ಅಸಲಿ ಕೋಟ್ಯಾಧಿಪತಿ

ಕನ್ನಡದ ಕೋಟ್ಯಾಧಿಪತಿ ಜೊತೆ ಅಸಲಿ ಕೋಟ್ಯಾಧಿಪತಿ

By: ಉದಯರವಿ
Subscribe to Filmibeat Kannada
ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ 'ಕನ್ನಡದ ಕೋಟ್ಯಾಧಿಪತಿ'ಗೆ ಅಸಲಿ ಕೋಟ್ಯಾಧಿಪತಿ ನಿರ್ಮಾಪಕ ರಾಮು ಎಂಟ್ರಿ ಕೊಡುತ್ತಿದ್ದಾರೆ. ಅವರ ಮುದ್ದಿನ ಪತ್ನಿ ಮಾಲಾಶ್ರೀ ಜೊತೆಗೆ ಎಂಬುದು ವಿಶೇಷ.

ಈಗಾಗಲೇ ಅದೆಷ್ಟೋ ಕೋಟಿಗಳನ್ನು ಬಂಡವಾಳವಾಗಿ ಹೂಡಿ ಚಿತ್ರಗಳನ್ನು ನಿರ್ಮಿಸಿ ಗೆದ್ದಿರುವ ರಾಮು ದಂಪತಿಗಳು ಒಂದು ಕೋಟಿ ಯಾವ ಲೆಕ್ಕ. ಆದರೂ ಈ ಶೋನಲ್ಲಿ ಭಾಗವಹಿಸುವ ಮೂಲಕ ಕೋಟಿನೇ ಗೆಲ್ಲುತ್ತಾರೋ, ಲಕ್ಷಾನೇ ಗೆಲ್ಲುತ್ತಾರೋ ಕಾದುನೋಡಬೇಕು.

ರಾಮು ದಂಪತಿಗಳ ಜೊತೆಗಿನ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಶೀಘ್ರದಲ್ಲೇ ಪ್ರಸಾರವಾಗಲಿದೆ. ಪುನೀತ್ ಏನೇನು ಪ್ರಶ್ನೆ ಕೇಳುತ್ತಾರೋ, ಮಾಲಾಶ್ರೀ ರಾಮು ಅವರು ಏನು ಉತ್ತರ ಕೊಡುತ್ತಾರೋ ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇದೆ.

ಶೋನಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ ಬಿಡುಗಡೆಯಾಗುತ್ತಿರುವ 'ವೀರ' ಚಿತ್ರದ ಪ್ರಚಾರವೂ ನಡೆಯಲಿದೆ. ಈ ಮೂಲಕ ರಾಮು ಅವರು ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುತ್ತಿದ್ದಾರೆ. ರಾಮು ದಂಪತಿಗಳ ಜೊತೆಗಿನ ಕಾರ್ಯಕ್ರಮ ಶೀಘ್ರದಲ್ಲೇ ಪ್ರಸಾರವಾಗಲಿದೆ ಎನ್ನುತ್ತದೆ ವಾಹಿನಿ. ಗುರುವಾರ (ಮಾ.21) ಎಂಟನೇ ಸಂಚಿಕೆ ಪ್ರಸಾರವಾಗುತ್ತಿದೆ. ಮೊದಲ ಆವೃತ್ತಿಗೆ ಹೋಲಿಸಿದರೆ ಪುನೀತ್ ಇಲ್ಲಿ ಸಾಕಷ್ಟು ಬದಲಾಗಿರುವ ಅಂಶಗಳನ್ನು ಕಾಣಬಹುದು.

English summary
Kannada celebrity couple Malashri and Ramu to appear in Puneet Rajkumar's reality show Kannadada Kotyadhipati 2 soon. This show will be aired on Suvarna Channel.
Please Wait while comments are loading...