For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಬಿಗ್‌ಬಾಸ್ 3 ಪ್ರಸಾರ ದಿನಾಂಕ, ಸಮಯ ಪ್ರಕಟ

  |

  ಕನ್ನಡದ ಬಿಗ್‌ಬಾಸ್ ಸೀಸನ್ 8 ಘೋಷಣೆ ಆಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ಪ್ರಸಾರ ಆಗುವ ಬಿಗ್‌ಬಾಸ್ ಕಾರ್ಯಕ್ರಮ ಆರಂಭವಾಗಲಿದೆ. ಆದರೆ ಈ ಮುನ್ನವೇ ಮಲಯಾಳಂ ಬಿಗ್‌ಬಾಸ್ ಆರಂಭವಾಗುತ್ತಿದೆ.

  ಮಲಯಾಳಂ ನ ಸ್ಟಾರ್ ನಟ ಮೋಹನ್‌ಲಾಲ್ ನಡೆಸಿಕೊಡಲಿರುವ ಮಲಯಾಳಂ ಬಿಗ್‌ಬಾಸ್ ಸೀಸನ್ 3 ಫೆಬ್ರವರಿ 14 ರ ಪ್ರೇಮಿಗಲ ದಿನದಂದು ರಾತ್ರಿ 9:30 ಕ್ಕೆ ಪ್ರಸಾರ ಆಗಲಿದೆ.

  ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿಯೇ ಮಲಯಾಳಂ ಬಿಗ್‌ಬಾಸ್ 2 ಆರಂಭವಾಗಿತ್ತು, ಆದರೆ ಕೊರೊನಾ ಕಾರಣದಿಂದಾಗಿ ಶೋ ಅಂತ್ಯವಾಗುವ ಮುನ್ನವೇ ರದ್ದು ಮಾಡಿ ಬಿಗ್‌ಬಾಸ್ ಮನೆಯಲ್ಲಿ ಉಳಿದಿದ್ದ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿತ್ತು.

  ಇದೀಗ ಮತ್ತೆ ಬಿಗ್‌ಬಾಸ್ ಆರಂಭವಾಗಿದ್ದು, ಕಳೆದ ಬಿಗ್‌ಬಾಸ್ ನಲ್ಲಿ ಅರ್ಧಕ್ಕೆ ಮನೆಯಿಂದ ಹೊರಗೆ ಕಳುಹಿಸಿದ ಸ್ಪರ್ಧೆಗಳನ್ನೇ ಇಲ್ಲಿ ಮತ್ತೆ ಮರಳಿ ಕರೆಸುತ್ತಾರೆಯೇ ಅಥವಾ ಹೊಸಬರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.

  ಬಿಗ್‌ಬಾಸ್ 2 ಗೆ ನಿರ್ಮಾಣ ಮಾಡಿದ್ದ ಮನೆಯಲ್ಲಿಯೇ ಬಿಗ್‌ಬಾಸ್ 3 ಸ್ಪರ್ಧಿಗಳೂ ಇರಲಿದ್ದಾರೆ. ಹಳೆಯ ಮನೆಯನ್ನೇ ತುಸು ಬದಲಾವಣೆ ಮಾಡಿ ಬಳಸಿಕೊಳ್ಳಲಾಗುತ್ತಿದೆ. ಈ ಬಾರಿ ಬಿಗ್‌ಬಾಸ್‌ ಗೆ ಒಬ್ಬೊಬ್ಬರೇ ಸ್ಪರ್ಧಿಗಳು ಆಗಮಿಸುವ ಬದಲಿಗೆ ಗುಂಪಿನಲ್ಲಿ ಆಗಮಿಸುತ್ತಾರೆ ಎನ್ನಲಾಗಿದೆ.

  'ಕಿಸ್‌ ಆಫ್ ಲವ್' ಕಾರ್ಯಕ್ರಮ ಮಾಡಿ ಬಂಧನಕ್ಕೂ ಒಳಗಾಗಿದ್ದ ರಶ್ಮಿ ನಾಯರ್ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ. ಉದ್ಯಮಿ ಬಾಬಿ ಚೆಮ್ಮನೂರ್, ನಟಿ ಭಾಗ್ಯಲಕ್ಷ್ಮಿ ಇನ್ನೂ ಹಲವರು ಈ ಬಾರಿ ಬಿಗ್‌ಬಾಸ್ ನಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ.

  English summary
  Malayalam Bigg Boss season 3 will air on February 14. Actor Mohanlal will host the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X