For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲೂ ಬಂತು ಮಮ್ಮುಟ್ಟಿ ಆಕ್ಷನ್ ಥ್ರಿಲ್ಲರ್ 'ಶೈಲಾಕ್​'

  |

  2 ವರ್ಷಗಳ ಹಿಂದೆ ಮಮ್ಮೂಟ್ಟಿ ನಟನೆಯ ಮಲಯಾಳಂನ 'ಶೈಲಾಕ್​' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 12 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ 80 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೇ ಚಿತ್ರ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲೂ ಸ್ಟ್ರೀಮಿಂಗ್ ಆಗಿತ್ತು. ವಿಶೇಷ ಅಂದರೆ 'ಶೈಲಾಕ್​' ಸಿನಿಮಾ ಈಗ ಕನ್ನಡಕ್ಕೂ ಡಬ್ ಆಗಿ ಅಮೇಜಾನ್​ ಪ್ರೈಮ್‌ನಲ್ಲಿ ಲಭ್ಯವಿದೆ.

  ಗುಡ್​ವಿಲ್​ ಎಂಟರ್​ಟೈನ್​ಮೆಂಟ್ಸ್ ಬ್ಯಾನರ್ ಅಡಿ ಜೋಬಿ ಜಾರ್ಜ್​ ನಿರ್ಮಿಸಿ, ಅಜಯ್​ ವಾಸುದೇವ್ ನಿರ್ದೇಶಿಸಿರುವ 'ಶೈಲಾಕ್​' ಚಿತ್ರ ಸೂಪರ್ ಹಿಟ್ ಆಗಿದೆ. ಈ ಚಿತ್ರವು ತೆಲುಗು ಮತ್ತು ತಮಿಳಿಗೆ ಡಬ್​ ಆಗಿ ಆಹಾ ಓಟಿಟಿಯಲ್ಲಿ ಸ್ಟ್ರೀಮ್​ ಆಗುತ್ತಿದೆ. ಇದೀಗ ಚಿತ್ರವು ಕನ್ನಡಕ್ಕೆ ಡಬ್​ ಆಗಿದ್ದು, ಅಮೇಜಾನ್​ ಪ್ರೈಮ್‌ನಲ್ಲಿ ನೋಡಬಹುದಾಗಿದೆ. ಓಟಿಟಿ ಜಮಾನ ಶುರುವಾದ ಮೇಲೆ ದೊಡ್ಡ ದೊಡ್ಡ ಸಿನಿಮಾಗಳು 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಕೆಲ ಸಿನಿಮಾಗಳನ್ನ ಡಬ್ ಮಾಡಿ ಕೊನೆ ಪಕ್ಷ ಓಟಿಟಿಯಲ್ಲಿ ರಿಲೀಸ್ ಮಾಡುವ ಪ್ರಯತ್ನಗಳು ನಡೀತಿದೆ.

  ಮಲಯಾಳಂ ಚಿತ್ರ ನಿರ್ದೇಶಕ ಅಶೋಕನ್ ಇನ್ನಿಲ್ಲಮಲಯಾಳಂ ಚಿತ್ರ ನಿರ್ದೇಶಕ ಅಶೋಕನ್ ಇನ್ನಿಲ್ಲ

  'ಶೈಲಾಕ್​' ಆಕ್ಷನ್​ ಥ್ರಿಲ್ಲರ್​ ಸಿನಿಮಾ ಆಗಿದ್ದು, ಮಮ್ಮೂಟ್ಟಿ ಅವರು ಬಾಸ್ ಎಂಬ ಫೈನಾನ್ಶಿಯರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಜಾನರ್‌ಗಳಿಗೆ ಸಲ್ಲುವಂತಹ ಸಿನಿಮಾ ಇದು. ಆರಂಭದಲ್ಲಿ ಕಾಮಿಡಿಯಿಂದ ಪ್ರಾರಂಭವಾಗಿ, ಥ್ರಿಲ್ಲರ್​ ಆಗಿ ಮುಂದುವರೆದು, ಸೇಡಿನ ಕಥೆಯಾಗಿ ಮುಗಿಯುತ್ತದೆ. ಮಾಸ್ ಪ್ರೇಕ್ಷಕರನ್ನು ಸಿನಿಮಾ ಬಹಳ ರಂಜಿಸಿತ್ತು. ಈ ಚಿತ್ರದಲ್ಲಿ ಮಮ್ಮೂಟ್ಟಿ ಜತೆಗೆ ರಾಜ್‌ಕಿರಣ್​, ಮೀನಾ, ಸಿದ್ದೀಖ್​, ಬಿಬಿನ್​ ಜಾರ್ಜ್​, ಬೈಜು ಸಂತೋಷ್​, ಕಲಾಭವನ್​ ಶಾಜೋನ್​ ಸೇರಿದಂತೆ ದೊಡ್ಡ ತಾರಾಗಣ ಇದೆ. ಗೋಪಿಸುಂದರ್​ ಸಂಗೀತ, ರೆನದಿವ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಚಿತ್ರ 'ಕುಬೇರನ್' ಹೆಸರಿನಲ್ಲಿ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿತ್ತು.

  Mammootty Starrer Shylock Kannada Dubbed Version now streaming on Prime

  ಈ ಹಿಂದೆ ಮಮ್ಮೂಟ್ಟಿ ನಟನೆಯ 'ಶಿಕಾರಿ' ಸಿನಿಮಾ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ ರಿಲೀಸ್ ಆಗಿತ್ತು. ಇತ್ತೀಚೆಗೆ 'ಮಿನ್ನಲ್ ಮರಳಿ' ಎನ್ನುವ ಮಲಯಾಳಂ ಸಿನಿಮಾ ಡಬ್ ಆಗಿ ಓಟಿಟಿಯಲ್ಲಿ ಸಕ್ಸಸ್‌ ಕಂಡಿತ್ತು. ಅದೇ ಹಾದಿಯಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಅವತರಣಿಕೆಯಲ್ಲಿ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ತರುವ ಪ್ರಯತ್ನ ನಡೀತಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮತ್ತಷ್ಟು ಮಲಯಾಳಂ ಸಿನಿಮಾಗಳು ಡಬ್ ಆಗಿ ಓಟಿಟಿ ಫ್ಲಾಟ್‌ಫಾರ್ಮ್‌ಗೆ ಬರಲಿದೆ.

  English summary
  Mammootty Starrer Shylock Kannada Dubbed Version now streaming on Prime.
  Tuesday, September 27, 2022, 13:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X