ಹೊಸ ರಿಯಾಲಿಟಿ ಶೋ ಮನೆ ಮುಂದೆ ಮಹಾಲಕ್ಷ್ಮಿ

ನೇರವಾಗಿ ವೀಕ್ಷಕರ ಮನೆಗೆ ಭೇಟಿ ನೀಡಿ ಅಲ್ಲಿಯೇ ಆಟಗಳನ್ನು ಆಡಿಸಿ ಬಹುಮಾನ ವಿತರಿಸುವ ಕಾರ್ಯಕ್ರಮ ಇದು. ಈ ಕಾರ್ಯಕ್ರಮದ ಮೂಲಕ ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಿಗೂ ಭೇಟಿ ನೀಡಿ ತಮ್ಮ ವೀಕ್ಷಕ ಬಳಗವನ್ನು ಮಾತನಾಡಿಸಲಿದೆ ಈಟಿವಿ ಕನ್ನಡ.
ಈಗಾಗಲೆ ವೀಕ್ಷಕರ ನೋಂದಾವಣಿ ಮುಗಿದಿದೆ. ಆಯ್ಕೆಯಾಗಿರುವ ವೀಕ್ಷಕರ ಮನೆಗೆ ಹೋಗಿ ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಗೆದ್ದವರಿಗೆ ಅಲ್ಲಿಯೇ ಬಹುಮಾನ ವಿತರಣೆ. ಇದು ವಾಹಿನಿಯ ಅಪರೂಪದ ಪ್ರಯೋಗ ಎಂದು ಈಟಿವಿ ವಾಹಿನಿ ಬಳಗ ತಿಳಿಸಿದೆ.
ಇಷ್ಟು ದಿನ ಸುವರ್ಣ ವಾಹಿನಿಯಲ್ಲಿ ಹೊಸ ಹೊಸ ರಿಯಾಲಿಟಿ ಶೋಗಳಿಗೆ ಶ್ರೀಕಾರ ಹಾಕಿರುವ ಅಕುಲ್ ಬಾಲಾಜಿ ಈಗ ಈಟಿವಿ ಬಳಗ ಸೇರಿದ್ದು ಈ ವಿಭಿನ್ನ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ.
ಜನವರಿ 12, 2013ರಿಂದ ಕಾರ್ಯಕ್ರಮ ಆರಂಭವಾಗಲಿದ್ದು ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ರಿಂದ 10 ಗಂಟೆಗೆ ಪ್ರಸಾರವಾಗಲಿದೆ. ಒಟ್ಟಿನಲ್ಲಿ ವಿಭಿನ್ನವಾಗಿರುವ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಈಟಿವಿ ವೀಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











